ರಾಜಕೋಟ್: ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ (ಎಸ್‌ಸಿಎ) ಕ್ರೀಡಾಂಗಣಕ್ಕೆ ಹಿರಿಯ ಆಡಳಿತಗಾರ ನಿರಂಜನ್ ಶಾ ಅವರ ಹೆಸರನ್ನು ಇಡಲು ನಿರ್ಧರಿಸಲಾಗಿದೆ. ಫೆ.15 ರಂದು ಖಂಡೇರಿಯಲ್ಲಿರುವ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಪಂದ್ಯದ ಮುನ್ನಾ ದಿನ, ಕ್ರೀಡಾಂಗಣಕ್ಕೆ ನಿರಂಜನ್ ಶಾ ಕ್ರೀಡಾಂಗಣ ಎಂದು ನಾಮಕರಣ ಮಾಡಲಾಗುವುದು ಎಂದು ಎಸ್‌ಸಿಎ ಮಾಧ್ಯಮ ಪ್ರಕಟಣೆ ತಿಳಿಸಿದೆ. ಹೊಸ ಹೆಸರಿನ ಕ್ರೀಡಾಂಗಣವನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಉದ್ಘಾಟಿಸಲಿದ್ದಾರೆ. 1960-1970ರ ದಶಕದಲ್ಲಿ ಸೌರಾಷ್ಟ್ರ ಪರ 12 ಪ್ರಥಮ […]