Tuesday, 7th December 2021

ಸುಸಂಸ್ಕೃತ ಸಜ್ಜನ ಗೃಹಕ್ಕೆ ಸಮನಾದ ಶಾಲೆ ಇನ್ನೊಂದಿಲ್ಲ

ತನ್ನಿಮಿತ್ತ

ತನುಷ ಎಂ.ಆರ್‌

ತಪ್ಪು ಮಾಡಿದಾಗ ಮಕ್ಕಳನ್ನು ಗದರಿಸಿ ಬೆದರಿಸಿ ಹೊಡೆದು ಬಡೆದು ಬೈದು ಭಂಗಿಸಿ ಸರಿಪಡಿಸುತ್ತೇವೆ ಎಂದು ಹೊರಡುವ ತಂದೆ-ತಾಯಂದಿರು ಕೆಲವರು. ಮಕ್ಕಳ ಅರ್ಥಹೀನ ಬೇಡಿಕೆಗಳನ್ನು ಪೂರೈಸಿ ಅವರನ್ನು ಅತಿ ಮುದ್ದಿನಿಂದ ಬೆಳೆಸುವವರು ಕೆಲವರು ಮಕ್ಕಳನ್ನು ಶಾಲೆಗೆ ಸೇರಿಸಿದ ಬಳಿಕ ತಂದೆ-ತಾಯಂದಿರ ಕೆಲಸ ಮುಗಿಯಿತೆಂದು ತಿಳಿಯುವ, ಮಕ್ಕಳನ್ನು ಅವರ ಪಾಡಿಗೆ ಬಿಡುವ ಜಾತಿಗೆ ಸೇರಿದ ಬಹುಸಂಖ್ಯೆಯ ತಂದೆ ತಾಯಂದಿರಿದ್ದಾರೆ.

ಆದರೆ ‘ಸತ್ಯಸಂಧರು ಗುಣವಂತರು ಆದ ತಂದೆ-ತಾಯಂದಿರಿಗೆ ಸಮನಾದ ಅಧ್ಯಾಪಕರು ಇನ್ನಿಲ್ಲ. ಆಧುನಿಕ ಸ್ಕೂಲುಗಳಲ್ಲಿ ಪಡೆಯುವ ಶಿಕ್ಷಣದಲ್ಲಿ ಮಕ್ಕಳ ಸಂಸ್ಕಾರ ನಿರ್ಮಾಣದ ಈ ತರಬೇತಿಯನ್ನು ಶಾಲೆಯಲ್ಲಿ ಪಡೆಯಲು ಸಾಧ್ಯವೇ ಇಲ್ಲ. ಒಳ್ಳೆಯ ಮನೆಯ ಪರಿಸರದಲ್ಲಿ ಬೆಳೆದ ರೆ ಅದರ ಪರಿಣಾಮ ಅವರ ಬದುಕಿನಿಂದ ಮಾಸುವು ದಿಲ್ಲ’ ಎಂದರು ಗಾಂಧೀಜಿ ಇಂತಹ ಗೃಹಗಳ ಅಭಾವವನ್ನು ನಮ್ಮ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೋಡುತ್ತಿರುವುದು ವಿಷಾದನೀಯ. ಆದರೆ ಈ ಅಭಾವವನ್ನು ಸ್ವಲ್ಪ ಮಟ್ಟಿಗಾದರೂ ಶಾಲೆಗಳು ದೂರ ಮಾಡಬೇಕೆಂದು ನಾವು ಬಯಸುವುದು ಸ್ವಾಭಾವಿಕ, ನಮ್ಮ ದೇಶದಲ್ಲಿ ಸರಕಾರ ಕೋಟಿ ಗಟ್ಟಲೆ ಹಣವನ್ನು ವಿದ್ಯಾಭ್ಯಾಸಕ್ಕಾಗಿ ವಿನಿಯೋಗಿ ಸುತ್ತದೆ ಆದರೆ ನಮ್ಮ ದೇಶದಲ್ಲಿ ಬಹುದೊಡ್ಡ ಕೊರತೆ ಮನೆಯ ಸಕಾರಾ ತ್ಮಕ ವಾದ ಪರಿಸರದ ಕೊರತೆ ಎದ್ದು ಕಾಣುತ್ತಿದೆ.

ಹೌದು ಬಡತನ ಮೂಲಭೂತ ಸೌಕರ್ಯಗಳು ಉತ್ತಮವಾದ ಮಾರ್ಗ ದರ್ಶನದ ಕೊರತೆ ಇಂದಾಗಿ ಎಷ್ಟೋ ಮಕ್ಕಳ ಭವಿಷ್ಯ ಕುಂಠಿತ ವಾಗುತ್ತಿದೆ ಎಷ್ಟೋ ಮಕ್ಕಳು ಹೇಗೋ ವಿದ್ಯಾಭ್ಯಾಸ ಮುಗಿಸಿದರು ಅವರ ಪದವಿಗೆ ಸರಿಸಮನಾದ ವೃತ್ತಿಗೆ ಹೋಗಲು ವಿಫಲ ರಾಗುತ್ತಿದ್ದಾರೆ ಕಾರಣ ಪದವಿ ಪಡೆದ ವಿಷಯದ ಬಗ್ಗೆ ಪಾಂಡಿತ್ಯ ಇಲ್ಲದಿರುವುದು ‘ಯುವಜನತೆ ಕಾಲೇಜಿನಿಂದ ಹೊರ ಬರುವಾಗ ಕೇವಲ ಪ್ರಮಾಣ ಪತ್ರಗಳೊಂದಿಗೆ ಹೊರ ಬರಬಾರದು ಬದಲಿಗೆ ಕೌಶಲ್ಯತೆ ಔದ್ಯೋಗಿಕತೆ ಹಾಗೂ ವೃತ್ತಿಪರತೆ ಬೆಳೆಸಿ ಕೊಂಡು ಬರಬೇಕು ಇದೆಲ್ಲ ಯಾರ ತಪ್ಪು ಎಂದು ಚರ್ಚಿಸುವ ಮೊದಲು, ಇನ್ನೊಂದು ವರ್ಗದ ಶ್ರೀಮಂತ ಕುಟುಂಬಕ್ಕೆ ಸೇರಿದ ಪೋಷಕರು ಮತ್ತು ವಿದ್ಯಾರ್ಥಿಗಳಿದ್ದಾರೆ ಪೋಷಕರು ತಮ್ಮ ಮಕ್ಕಳು ಬಯಸಿದ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸ ಬಲ್ಲ ಸಾಮರ್ಥ್ಯವಿರುವ ಪೋಷಕರು ಹಾಗೂ ಮಕ್ಕಳು ತಮ್ಮ ಬದುಕಿನಲ್ಲಿ ಏನನ್ನು ಪಡೆದುಕೊಳ್ಳುವ ಆಸೆ ಆಕಾಂಕ್ಷೆ ಗಳನ್ನು ಹೊಂದಿದ್ದಾರೆ ಎಲ್ಲವನ್ನು ಪಡೆದುಕೊಳ್ಳಬಹುದು ಆದರೆ ಜೀವನಕ್ಕೆ ಬೇಕಾದ ಉತ್ತಮವಾದ ಶಿಕ್ಷಣ ಮಾನವೀಯ ಮೌಲ್ಯಗಳು ಇವುಗಳನ್ನು ಬಿಟ್ಟು ಜೀವನಕ್ಕೆ ಕಂಟಕಪ್ರಾಯವಾಗಿರುವ ಹಲವಾರು ದುಶ್ಚಟಗಳಿಗೆ ಮಾನಸಿಕ ಖಿನ್ನತೆಗೆ ದೇಶ ವಿರೋಧಿ ಚಟುವಟಿಕೆಗಳಿಗೆ ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡುತ್ತಿರುವುದು ತಮ್ಮ ಬುದ್ಧಿವಂತಿಕೆಯನ್ನು ಬೇರೊಂದೆಡೆ ವ್ಯರ್ಥ ಮಾಡುತ್ತಿರುವುದಕ್ಕೆ ನಿಜಕ್ಕೂ ಗೃಹ ವೈಫಲ್ಯವೇ ಕಾರಣ ಎಂದು ಹೇಳಬಹುದು.

ಮಕ್ಕಳಿಗಾಗಿ ಸ್ವಲ್ಪ ಸಮಯ ನೀಡದಿರುವುದು ಹಾಗೂ ಅವರ ಪಾಡಿಗೆ ಬಿಟ್ಟಿರುವುದು ತಪ್ಪು-ಸರಿ ಅರಿವಿಲ್ಲದ ಮಕ್ಕಳು ಮನ ಬಂದಂತೆ ವರ್ತಿಸುವುದಕ್ಕೆ ಕಾರಣ ಮಕ್ಕಳು ಪಠ್ಯ ವಿಷಯಗಳಲ್ಲಿ ಉತ್ತಮವಾಗಿದ್ದು ಪಠ್ಯೇತರ ವಿಷಯಗಳಾದ ಸಾಮಾನ್ಯ ಜ್ಞಾನ, ತಾಳ್ಮೆ, ಹಿರಿಯರನ್ನು ಗೌರವಿಸುವುದು, ಜೀವನಕ್ಕೆ ಬೇಕಾದ ಮೌಲ್ಯಗಳನ್ನು ಬೆಳೆಸಿಕೊಳ್ಳುವುದರಲ್ಲಿ ಹಿಂದೆ ಉಳಿದಿದ್ದಾರೆ. ಭವ್ಯ ಭಾರತ ಇತಿಹಾಸದಲ್ಲಿ ಸ್ವತಂತ್ರ ಪೂರ್ವದಿಂದಲೂ ಇಲ್ಲಿಯವರೆಗೂ ನಮ್ಮ ನಾಡು ಕಂಡಂತಹ ಮಹಾನ್ ನಾಯಕರು ಗಳ ಗುಣಗಳನ್ನು ಇಂದು ಈ ಕಲಿಯುಗದಲ್ಲಿ ಇಂದಿಗೂ ಸಹ ಧೈರ್ಯ ಕೆಚ್ಚೆದೆಯ ಆತ್ಮವಿಶ್ವಾಸವನ್ನು ನೋಡಲು ಸಾಧ್ಯ ವಾಗುತ್ತಿಲ್ಲ ಕಾರಣ ‘ಬಿತ್ತಿದಂತೆ ಬೆಳೆ ಎಂಬ ಮಾತಿನಂತೆ ನಾವು ಮಕ್ಕಳ ಮನಸ್ಸಿನಲ್ಲಿ ಒಳ್ಳೆಯ ವ್ಯಕ್ತಿಗಳ ಆದರ್ಶಗಳನ್ನು ಬಿತ್ತುವಲ್ಲಿ ವಿಫಲರಾಗುತ್ತಿದ್ದೇವೆ.

ಎಲ್ಲಾ ವಿಷಯವನ್ನು ಪಠ್ಯಕ್ರಮದಲ್ಲಿ ಸೇರಿಸಲು ಸಾಧ್ಯವಾಗದಿದ್ದರೂ ೨೦೨೦ರಲ್ಲಿ ಹೊಸ ಶಿಕ್ಷಣ ನೀತಿ ಜಾರಿಯಾಗಿ ಹೊಸ ದಾದ ಮತ್ತೊಂದು ಪ್ರಯತ್ನಕ್ಕೆ ನಾಂದಿ ಹಾಡಿದೆ. ಪ್ರಪಂಚವನ್ನೇ ನಮ್ಮ ಅಂಗೈಯಲ್ಲಿ ತೋರಿಸುವ ಅದ್ಭುತವಾದ ಶಕ್ತಿ ಆಗಿರುವುದಂತೂ ಸತ್ಯ ಪ್ರತಿಯೊಬ್ಬ ತರುಣರ ಉದ್ದಾರಕ್ಕೂ ಅವರ ಪೋಷಕರ ಪಾತ್ರ ಮುಖ್ಯಪಾತ್ರವಹಿಸುತ್ತದೆ ಇನ್ನು ಮುಂದೆ ಆದರೂ ಎಲ್ಲಾ ಪರಿವಾರದವರು ಪಾಠ ಕಲಿಯದಿದ್ದರೆ ಮುಂದಾಗಬಹುದಾದ ಆಘಾತಗಳು ಕಟ್ಟಿಟ್ಟ ಬುತ್ತಿ.