ಬೆಂಗಳೂರು: ಹಿರಿಯ ನಟ ವಿನೋದ್ ರಾಜ್ ಇಂದು ತಮ್ಮ 57ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 1987ರಲ್ಲಿ ತೆರೆ ಕಂಡ ‘ಡ್ಯಾನ್ಸ್ ರಾಜ ಡ್ಯಾನ್ಸ್’ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ತಮ್ಮ ನೃತ್ಯದ ಮೂಲಕವೇ ಗಮನ ಸೆಳೆದರು. ಬಳಿಕ ‘ಶ್ರೀ ವೆಂಕಟೇಶ್ವರ ಮಹಿಮೆ’ ‘ಕೃಷ್ಣ ನೀ ಕುಣಿದಾಗ’ ‘ ಕಾಲೇಜ್ ಹೀರೋ ‘ ಹೀಗೆ ವರ್ಷಕ್ಕೆ ಒಂದೊಂದು ಸಿನಿಮಾಗಳಲ್ಲಿ ತೆರೆ ಹಂಚಿ ಕೊಂಡರು. ನಾಯಕನಟನಾಗಿ ಹಾಗೂ ಪೋಷಕ ಪಾತ್ರಗಳಲ್ಲಿ ಅಭಿನಯಿಸಿರುವ ಇವರು ‘ಕನ್ನಡದ ಕಂದ’ ‘ಶುಕ್ರ’ ಸೇರಿದಂತ […]