Friday, 12th August 2022

ರಾಜ್ಯದಲ್ಲಿ ಕರೋನಾ ಹರಡಲು ಉ.ಭಾರತದ ವಿದ್ಯಾರ್ಥಿಗಳೇ ಕಾರಣ: ತಮಿಳುನಾಡು ಸಚಿವ

ಚೆನ್ನೈ: ರಾಜ್ಯದಲ್ಲಿ ದಿನಕ್ಕೆ ಕರೋನಾ ಪ್ರಕರಣಗಳು 100 ಸಮೀಪಿಸುತ್ತಿವೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳಕ್ಕೆ ಉತ್ತರ ಭಾರತದ ವಿದ್ಯಾರ್ಥಿ ಗಳೇ ಕಾರಣ ಎಂದು ತಮಿಳುನಾಡು ಆರೋಗ್ಯ ಸಚಿವ ಎಂ.ಸುಬ್ರಮಣಿಯನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಉತ್ತರ ಭಾರತದ ವಿದ್ಯಾರ್ಥಿಗಳು ತಮಿಳುನಾಡಿನಲ್ಲಿ ಕೋವಿಡ್ ಸೋಂಕನ್ನು ಹರಡುತ್ತಿದ್ದಾರೆ. ಕೆಳಂಬಕ್ಕಂ ವಿಐಟಿ ಕಾಲೇಜು ಮತ್ತು ಸತ್ಯಸಾಯಿ ಕಾಲೇಜು ವಿದ್ಯಾರ್ಥಿಗಳಿಂದ ಹಾಸ್ಟೆಲ್‌ಗಳು ಮತ್ತು ತರಗತಿಗಳಲ್ಲಿ ಪ್ರಕರಣಗಳು ಹರಡುತ್ತಿವೆ ಎಂದಿರುವ ಅವರು, ಕೆಲವು ಉತ್ತರ ಭಾರತದ ರಾಜ್ಯಗಳಲ್ಲಿ ಕೋವಿಡ್​​ ಕೇಸ್​ಗಳು ಹೆಚ್ಚುತ್ತಿವೆ ಎಂದಿದ್ದಾರೆ.

ತಮಿಳುನಾಡಿನಲ್ಲಿ ಸೋಂಕಿತರ ಸಂಖ್ಯೆ 34,55,474ಕ್ಕೆ ಏರಿಕೆಯಾಗಿದೆ. ಸದ್ಯ ಯಾವುದೇ ಕೋವಿಡ್​ ಸಾವು ವರದಿಯಾ ಗಿಲ್ಲ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,745 ಹೊಸ ಕೋವಿಡ್ ಪ್ರಕರಣಗಳನ್ನು ದಾಖಲಾಗಿದೆ.