ನವದೆಹಲಿ: ಆಯಪಲ್ (Apple) ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿಮ್ ಕುಕ್ ವೇತನದಲ್ಲಿ 2023ನೇ ಸಾಲಿನಲ್ಲಿ ಶೇಕಡಾ 40ಕ್ಕೂ ಹೆಚ್ಚಿನ ಕಡಿತ ಮಾಡಲಾಗಿದೆ. ಕಂಪನಿಯು ಮಾರುಕಟ್ಟೆ ನಿಯಂತ್ರಕಕ್ಕೆ ಸಲ್ಲಿಸಿದ ವಿವರಗಳಿಂದ ಈ ಮಾಹಿತಿ ತಿಳಿದುಬಂದಿದೆ. ಆದರೆ, ಟಿಮ್ ಕುಕ್ ಅವರಿಗೆ ನೀಡುವ ಷೇರಿನ ಪಾಲನ್ನು ಕಂಪನಿ ಹೆಚ್ಚಿಸಲಿದೆ. 2022ರ ಸೆಪ್ಟೆಂಬರ್ಗೆ ಕೊನೆಗೊಂಡಂತೆ ಟಿಮ್ ಕುಕ್ ಅವರಿಗೆ ವಾರ್ಷಿಕ 99.4 ಕೋಟಿ ಡಾಲರ್ ವೇತನ ನೀಡಲಾಗಿತ್ತು. ಷೇರುದಾರರ ವಾರ್ಷಿಕ ಸಭೆಯ ಬಳಿಕ ಸಿಇಒ ವೇತನದಲ್ಲಿ ಕಡಿತ ಮಾಡುವ ನಿರ್ಧಾರಕ್ಕೆ ಬಂದಿದೆ. 2026ರ ಮೊದಲು ನಿವೃತ್ತಿಯಾಗುವುದಿದ್ದಲ್ಲಿ […]