ಢಾಕಾ: ಬಾಂಗ್ಲಾದೇಶ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶನಿವಾರ ಸತ್ಕಿರ ಜಿಲ್ಲೆಯ ಈಶ್ವರಿಪುರದಲ್ಲಿರುವ ಜೆಶೊರೇಶ್ವರಿ ಕಾಳಿ ದೇವಾ ಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಪೂಜೆ ಸಲ್ಲಿಸಿದ ಪ್ರಧಾನಿ ಕಾಳಿ ದೇವತೆಯ ಮೂರ್ತಿಗೆ ಕೈಯಿಂದ ಮಾಡಿದ ಮುಕುಟ ಧರಿಸಿದರು. ಹೊರಗೆ ಚಿನ್ನದ ಕವಚವಿರುವ ಚಿನ್ನದ ಮುಕುಟ ಇದಾಗಿದ್ದು ಭಾರತದ ಸಾಂಪ್ರದಾಯಿಕ ಕಲಾವಿದರು ತಯಾರಿಸಲು ಮೂರು ವಾರ ತೆಗೆದುಕೊಂಡಿದ್ದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಪ್ರಧಾನಿ, ಕಾಳಿ ಮಾತೆಯ ಮುಂದೆ ಪ್ರಾರ್ಥನೆ ಸಲ್ಲಿಸುವ ಅವಕಾಶ ಇಂದು ಸಿಕ್ಕಿತು. […]