Friday, 30th September 2022

ವಿದ್ಯಾಗಮಕ್ಕೆ ಬಲಿಯಾದ ಹಾಸನದ ಶಿಕ್ಷಕಿ, ಪತಿ

ಹಾಸನ: ಕಳೆದ ಶುಕ್ರವಾರ ರಾಜ್ಯಾದ್ಯಂತ ತಲ್ಲಣ ಸೃಷ್ಟಿಸಿದ್ದ ವಿದ್ಯಾಗಮಕ್ಕೆ ಶಿಕ್ಷಕರ ಸಾವಿನ ಸಂಖ್ಯೆಯಲ್ಲಿ ಇಳಿಮುಖವಾಗು ತ್ತಿಲ್ಲ. ಇದೇ ವಿದ್ಯಾಗಮಕ್ಕೆ ಓರ್ವ ತನ್ನ ಪಾನಕರನ್ನು ಕಳೆದುಕೊಂಡು ಅನಾಥನಾಗಿದ್ದಾನೆ.

ಹಾಸನ ತಾಲೂಕಿನ ಕುದುರಗುಂಡಿ ಶಾಲೆ ಶಿಕ್ಷಕಿ ಸ್ವರ್ಣ ಮೃತರು. ನಿತ್ಯ ಬಸ್‍’ನಲ್ಲಿ ಪ್ರಯಾಣ ಮಾಡಿದ್ದ ಶಿಕ್ಷಕಿಗೆ ಸೋಂಕು ತಗುಲಿದೆ. ಸೋಂಕಿನಿಂದ ಶಿಕ್ಷಕಿ ಮಾತ್ರವಲ್ಲದೆ, ಪತಿ ಮಂಜುನಾಥ್ ಕೂಡ ಸಾವನ್ನಪ್ಪಿದ್ದಾರೆ. ಸೋಂಕಿನಿಂದ ಪುತ್ರ ಬಚಾವಾ ದರೂ, ಅನಾಥನಾಗಿದ್ದಾನೆ.