ಸಿಡ್ನಿ: ಆಸ್ಟ್ರೇಲಿಯದ ಮಾಜಿ ನಾಯಕ ಟಿಮ್ ಪೈನ್ ಎಲ್ಲಾ ರೀತಿಯ ದೇಶೀಯ ಕ್ರಿಕೆಟ್‌ನಿಂದ ಶುಕ್ರವಾರ ನಿವೃತ್ತರಾದರು. ಹೋಬರ್ಟ್‌ನಲ್ಲಿ ನಡೆದ ಟ್ಯಾಸ್ಮೆನಿಯಾ ಹಾಗೂ ಕ್ವೀನ್ಸ್‌ಲ್ಯಾಂಡ್ ನಡುವಿನ ಶೆಫೀಲ್ಡ್ ಶೀಲ್ಡ್ ಪಂದ್ಯ ಡ್ರಾನಲ್ಲಿ ಕೊನೆಗೊಂಡ ನಂತರ ಪೈನ್ ಅವರಿಗೆ ತಂಡದ ಸಹ ಆಟಗಾರರು ಗೌರವ ವಂದನೆ ನೀಡಿದಾಗ ಪೈನ್ ಭಾವುಕರಾದರು. ಶೆಫೀಲ್ಡ್ ಶೀಲ್ಡ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಟ್ಯಾಸ್ಮೆನಿಯಾ ಪರ ಟಿಮ್ ಪೈನ್ 42 (62 ಎಸೆತ) ರನ್ ಗಳಿಸಿದರು. ಆದರೆ ಅವರು ಎರಡನೇ ಇನಿಂಗ್ಸ್‌ನಲ್ಲಿ 3 ರನ್‌ಗಳಿಗೆ ಅಜೇಯ ರಾಗಿದ್ದರು. […]