ಸಿದ್ದರಾಮಯ್ಯ, ಮುಖ್ಯಮಂತ್ರಿ ಗಾಂಧಿ- ನೆಹರು, ವಿನೋಬಾಜಿ ಹಾಗೂ ಅವರ ಅಕ್ಕ ಮಹಾದೇವಿಯವರ ಪ್ರೇರಣೆಯಿಂದ ಸದಾ ಅಭಿವೃದ್ಧಿ- ಜನಹಿತದ ಚಿಂತನೆ ಮಾಡಿದ ಹೆಗಡೆಯವರು ತಮ್ಮ ರಾಜಕೀಯ ಜೀವನದ ಏಳು-ಬೀಳುಗಳನ್ನು ಸಮಚಿತ್ತದಿಂದ ಸ್ವೀಕರಿಸಿದರು. ಮೌಲ್ಯಾಧಾರಿತ ರಾಜಕಾರಣಿ ಎಂದೇ ಜನಜನಿತರಾದರು. ಅವರ ಒಡನಾಡಿಯಾಗಿ, ಅವರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುವ ಅವಕಾಶ ನನಗೆ ದೊರಕಿದ್ದು, ಮುಂದೆ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲು ಬುನಾದಿಯಾಗಿತ್ತು. ಅವರ ಜನ್ಮದಿನವಾದ ಇಂದು ಅವರ ನಡೆ-ನುಡಿಗಳನ್ನು ನಾವು ಹೆಮ್ಮೆಯಿಂದ ಹಾಗೂ ಕೃತಜ್ಞತೆ ಯಿಂದ ಸ್ಮರಿಸುವುದೇ ಅವರಿಗೆ ನೀಡುವ ನಿಜವಾದ ಗೌರವ. ಕರ್ನಾಟಕದ […]