Monday, 3rd October 2022

ತೆಲುಗು ನಟಿ ಮೇಲೆ ಜಿಮ್ ಟ್ರೈನರ್ ಅತ್ಯಾಚಾರ

ಮುಂಬೈ: ತೆಲುಗು ನಟಿ ಒಬ್ಬರ ಮೇಲೆ ಮುಂಬೈನ ಜಿಮ್ ಟ್ರೈನರ್  ಅತ್ಯಾಚಾರ ನಡೆಸಿ ರುವ ಘಟನೆ ಬೆಳಕಿಗೆ ಬಂದಿದೆ.

ಈ ಕುರಿತು ಸಂತ್ರಸ್ಥೆ ಬಾಂದ್ರಾದ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿ ದ್ದಾರೆ.

ಆದಿತ್ಯಾ ಅಜಯ್ ಕಪೂರ್ ಎಂಬಾತ ಮದುವೆಯಾಗುವುದಾಗಿ ನಂಬಿಸಿ ನನ್ನನ್ನು ಲೈಂಗಿಕ ವಾಗಿ ದುರ್ಬಳಕೆ ಮಾಡಿಕೊಂಡಿ ದ್ದಾನೆ. ಈ ಕುರಿತು ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಸಂತ್ರಸ್ತ ಯುವತಿಯು ತೆಲುಗು ಚಿತ್ರಗಳಲ್ಲಿ ನಟಿಸಿದ್ದು, ಕಿರುತೆರೆ ಕಲಾವಿದೆ ಕೂಡ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.