Saturday, 21st May 2022

ಭ್ರಷ್ಟಾಚಾರ ಮಾಡಿ, ಜೈಲಿಗೆ ಹೋಗಿ, ಪ್ರಮೋಷನ್ ಸಿಗುತ್ತೆ: ಸಿ.ಟಿ.ರವಿ ವ್ಯಂಗ್ಯ

ಚಿಕ್ಕಮಗಳೂರು: ಕಾಂಗ್ರೆಸ್‍ನ ಲ್ಲಿ ಪ್ರಮೋಷನ್ ಸಿಗಬೇಕೆಂದರೆ ಭ್ರಷ್ಟಾಚಾರ ಮಾಡಬೇಕು, ಜೈಲಿಗೆ ಹೋಗಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು.

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿನಯ್ ಕುಲಕರ್ಣಿ ಈಗ ನಿರಪರಾಧಿಯೂ ಅಲ್ಲ, ಅಪರಾಧಿಯೂ ಅಲ್ಲ, ಅವರು ಆಪಾದಿತ. ಭ್ರಷ್ಟಾಚಾರದ ಕಾಂಗ್ರೆಸ್‍ನ ರಾಜಕೀಯ ವ್ಯವಸ್ಥೆಯ ಒಂದು ಭಾಗ. ಅಲ್ಲಿ ಗುಂಡಾಗಿರಿ ಪ್ರಮೋಷನ್‍ಗೆ ಇರುವ ಒಂದು ಮಾದರಿ ಎಂದರು.

ಡಿ.ಕೆ.ಶಿವಕುಮಾರ್ ಅವರು ಬೆಳೆದ ಬಂದ ರೀತಿಯಲ್ಲೇ ಆಲೋಚನೆ ಮಾಡುತ್ತಿದ್ದಾರೆ. ಹಿಂದೆ ರಾಜೀವ್ ಗಾಂಧಿ ಅವರು ತನ್ನ ಮೇಲೆ ಗೂಂಡಾ ಅಂತ ಬಂದಾಗ ಗೂಂಡಾಗಳಿಗೆ ನಾವು ವಿಶೇಷವಾದ ಆದ್ಯತೆ ಕೊಡಬೇಕೆಂದು ಅವರೇ ಹೇಳಿದ್ದಾರೆ. ಅದನ್ನ ಅವರೇ ಒಪ್ಪಿದ್ದಾರೆ, ಮುಂದೆ ಜನ ಕಾಂಗ್ರೆಸ್ ಬಗ್ಗೆ ಎಚ್ಚರ ವಹಿಸಬೇಕಿದೆ. ಉಳಿದವರು ಕಾಂಗ್ರೆಸ್ ಬಗ್ಗೆ ಯೋಚನೆ ಮಾಡಬೇಕಾಗಿದೆ ಎಂದು ಸಿ.ಟಿ.ರವಿ ಹೇಳಿದರು.