ಅಗರ್ತಲಾ: ಅಗರ್ತಲಾದಿಂದ ಬಾಂಗ್ಲಾದೇಶದ ಮೂಲಕ ಕೋಲ್ಕತ್ತಾಗೆ ರೈಲು ಸೇವೆಯನ್ನು ಆರಂಭವಾಗಲಿದೆ ಎಂದು ತ್ರಿಪುರದ ಮುಖ್ಯಮಂತ್ರಿ ಮಾಣಿಕ್ ಸಹಾ ಹೇಳಿದ್ದಾರೆ. ಅಗರ್ತಲಾ ರೈಲು ನಿಲ್ದಾಣದಲ್ಲಿ ನಡೆದ ಅಗರ್ತಲಾ-ದಿಯೋಘರ್ ನಡುವಿನ ಎಕ್ಸ್‍ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿ ಮಾತನಾಡಿದರು. ರೈಲು ಸಂಪರ್ಕದಿಂದಾಗಿ ರಾಜ್ಯದಲ್ಲಿ ಅಬಿವೃದ್ದಿಗೆ ಮತ್ತಷ್ಟು ಉತ್ತೇಜನ ಸಿಗಲಿದೆ ಎಂದು ಮುಖ್ಯಮಂತ್ರಿ ಸಹಾ ಹೇಳಿದ್ದಾರೆ. ಅಗರ್ತಲಾದಿಂದ ಕೋಲ್ಕತ್ತಾಗೆ ಸಂಪರ್ಕ ಕಲ್ಪಿಸುವ ಉದ್ದೇಶಿತ ರೈಲು ನೆರೆ ರಾಷ್ಟ್ರ ಬಾಂಗ್ಲಾದೇಶದ ಗಂಗಾಸಾಗರ ಮೂಲಕ ಸಂಪರ್ಕವಿದ್ದು ಇದರ ಪ್ರಾಯೋಗಿಕ ಚಾಲನೆಯನ್ನು ಈಗಾಗಲೇ ಯಶಸ್ವಿಯಾಗಿ ನಡೆಸಲಾಗಿದೆ […]