ನವದೆಹಲಿ: ಲೋಕಸಭೆಯ ಸೆಕ್ರೆಟರಿ ಜನರಲ್ ಹುದ್ದೆಗೆ ಹಿರಿಯ ಐಎಎಸ್ ಅಧಿಕಾರಿ ಉತ್ಪಲ್ ಕುಮಾರ್ ಸಿಂಗ್ ರನ್ನು ನೇಮಕ ಮಾಡಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಆದೇಶ ಹೊರಡಿಸಿದ್ದಾರೆ. ಸಿಂಗ್ ಅವರು 1986ರ ಬ್ಯಾಚಿನ ಉತ್ತರಾಖಂಡ ಕೆಡರ್ನ ಐಎಎಸ್ ಅಧಿಕಾರಿಯಾಗಿದ್ದಾರೆ. ಲೋಕಸಭಾ ಸೆಕ್ರೆಟರಿ ಜನರಲ್ ಹುದ್ದೆ, ಕ್ಯಾಬಿನೆಟ್ ಸೆಕ್ರೆಟರಿ ಸ್ತರದ ಹುದ್ದೆಯಾಗಿದೆ. ಸಿಂಗ್ ಅವರ ಅವಧಿ ಡಿಸೆಂಬರ್ 1ರಿಂದ ಆರಂಭವಾಗಲಿದೆ. ಸ್ನೇಹಲತಾ ಶ್ರೀವಾಸ್ತವ ಅವರು ಲೋಕಸಭಾ ಸೆಕ್ರೆಟರಿ ಜನರಲ್ ಆಗಿದ್ದು, ಅವರಿಂದ ತೆರವಾಗುವ ಸ್ಥಾನವನ್ನು ಉತ್ಪಲ್ ಕುಮಾರ್ ತುಂಬಲಿದ್ದಾರೆ. ಪ್ರಸ್ತುತ ಉತ್ಪಲ್ […]