Wednesday, 5th October 2022

ಟಿ-20 ಸರಣಿ ಟೀಂ ಇಂಡಿಯಾ ತೆಕ್ಕೆಗೆ: ಪಂತ್‌ ಸ್ಪೋಟಕ ಬ್ಯಾಟಿಂಗ್‌

ಫ್ಲೋರಿಡಾ: ಸೆಂಟ್ರಲ್ ಬ್ರೊವರ್ಡ್ ರೀಜನಲ್ ಪಾರ್ಕ್‍ನಲ್ಲಿ ನಡೆದ ಟಿ-20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 59 ರನ್‍ಗಳ ಜಯ ಸಾಧಿಸಿದ ಭಾರತ ತಂಡ, ಒಂದು ಪಂದ್ಯ ಬಾಕಿ ಇರುವಂತೆಯೇ 3-1 ಅಂತರದಿಂದ ಸರಣಿ ಗೆದ್ದು ಕೊಂಡಿದೆ.

ಗೆಲುವಿಗೆ 192 ರನ್‍ಗಳ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡ 19.1 ಓವರ್ ಗಳಲ್ಲಿ ಕೇವಲ 132 ರನ್‍ಗಳಿಗೆ ಆಲೌಟ್ ಆಯಿತು. ಇದಕ್ಕೂ ಮುನ್ನ ರಿಷಬ್ ಪಂತ್ 31 ಎಸೆತಗಳಲ್ಲಿ 44 ರನ್ ಸಿಡಿಸಿ ಭಾರತ ಗೌರವಾರ್ಹ ಮೊತ್ತ (5 ವಿಕೆಟ್‍ ಗೆ 191) ಗಳಿಸಲು ನೆರವಾದರು. ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅವರು ಭಾರತಕ್ಕೆ ಮಿಂಚಿನ ಆರಂಭ ದೊರಕಿಸಿಕೊಟ್ಟ ಬಳಿಕ ಪಂತ್ ಭಾರತದ ಇನಿಂಗ್ಸ್ ಆಧರಿಸಿದರು. ‌

ಅಕ್ಷರ್ ಪಟೇಲ್ ಕೂಡಾ 8 ಎಸೆತಗಳಲ್ಲಿ 20 ರನ್ ಸಿಡಿಸಿ, ಕೊನೆ ಓವರ್‌ ನಲ್ಲಿ ಭಾರತದ ರನ್ ಹೆಚ್ಚಳಕ್ಕೆ ಕಾರಣರಾದರು. ಪ್ರತಿಕೂಲ ಹವಾಮಾನದಿಂದಾಗಿ ಟಾಸ್ ವಿಳಂಬವಾಗಿತ್ತು. ಭಾನುವಾರ ಇದೇ ಸ್ಟೇಡಿಯಂನಲ್ಲಿ ಅಂತಿಮ ಪಂದ್ಯ ನಡೆಯಲಿದೆ.