ವಾಷಿಂಗ್ಟನ್: ವ್ಯಕ್ತಿಯೊಬ್ಬ ಬ್ಯಾರಿಕೇಡ್ ಮುರಿದು ಕಾರು ನುಗ್ಗಿಸಿದ ಪರಿಣಾಮ ಓರ್ವ ಪೊಲೀಸ್ ಅಧಿಕಾರಿ ಮೃತಪಟ್ಟು ಇಬ್ಬರು ಗಾಯ ಗೊಂಡಿದ್ದಾರೆ. ಗುಂಡಿನ ದಾಳಿಯಲ್ಲಿ ವ್ಯಕ್ತಿ ಹತ್ಯೆಯಾಗಿದ್ದಾನೆ. ಶುಕ್ರವಾರ ಕಾರು ಚಾಲಕನು ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಗುರಿಯಾಗಿಸಿ ಬ್ಯಾರಿಕೇಡ್ ಮುರಿದು ಕೊಂಡು ಯುಎಸ್ ಕಾಪಿಟಲ್ ಕಾಂಪ್ಲೆಕ್ಸ್ನತ್ತ ವೇಗವಾಗಿ ಚಲಾಯಿಸಿದ್ದಾನೆ. ವ್ಯಕ್ತಿಗೆ ಶೂಟ್ ಮಾಡಲಾಗಿದ್ದು, ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ ನೀಲಿ ಸೆಡಾನ್ ಕಾರು ಬ್ಯಾರಿಕೇಡ್ ಹೊಡೆದುರುಳಿಸಿ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಡಿಕ್ಕಿ ಹೊಡೆದಿತ್ತು. ಮೃತ ಪೊಲೀಸ್ ಅಧಿಕಾರಿ ಬಿಲ್ಲಿ […]