ಹೈದರಾಬಾದ್: ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಸಮವಸ್ತ್ರಕ್ಕಾಗಿ ಪುರುಷ ಟೈಲರ್ಗಳು ಮಹಿಳಾ ಪೊಲೀಸ್ ಸಿಬ್ಬಂದಿಯ ಅಳತೆ ತೆಗೆದು ಕೊಳ್ಳುತ್ತಿರುವ ಚಿತ್ರಗಳು ಮತ್ತು ವಿಡಿಯೊಗಳು ಭಾರೀ ವಿವಾದಕ್ಕೆ ಎಡೆ ಮಾಡಿವೆ. ಅಳತೆ ತೆಗೆದುಕೊಳ್ಳಲು ಪುರುಷ ಟೈಲರ್ಗಳನ್ನು ನಿಯೋಜಿಸಿದ್ದನ್ನು ಗಮನಿಸಿದ ಮಹಿಳಾ ಅಧಿಕಾರಿಗಳು ಇದಕ್ಕೆ ಆಕ್ಷೇಪದ ಜೊತೆ ಆತಂಕ ವ್ಯಕ್ತಪಡಿಸಿ ದರು. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ, ಪೊಲೀಸ್ ಅಧೀಕ್ಷಕ ವಿಜಯ ರಾವ್ ಅವರು ಮಧ್ಯಪ್ರವೇಶಿಸಿ ಪುರುಷ ಟೈಲರ್ ಗಳ ತಂಡವನ್ನು ಬದಲಾಯಿಸಿದರು. ಘಟನೆಯನ್ನು ಬಗೆಹರಿಸಲು ಹೆಚ್ಚುವರಿ ಎಸ್ಪಿ ವೆಂಕಟರತ್ನಂ ಅವರನ್ನ ನಿಯೋಜಿಸಲಾಯಿತು. […]