Friday, 1st December 2023

ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ ನಿಧನ

ಶ್ರೀನಗರ: ಅನಾರೋಗ್ಯದಿಂದ ಬಳಲುತ್ತಿದ್ದ ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ (91) ಬುಧವಾರ ರಾತ್ರಿ ಶ್ರೀನಗರದ ನಿವಾಸದಲ್ಲಿ ನಿಧನರಾದರು. 2013ರಿಂದ ಹೆಚ್ಚಾಗಿ ಗೃಹಬಂಧನದಲ್ಲಿಯೇ ಇದ್ದ ಅವರ ಆರೋಗ್ಯ ಮೂರು ವರ್ಷಗಳಿಂದ ಹದಗೆಟ್ಟಿತ್ತು. ಹಲವು ಬಾರಿ ಅವರ ಆರೋಗ್ಯದ ಬಗ್ಗೆ ವದಂತಿಗಳು ಹಬ್ಬಿ, ಕಣಿವೆಯಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿತ್ತು. ಮೂರು ದಶಕಗಳಿಗೂ ಹೆಚ್ಚಿನ ಕಾಲ ಜಮ್ಮು ಮತ್ತು ಕಾಶ್ಮೀರ ಪ್ರತ್ಯೇಕ ರಾಜ್ಯವಾಗಬೇಕು ಎಂದು ಹೋರಾಟ ನಡೆಸಿದ್ದರು. 1990ರಿಂದ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಚಳವಳಿ ಮುನ್ನಡೆಸಿದ್ದ ಗಿಲಾನಿ, ಹುರಿಯತ್​ನ ಆಜೀವ ಅಧ್ಯಕ್ಷರಾಗಿದ್ದರು. […]

ಮುಂದೆ ಓದಿ

error: Content is protected !!