ವಿಜಯಪುರ ಜಿಲ್ಲೆಯ ಲಚ್ಯಾಣ ಗ್ರಾಮದಲ್ಲಿ ಕೊಳವೆಬಾವಿಗೆ ಬಿದ್ದಿದ್ದ ಸಾತ್ವಿಕ್ ಎಂಬ ಪುಟ್ಟ ಮಗುವನ್ನು ರಕ್ಷಿಸುವಲ್ಲಿ ಕಾರ್ಯಾಚರಣಾ ತಂಡಗಳು ಯಶಸ್ವಿಯಾಗಿದ್ದು ಸಮಾಧಾನಕರ ಸಂಗತಿ. ಬೆಳಗಾವಿ, ಕಲಬುರ್ಗಿಯಿಂದ ಬಂದಿದ್ದ ಎಸ್‌ಡಿಆರ್ ಎಫ್ ಮತ್ತು ಹೈದರಾಬಾದ್‌ನಿಂದ ಬಂದಿದ್ದ ಎನ್‌ಡಿಆರ್‌ಎಫ್ ತಂಡಗಳು ಸತತ ೨೦ ಗಂಟೆಗಳ ಕಾರ್ಯಾಚರಣೆ ನಡೆಸಿ ಕಂದನನ್ನು ಸುರಕ್ಷಿತವಾಗಿ ಹೊರಸೆಳೆದಿದ್ದು ಶ್ಲಾಘನೀಯ. ಈ ತಂಡದವರ ಪರಿಶ್ರಮ ಮತ್ತು ಬದ್ಧತೆಗೊಂದು ಸಲಾಂ ಹೇಳಲೇಬೇಕು. ಆದರೆ ಇಲ್ಲಿ ವ್ಯಥೆಯುಂಟುಮಾಡುವುದು, ಕೆಲವರು ತೋರುವ ನಿರ್ಲಕ್ಷ್ಯ. ಕೊಳವೆಬಾವಿ ತೋಡಿಸಲು ಮುಂದಾಗುವವರು, ಆ ನಿಟ್ಟಿನಲ್ಲಿ ತೋರುವ ಉತ್ಸಾಹವನ್ನು […]