ಅಭಿಮತ ಇಂದುಧರ ಹಳೆಯಂಗಡಿ ಅದೊಂದು ಕಾಲವಿತ್ತು. ಒಲಿಂಪಿಕ್ಸ್ ಕೂಟದಲ್ಲಿ ಭಾರತಕ್ಕೆ ಒಂದು ಪದಕ ಬಂದರೂ ಸಂಭ್ರಮ. ಕನಿಷ್ಠ ಒಂದು ಕಂಚಿನ ಪದಕವಾದರೂ ಬರಲಿ ಎಂದು ಕ್ರೀಡಾ ತಂಡಕ್ಕೆ ಹಾರೈಸುತ್ತಿದ್ದರು. ಆದರೆ 2012ರ ಒಲಿಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು 6 ಪದಕಗಳನ್ನು ಗೆದ್ದಾಗ ದೇಶದಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಕೇವಲ 2 ಪದಕಗಳನ್ನು ಗೆದ್ದಿದ್ದರು. ಇದೇ ಕಾರಣಕ್ಕೆ ಭಾರತದಲ್ಲಿ ಕ್ರೀಡೆ ಎಂದರೆ ಕೇವಲ ಕ್ರಿಕೆಟ್, ಕಬಡ್ಡಿ, ಹಾಕಿ ಎಂದು ಹಲವರು ಟೀಕಿಸಿದ್ದೂ ಉಂಟು. […]