Friday, 7th May 2021

ಟ್ಯಾಲೆಂಟ್ ಸ್ಪ್ರಿಂಟ್ ಎನ್‌ಎಸ್‌ಇ ಗ್ರೂಪ್ ಕಂಪನಿ 3ನೇ ಆವೃತ್ತಿ ಘೋಷಣೆ

ಬೆಂಗಳೂರು: ಪ್ರಮುಖ ಇಡಿ ಟೆಕ್ ವೇದಿಕೆಯಾದ ಟ್ಯಾಲೆಂಟ್ ಸ್ಪ್ರಿಂಟ್ ಎನ್‌ಎಸ್‌ಇ ಗ್ರೂಪ್ ಕಂಪನಿ ಇಂದು ಗೂಗಲ್‌ನ ಬೆಂಬಲದೊಂದಿಗೆ ಮುಂಚೂಣಿ ಮಹಿಳಾ ಎಂಜಿನಿಯರ್‌ಗಳ ಕಾರ್ಯಕ್ರಮದ (ಡಬ್ಲ್ಯುಇ) ಮೂರನೇ ಆವೃತ್ತಿಯನ್ನು ಘೋಷಿಸಿದೆ.

ಟ್ಯಾಲೆಂಟ್ ಸ್ಪ್ರಿಂಟ್‌ನ ಡಬ್ಲ್ಯುಇ ಕಾರ್ಯಕ್ರವ ಟೆಕ್ ಉದ್ಯಮದಲ್ಲಿ ಕಂಡುಬರುವ ಲಿಂಗ ಅಸಮಾನತೆ ಪರಿಹರಿಸಲು 2019ರಲ್ಲಿ ಆರಂಭವಾಯಿತು. ಹಿಂದಿನ ಕಾರ್ಯಕ್ರಮಗಳಿಗೆ ಉದ್ಯಮ ಹೆಚ್ಚು ಬೆಂಬಲ ನೀಡಿರುವುದರಿಂದ ಈ ಬಾರಿ 500 ಸಹಭಾಗಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಭಾರತದಾದ್ಯಂತ ಪ್ರಥಮ ವರ್ಷದ ಮಹಿಳಾ ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಗುರಿಯಾಗಿರಿಸಿ ಕೊಂಡು ಕಾರ್ಯಕ್ರಮ ಆಯೋಜಿಸಲಾಗಿದ್ದು, ಮೇ 2021ರಿಂದ ಪ್ರಾರಂಭವಾಗಲಿದೆ.

ಕಂಪ್ಯೂಟಿಂಗ್‌ನ ಆರಂಭಿಕ ದಿನಗಳಲ್ಲಿ ಮಹಿಳೆಯರು ಹೆಚ್ಚು ಮುಂಚೂಣಿಯಲ್ಲಿದ್ದರು ಎಂಬುದು ವ್ಯಾಪಕವಾಗಿ ತಿಳಿದಿದೆ. ಲೇಡಿ ಅದಾ ಲೊವೆಲೆಸ್ ಮತ್ತು ಅಡ್ಮಿರಲ್ ಗ್ರೇಸ್ ಹಾಪರ್ ಈ ಇಬ್ಬರೂ ಮಹಿಳೆಯರನ್ನು ಕ್ರಮವಾಗಿ ವಿಶ್ವದ ಮೊದಲ ಕಂಪ್ಯೂ ಟರ್ ಪ್ರೋಗ್ರಾಮರ್ ಮತ್ತು ಸಾಫ್ಟ್ವೇರ್ ಪರೀಕ್ಷಕರು ಎಂದು ಪರಿಗಣಿಸಲಾಗುತ್ತದೆ.

ಮೊದಲ ಎರಡು ಆವೃತ್ತಿಗೆ 27,000 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ 220 ಸ್ಪರ್ಧಿಗಳನ್ನು ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ. ಇಲ್ಲಿಯವರೆಗೆ, ಗೂಗಲ್, ಅಮೆಜಾನ್, ಫ್ಲಿಪ್‌ಕಾರ್ಟ್, ಮೈಕ್ರೋಸಾಫ್ಟ್‌, ಗೋಲ್ಡ್ಮನ್ ಸ್ಯಾಚ್ಸ್‌‌, ಅಕ್ಸೆಂಚರ್, ಅಡೋಬ್, ಕ್ಯಾಪ್‌ಜೆಮಿನಿ, ಒರಾಕಲ್, ಗೊಜೆಕ್, ಮ್ಯಾಥ್‌ವರ್ಕ್ಸ್, ಮತ್ತು ಇತರ 50ಕ್ಕೂ ಹೆಚ್ಚು ಪ್ರಮುಖ ಕಂಪನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಪ್ರತಿಷ್ಠಿತ ಇಂಟರ್ನ್‌ಶಿಪ್ ಅಥವಾ ಉದ್ಯೋಗ ಕೊಡುಗೆಗಳನ್ನು ಪ್ರವೇಶ ಮಟ್ಟದ ಎಂಜಿನಿಯರ್‌ಗಳಿಗೆ ಮಾರುಕಟ್ಟೆ ಸರಾಸರಿಗಿಂತ ಶೇ.150ರಷ್ಟನ್ನು ನೀಡಲು ಮುಂದಾಗಿವೆ.

Leave a Reply

Your email address will not be published. Required fields are marked *