Friday, 7th October 2022

ಬ್ರೇಕಿಂಗ್: ವಿದ್ಯಾಗಮ ಯೋಜನೆ ಬಳಿಕ ಹಲವು ಶಿಕ್ಷಕರು ಬಲಿ

ಬೆಳಗಾವಿ: ವಿದ್ಯಾಗಮ ಯೋಜನೆ ಬಳಿಕ ಹಲವು ಶಿಕ್ಷಕರು ಬಲಿಯಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 57 ಜನ ಶಿಕ್ಷಕರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ಸೆಪ್ಟೆಂಬರ್‌ ಅಂತ್ಯದವರೆಗೆ 110 ಶಿಕ್ಷಕರು ಬಲಿಯಾಗಿದ್ದು, ಹಾವೇರಿಯಲ್ಲಿ ಕೊರೊನಾಗೆ 18 ಶಿಕ್ಷಕರು ಬಲಿಯಾಗಿದ್ದಾರೆ. ಬಾಗಲಕೋಟೆಯಲ್ಲಿ 6 ಮಂದಿ ಬಲಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 4 ಶಿಕ್ಷಕರ ಬಲಿಯಾಗಿದ್ದರೆ, ಅದೇ ಶಾಲೆಯ 20 ಶಿಕ್ಷಕರಿಗೆ ನೆಗೆಟಿವ್ ವರದಿ ಬಂದಿದೆ.

207 ವಿದ್ಯಾರ್ಥಿಗಳ ಪೈಕಿ 4 ಮಕ್ಕಳಿಗೆ ಸೋಂಕು ತಗಲಿದ್ದು, ಇನ್ನೂ 24 ವಿದ್ಯಾರ್ಥಿಗಳ ವರದಿ ಬರಲು ಬಾಕಿ ಇದೆ. ಕೊಪ್ಪಳದಲ್ಲಿ 12 ಶಿಕ್ಷಕರು ಬಲಿಯಾಗಿದ್ದಾರೆ.

ಬಳ್ಳಾರಿಯಲ್ಲಿ ಕೊರೊನಾಕ್ಕೆ 10 ಮಂದಿ ಶಿಕ್ಷಕರು ಬಲಿಯಾಗಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಬೆಳಗಾವಿಯಲ್ಲಿ ಐದು ಪ್ರದೇಶ ಗಳನ್ನು ಸೀಲ್ ಡೌನ್ ಮಾಡಲಾಗಿದೆ.