ಚೆನ್ನೈ: ನಟ, ರಾಜಕಾರಣಿ ವಿಜಯ್ ಅವರ ಪಕ್ಷದ ಧ್ವಜದ ವಿಚಾರವಾಗಿ ತಮಿಳುನಾಡು ಬಹುಜನ ಸಮಾಜವಾದಿ ಪಕ್ಷ (ಬಿಎಸ್‌ಪಿ) ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಹೊಸದಾಗಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ರಾಜಕೀಯ ಪಕ್ಷ ಘೋಷಿಸುವ ಮೂಲಕ ರಾಜ್ಯದಾದ್ಯಂತ ಸಂಚಲನ ಮೂಡಿಸಿರುವ ವಿಜಯ್, ಕಳೆದ ವಾರವಷ್ಟೇ ಧ್ವಜ ಅನಾವರಣ ಮಾಡಿದ್ದರು. ಧ್ವಜದಲ್ಲಿ ಆನೆಗಳನ್ನು ಬಳಸಿರುವುದರ ವಿರುದ್ಧ ತಮಿಳುನಾಡು ಬಿಎಸ್‌ಪಿ ಅಧ್ಯಕ್ಷ ಆನಂದ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ‘ಟಿವಿಕೆ ಪಕ್ಷವು ಎರಡು ಆನೆಗಳಿರುವ ಚಿಹ್ನೆಯನ್ನು ತನ್ನ ಧ್ವಜದಲ್ಲಿ ಬಳಸಿದೆ. […]