Thursday, 11th August 2022

ಬಿಜೆಪಿ ಕಡೆಗಣನೆ: ಶಾಸಕರ ಎದುರೇ ಕಾರ್ಯಕರ್ತರ ಕಿತ್ತಾಟ…!

ಹಾಸನ : ಜಿಲ್ಲೆಯಲ್ಲಿ ಶಾಸಕರ ಎದುರೇ ಬಿಜೆಪಿ – ಜೆಡಿಎಸ್ ಕಾರ್ಯಕರ್ತರ ನಡುವೆ ತಾರಕಕ್ಕೇರಿದ ಟಾಕ್ ವಾರ್  ಮಾರಾಮಾರಿ ಯಲ್ಲಿ ಅಂತ್ಯಗೊಂಡಿದೆ.

ಅರಸೀಕೆರೆ ನಗರದ ಸರ್ಕಾರಿ ಜೆ.ಸಿ.ಆಸ್ಪತ್ರೆ ಆವರಣದಲ್ಲಿ ಆಕ್ಸಿಜನ್ ಘಟಕ ಉದ್ಘಾಟನಾ ಸಮಾರಂಭ ನಿಗದಿಯಾಗಿತ್ತು. ಈ ಸಮಾರಂಭದಲ್ಲಿ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಭಾಗವಹಿಸಿದ್ದರು. ಆದರೆ ನಗರಸಭೆಯ ಆಸ್ಪತ್ರೆ ವ್ಯಾಪ್ತಿಯ ಬಿಜೆಪಿ ಸದಸ್ಯರನ್ನು ಕಡೆಗಣಿಸಲಾಗಿತ್ತು.

ಇದೇ ಕಾರಣದಿಂದಾಗಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಉದ್ಘಾಟನಾ ಸಮಾರಂಭದ ವೇಳೆಯಲ್ಲಿಯೇ ಮಾತಿಗೆ ಮಾತು ಬೆಳೆದು ಜಗಳ ಉಂಟಾಗಿದೆ. ಜಗಳ ತಾರಕಕ್ಕೇರಿ ಬಿಜೆಪಿ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ ಕೂಡ ನಡೆದಿದೆ.