ನಾರ್ತ್ ಸೌಂಡ್ (ಆಂಟಿಗಾ): ಅಂಡರ್-19 ಏಕದಿನ ವಿಶ್ವಕಪ್ ಪಂದ್ಯಾವಳಿಯ ಅತ್ಯಂತ ಯಶಸ್ವಿ ತಂಡವಾಗಿರುವ ಭಾರತ ಶನಿವಾರ ಮತ್ತೊಂದು ಎತ್ತರಕ್ಕೆ ತಲುಪಲು ಸಜ್ಜಾಗಿದೆ. ಕೆರಿಬಿಯನ್ ದ್ವೀಪದ ನಾರ್ತ್ ಸೌಂಡ್ನ “ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂ’ನಲ್ಲಿ ಐದನೇ ಕಿರೀಟ ಏರಿಸಿಕೊಳ್ಳುವ ಯೋಜನೆಯಲ್ಲಿದೆ. ನಾಯಕ ಧುಲ್ ಹಾಗೂ ಉಪನಾಯಕ ರಶೀದ್ ಸೇರಿದಂತೆ ತಂಡದ ಬಹಳಷ್ಟು ಮಂದಿಗೆ ಕೋವಿಡ್ ಸೋಂಕು ತಗುಲಿದರೂ ಧೈರ್ಯಗುಂದದ ಭಾರತ ದಿಟ್ಟ ಹೋರಾಟ ನಡೆಸಿ ಗೆದ್ದು ಬಂದಿತ್ತು. ತೋರ್ಪ ಡಿಸಿದ ಬ್ಯಾಟಿಂಗ್ ವೈಭವವನ್ನು ಮರೆಯುವಂತಿಲ್ಲ. ಆರಂಭಿಕರಾದ ಹರ್ನೂರ್ ಸಿಂಗ್ […]