Monday, 16th May 2022

ಆ ಗಣಪತಿ ಹಬ್ಬದಷ್ಟೇ ಜೋರು ಇ-ಗಣಪತಿ ಹಬ್ಬ!

– ಸಂದೇಶ್ ಎಚ್. ನಾಯ್‌ಕ್‌ , ಉಡುಪಿ
ಪ್ರತಿ ವರ್ಷವೂ ಗಣಪತಿ ಹಬ್ಬ ಜೋರಾಗಿಯೇ ನಡೆಯುತ್ತದೆ. ಈ ವರ್ಷವೂ ಹಬ್ಬದ ಸಂಭ್ರಮ ಎಲ್ಲೆಡೆ ಕಳೆಗಟ್ಟಿಿದೆ. ಗಣಪತಿ ಕೂರಿಸುವುದು, ಮೆರವಣಿಗೆ, ಸ್ಪರ್ಧೆ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಸರ್ಜನೆ ಹೀಗೆ ತರಹೇವಾರಿ ಚಟುವಟಿಕೆಗಳು ನಡೆಯುತ್ತಿಿವೆ. ಜನರು ನೀಡುವ ಚಂದಾದಿಂದ, ಚಂದವಾಗಿ ಆಚರಿಸುವ ಈ ಹಬ್ಬದ ದಿನದಂದು ಚಂದಿರನ ನೋಡಬಾರದು ಎನ್ನುವುದು ಪ್ರತೀತಿ. ಅತ್ಯಂತ ಹೆಚ್ಚು ಸಾರ್ವಜನೀಕರಣಗೊಂಡಿರುವ ಹಬ್ಬವೆಂದರೆ ಗಣೇಶೋತ್ಸವ. ಗಣಪತಿ ಎಲ್ಲರಿಗೂ ಅತ್ಯಂತ ಪ್ರಿಿಯ ದೇವ. ಹಾಗಾಗಿ ಎಲ್ಲರೂ ಅವರವರ ಯಥಾನುಶಕ್ತಿಿ, ಅವರಿಗೆ ಸೂಕ್ತವೆನಿಸಿದ ರೀತಿಯಲ್ಲಿ ಆಚರಿಸುವ ಮೂಲಕ ಸಂಭ್ರಮಿಸುತ್ತಾಾರೆ.

ಈ ಕಾಲದಲ್ಲಿ ನಮ್ಮ ಹೆಚ್ಚಿಿನ ಆಚರಣೆ, ಸಂಪ್ರದಾಯ ಹಾಗೂ ನಡವಳಿಕೆಗಳು ಇ-ಕರಣಗೊಂಡಿವೆ. ಹಬ್ಬ ಹರಿದಿನಗಳೆಂದರೆ ಆ ಆಚರಣೆಯ ಗಾಂಭೀರ್ಯತೆಗೂ ಮಿಗಿಲಾಗಿ ಮೆಸೇಜ್, ಸ್ಟೇಟಸ್ ಇತ್ಯಾಾದಿಗಳು ಹೇರಳವಾಗಿ ಹರಿದಾಡಲು ಕಾರಣವಾಗಿವೆ. ಅದರಂತೆ ಮೇಲೆ ಹೇಳಿದಂಥ ಆ ಗಣಪತಿ ಹಬ್ಬದಂತೆ ಇ-ಗಣಪತಿ ಹಬ್ಬವೂ ಅಷ್ಟೇ ಜೋರಾಗಿ ನಡೆಯುತ್ತಿಿದೆ. ಗಣೇಶನಿಗೆ ಮನೆ ಹಾಗೂ ಮನದಲ್ಲಿ ಸ್ಥಾಾನ ಕೊಡುವ ಬದಲಾಗಿ ಮೊಬೈಲಿನಲ್ಲಿ ಕೊಡಲಾಗುತ್ತಿಿದೆ. ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಗಳು ಅತ್ಯಂತ ಶೃದ್ಧಾಾ ಭಕ್ತಿಿ ಹಾಗೂ ಸಂಭ್ರಮದಿಂದ ನಡೆಯುತ್ತಿಿದ್ದರೂ ಅತ್ತ ಕಾಲಿಡದವರು ತಮ್ಮ ಮೊಬೈಲ್‌ನಲ್ಲಿ ವಾಲ್ ಪೇಪರ್, ಡಿಪಿ, ಫೇಸ್‌ಬುಕ್ ವಾಟ್ಸಾಾಪ್ ಸ್ಟೇಟಸ್, ಫಾರ್ವರ್ಡ್ ಮೆಸೇಜ್‌ಗಳಲ್ಲಿ ಗಣೇಶನನ್ನು ಕೂರಿಸಿ ಆಚರಿಸುತ್ತಿಿದ್ದಾರೆ.

ಬೀದಿ, ಓಣಿ, ಗಲ್ಲಿ, ಗೆಳೆಯರ ಬಳಗ, ಸ್ನೇಹಿತರ ಕಟ್ಟೆೆಗಳಲ್ಲಿ ಗಣೇಶನನ್ನು ಪ್ರತಿಷ್ಠಾಾಪಿಸುವ ಮೂಲಕ ಸಾರ್ವಜನಿಕವಾಗಿ ಅದನ್ನು ಆಚರಿಸಲಾಗುತ್ತಿಿದೆ. ಇಂದಿಗೂ ಆ ಪದ್ಧತಿ ಜೀವಂತವಾಗಿರುವುದು ನಮ್ಮ ಹೆಚ್ಚುಗಾರಿಕೆ. ಆದರೆ, ಇ-ಗಣೇಶೋತ್ಸವವು ಪೇಸ್‌ಬುಕ್, ವಾಟ್ಸಾಾಪ್‌ಗಳ ಗ್ರೂಪ್‌ಗಳಲ್ಲಿ, ಗಣೇಶೋತ್ಸವದ ಮುನ್ನಾಾ ದಿನದಿಂದಲೇ ಗ್ರೂಪ್ ಐಕಾನ್ ಆಗಿ ಗಣೇಶನ ಚಿತ್ರವನ್ನು ಇಡುವ ಮೂಲಕ ಆಚರಿಸುವುದನ್ನು ಕಾಣಬಹುದಾಗಿದೆ. ಹಾಗೆ ಅಲ್ಲಿಯೇ ಶುಭಾಶಯಗಳ ವಿನಿಮಯ, ಹೂ ಹಣ್ಣು ಹಂಪಲು, ತಿಂಡಿ ತಿನಿಸುಗಳು ಎಲ್ಲವೂ ಅಲ್ಲಿಯೇ ಪರಸ್ಪರ ಹಂಚಿಕೊಳ್ಳಲಾಗುತ್ತದೆ. ಆದರೆ, ಅವೆಲ್ಲವೂ ಚಿತ್ರಗಳ ರೂಪದಲ್ಲಿ. ಹಬ್ಬದ ದಿನವೆಂದರೆ ಭೂರಿ ಭೋಜನ, ಒಳ್ಳೊೊಳ್ಳೆೆ ತಿಂಡಿ ತಿನಿಸುಗಳ ಭಕ್ಷಣೆಯಿಂದಾಗಿ ಹೊಟ್ಟೆೆ ತುಂಬುವುದು ಸಹಜ ಆದರೆ, ಈಗೀಗ ಚಾಲ್ತಿಿಯಲ್ಲಿರುವ ಇ-ಆಚರಣೆಗಳ ಪರಿಣಾಮವೆಂಬಂತೆ, ಮೊಬೈಲ್, ಟ್ಯಾಾಬ್‌ಗಳ ಗ್ಯಾಾಲರಿಯೂ ತುಂಬಿರುತ್ತದೆ.

ಹನ್ನೊೊಂದು ಗಣಪತಿ ನೋಡಬೇಕು, ಇಪ್ಪತ್ತೊೊಂದು ಗಣಪತಿಯ ದರ್ಶನ ಮಾಡಬೇಕು ಎಂಬ ಉದ್ದೇಶದೊಂದಿಗೆ ಜನರು ಗಣಪತಿಯನ್ನು ಕುಳ್ಳಿಿರಿಸಿದ ನಾನಾ ಸ್ಥಳಗಳಿಗೆ ಭೇಟಿ ನೀಡಿ ದರ್ಶನ ಪಡೆಯುತ್ತಾಾರೆ. ಇ-ಆಚರಣೆಗೆ ಮಾರು ಹೋಗಿರುವವರು ಮಾರು ದೂರವೂ ಸಾಗದೇ ಕೂತಲ್ಲಿಯೇ ಬೇಕಾದಷ್ಟು ಗಣಪತಿಯ ದರ್ಶನ ಪಡೆಯುತ್ತಿಿದ್ದಾರೆ. ಅವರಿಗೆ ಲೈಕ್, ಕಮೆಂಟ್ ಹಾಗೂ ಶೇರ್‌ಗಳೇ ಸೇವೆಯಿದ್ದಂತೆ. ಆಡಿಯೋ, ವಿಡಿಯೋಗಳನ್ನು ಲಗತ್ತಿಿಸುವುದೇ ಮಂತ್ರ, ಸ್ಮರಣೆ, ನರ್ತನ, ಅರ್ಚನೆಯ ಸೇವೆ ಎಂಬಂತಾಗಿದೆ.

ಗಣೇಶೋತ್ಸವದ ವಿಶೇಷ ಆಕರ್ಷಣೆಯೆಂದರೆ ಮೆರವಣಿಗೆ. ಗಣೇಶನನ್ನು ತರುವಾಗ ಹಾಗೂ ವಿಸರ್ಜನೆಗೆ ಕೊಂಡು ಹೋಗುವಾಗ ಭರ್ಜರಿ ಮೆರವಣಿಗೆಯು ಊರೂರು ಸಾಗುತ್ತದೆ. ಹಾಗೆಯೇ ಮೊಬೈಲ್, ಕಂಪ್ಯೂೂಟರ್‌ಗಳ ನೆರವಿನಿಂದ ಸಾಮಾಜಿಕ ಜಾಲತಾಣಗಳ ಮೂಲಕ ಇ- ಆಚರಣೆಯಲ್ಲಿ ನಿರತರಾಗಿರುವರು ಗಣೇಶನ ಚಿತ್ರಗಳನ್ನು ಗ್ರೂಪ್‌ನಿಂದ ಗ್ರೂಪ್‌ಗೆ ವರ್ಗಾಯಿಸುವ ಮೂಲಕ ಮೆರವಣಿಗೆ ಮಾಡಿಸುತ್ತಿಿದ್ದಾರೆ. ಗಣೇಶೋತ್ಸವ ಸಂದರ್ಭದ ನಾನಾ ಆಕರ್ಷಕ ಚಿತ್ರ, ವಿಡಿಯೋಗಳನ್ನು ಫಾರ್ವರ್ಡ್ ಮಾಡುವುದೇ ಮೆರವಣಿಗೆಯ ಅಪ್ಡೇಟೆಡ್ ವರ್ಶನ್ ಎಂಬಂತಾಗಿದೆ. ಅಷ್ಟರ ಮಟ್ಟಿಿಗೆ ಕಾಲ ಫಾರ್ವರ್ಡ್ ಆಗಿದೆ.

ನಿರ್ದಿಷ್ಟ ದಿನಗಳವರೆಗೆ ಗಣಪತಿಯನ್ನು ಪೂಜಿಸಿ ನಂತರ ಆತನ ಮೂರ್ತಿಯನ್ನು ನೀರಿನಲ್ಲಿ ಮುಳುಗಿಸಿ ವಿಸರ್ಜಿಸಲಾಗುತ್ತದೆ. ಹೊಳೆ ಹಾಗೂ ಕೆರೆಗಳಲ್ಲಿ ನಡೆಯುತ್ತಿಿದ್ದ ಈ ವಿಸರ್ಜನೆಯನ್ನು ಬರಬರುತ್ತಾಾ ಬಾವಿ, ನೀರಿನ ತೊಟ್ಟಿಿ, ಸಿಂಟ್ಯಾಾಕ್‌ಸ್‌ ಹಾಗೂ ಬಕೆಟ್‌ಗಳಲ್ಲಿ ಮಾಡುವಷ್ಟರಮಟ್ಟಿಿಗಿನ ಬದಲಾವಣೆಗಳಿಗೆ ಇ ಆಚರಣೆಯು ಒಗ್ಗಿಿಕೊಂಡಿದೆ. ಅಂಥ ನಿರಂತರ ಬದಲಾವಣೆಗಳಿಗೆ ಒಗ್ಗಿಿಕೊಂಡಿರುವುದಕ್ಕೇ ನಮ್ಮ ಹಬ್ಬಗಳ ಅಸ್ತಿಿತ್ವ ಇನ್ನೂ ಉಳಿದಿರುವುದು. ವಿಶೇಷವೆಂದರೆ, ನಾನಾ ಆಕಾರ ಹಾಗೂ ಗಾತ್ರದ ನೀರಿನ ಗುಂಡಿಗಳಲ್ಲಿ ಲೀನವಾಗುತ್ತಿಿದ್ದ ಗಣೇಶ ಈಗ ಚಿತ್ರರೂಪದಲ್ಲಿ ಹೆಚ್ಚೆೆಚ್ಚು ಪ್ರಚಲಿತದಲ್ಲಿರುವುದರಿಂದ ಮೊಬೈಲ್, ಕಂಪ್ಯೂೂಟರ್‌ಗಳಲ್ಲಿರುವ ಡಿಲಿಟ್ ಎಂಬ ಗುಂಡಿಯನ್ನು ಅದುಮುವ ಮೂಲಕ ವಿಸರ್ಜಿಸಲ್ಪಟ್ಟು ಅದೃಶ್ಯನಾಗುತ್ತಿಿದ್ದಾನೆ. ಅದೂ ಕೂಡಾ ಈಗ ಗಣಪತಿ ವಿಸರ್ಜನಾ ಸ್ಥಳವಾಗಿದೆ. ಇವೆಲ್ಲದರ ಹೊರತಾಗಿಯೂ ನಮ್ಮ ನೈಜ ಆಚರಣೆಗಳನ್ನು ವೈಶಿಷ್ಟ್ಯತೆ, ಸೊಬಗು ಹಾಗೂ ಮಹತ್ವವನ್ನು ಮರೆಯಬಾರದಷ್ಟೇ.