ಅವಲೋಕನ ವಿಕ್ರಮ ಜೋಶಿ ಮಾರ್ಚ್, ಏಪ್ರಿಲ್, ಮೇ ತಿಂಗಳ ಬೇಸಗೆಯ ಉರಿಬಿಸಿಲು. ಬೀದಿಯೆಲ್ಲ ಭಣ ಗುಡುತ್ತಿದೆ. ಓಡಾಡುವ ವಾಹನಗಳಿಲ್ಲ, ನಡೆದಾಡುವ ಮನುಷ್ಯರಿಲ್ಲ, ಕೂಗಿ ಕರೆಯುವ ರಸ್ತೆ ಬದಿಯ ಅಂಗಡಿಯವರಿಲ್ಲ. ಕಣ್ಣಿನ ದೃಷ್ಟಿ ಮುಟ್ಟುವ ತನಕ ಖಾಲಿ ಖಾಲಿಯಾದ ರಸ್ತೆ. ಅಲ್ಲಲ್ಲಿ ಬೀದಿ ನಾಯಿಗಳು ಅಡ್ಡಾಡುತ್ತಿವೆ. ದನಕರುಗಳು ನಿಂತು ಮೇಯುತ್ತಿವೆ. ಇದು ಕರೋನಾ ಮಹಾಮಾರಿಗೆ ಹೆದರಿ ಇಡೀ ದೇಶವೇ ಲಾಕ್ ಡೌನ್ ಆಗಿದ್ದ ಸಮಯ. ದೂರದಿಂದ ನಿಂತು ಮಾತನಾಡಲೂ ಜನರಿಗೆ ಹೆದರಿಕೆ. ಚಹಾ, ತಿಂಡಿ ಬಿಡಿ ಬಾಯಾರಿಕೆ ಯಾದರೆ […]