Thursday, 1st December 2022

ತಥಾಕಥಿತ ಬುದ್ಧಿಜೀವಿಗಳ ಆರ್ಯ-ದ್ರಾವಿಡ ಸಿ(ರಾ)ದ್ಧಾಂತ

ಆರ್ಯರು ಭಾರತಕ್ಕೆೆ ಬಂದರು, ಭಾರತದ ಮೂಲನಿವಾಸಿಗಳನ್ನು ದಕ್ಷಿಣಕ್ಕೆೆ ಓಡಿಸಿದರು – ಎಂಬ ಒಂದು ವಾದವನ್ನು ಕಳೆದ ಐವತ್ತು ವರ್ಷಗಳಿಂದ ನಿರಂತರವಾಗಿ ಕೇಳುತ್ತ ಬಂದಿದ್ದೇವೆ. ನಮ್ಮ ಪಠ್ಯಪುಸ್ತಕಗಳಲ್ಲಿ ಇದನ್ನು ಹತ್ತುಹಲವು ಪುಟಗಳಿಗೆ ವಿಸ್ತರಿಸಿ ವಿವರಿಸಲಾಗಿದೆ. ಆರ್ಯರ ಆಕ್ರಮಣ ಎಂಬ ಶೀರ್ಷಿಕೆ, ಅದೆಷ್ಟೋೋ ವರ್ಷಗಳು ಕಳೆದ ಮೇಲೂ ನಮ್ಮ ಮನಸ್ಸಿಿನಲ್ಲಿ ಅಚ್ಚಳಿಯದೆ ಉಳಿದಿದೆ. ಈ ವಾದದಲ್ಲಿ ಹುರುಳೆಷ್ಟು? ನಿಜಕ್ಕೂ ಆರ್ಯರೆಂದರೆ ಯಾರು? ಅವರೇಕೆ ಭಾರತದ ಮೇಲೆ ಆಕ್ರಮಣ ಮಾಡಿದರು? ಈ ಎಲ್ಲ ಪ್ರಶ್ನೆೆಗಳನ್ನು ಚರ್ಚಿಸುವುದು ಈ ಲೇಖನದ ಉದ್ದೇಶವಾದರೂ, ಆರ್ಯ-ದ್ರಾಾವಿಡ ಸಿದ್ಧಾಾಂತದಲ್ಲಿ ಬರುವ ಭಾಷಾ ವಿಷಯವನ್ನಷ್ಟೇ ನಾನು ಸ್ವಲ್ಪ ವಿಸ್ತಾಾರವಾಗಿ ಇಲ್ಲಿ ಚರ್ಚೆಗೆ ಎತ್ತಿಿಕೊಂಡಿದ್ದೇನೆ.

ಆರ್ಯ-ದ್ರಾಾವಿಡ ಸಿದ್ಧಾಾಂತವನ್ನು ನಿರೂಪಿಸುವ ತಥಾಕಥಿತ ಚರಿತ್ರಕಾರರು ಹೇಳುವ ಒಂದು ಅಂಶವೆಂದರೆ, ಆರ್ಯರ ಭಾಷೆ ಸಂಸ್ಕೃತ. ಅವರು ಭಾರತದ ಮೇಲೆ ಆಕ್ರಮಣ ಮಾಡಿದಾಗ ತಮ್ಮ ಭಾಷೆಯನ್ನೂ ಈ ಭೂಪ್ರದೇಶದ ಮೂಲನಿವಾಸಿಗಳ ಮೇಲೆ ಹೇರಿದರು. ಅರ್ಥಾತ್ ಪ್ರತಿಯೊಬ್ಬರೂ ಸಂಸ್ಕೃತದಲ್ಲಿ ವ್ಯವಹರಿಸಬೇಕೆಂಬ ನಿರ್ಬಂಧ ವಿಧಿಸಿದರು. ದ್ರಾಾವಿಡರು ಈ ಹೇರಿಕೆಯನ್ನು ವಿರೋಧಿಸಿ ತಮ್ಮ ಮೂಲಭಾಷೆಗಳನ್ನು ಉಳಿಸಿಕೊಂಡರು – ಎಂಬುದು. ಇದೇ ಚರಿತ್ರಕಾರರು ತಮ್ಮ ಸಂಶೋಧನೆಯ ಉದ್ದಕ್ಕೂ ಹೇಳಿಕೊಂಡು ಬಂದ ಇನ್ನೊೊಂದು ಅಂಶವೆಂದರೆ, ಆರ್ಯರು ಭಾರತದ ಮೇಲೆ ದಾಳಿ ಮಾಡಿದ್ದು ಕ್ರಿಿಸ್ತಪೂರ್ವ 1500ರ ನಂತರ. ವೇದ, ರಾಮಾಯಣ, ಮಹಾಭಾರತ ಇವೆಲ್ಲ ರಚನೆಯಾದದ್ದು ಆ ನಂತರದಲ್ಲಿ. ಭಗವದ್ಗೀತೆ ಮಹಾಭಾರತದ ಭಾಗವಾಗಿರಲಿಲ್ಲ; ಅದು ಸೃಷ್ಟಿಿಯಾದದ್ದು ಬುದ್ಧನ ಕಾಲದ ಬಳಿಕ. ಅಂದರೆ ಕ್ರಿಿಸ್ತಪೂರ್ವ 600ರ ನಂತರದಲ್ಲಿ. ಕೆಲವು ಚರಿತ್ರಕಾರರು ವೇದ, ಉಪನಿಷತ್ತುಗಳ ಕಾಲವನ್ನು ಕ್ರಿಿಸ್ತಶಕದಿಂದೀಚೆಗೂ ಎಳೆದುಬಿಡುತ್ತಾಾರೆ. ಅವರ ಪ್ರಕಾರ, ಈ ಎಲ್ಲ ಸಾಹಿತ್ಯ ರಚನೆಯಾದದ್ದು ಕಳೆದ 2000 ವರ್ಷಗಳಲ್ಲಷ್ಟೆೆ. ಅಂದರೆ, ವೇದಕಾಲೀನ ಆರ್ಯರು ಭಾರತಕ್ಕೆೆ ಬಂದು ತಮ್ಮ ಭಾಷೆಯನ್ನು ಇಲ್ಲಿನ ಮೂಲನಿವಾಸಿಗಳ ಮೇಲೆ ಹೇರಿದ ಪ್ರಕರಣ ಸಂಭವಿಸಿದ್ದು, ಎಡ ಚರಿತ್ರಕಾರರ ಪ್ರಕಾರ ತೀರಾ ಇತ್ತೀಚೆಗೆ (ಹೆಚ್ಚೆೆಂದರೆ ಕಳೆದ 3000 ವರ್ಷಗಳಲ್ಲಿ) ಎಂದಾಯಿತು, ಅಲ್ಲವೆ?

ಈಗ ಇದರ ವೈಜ್ಞಾಾನಿಕ ವಿಶ್ಲೇಷಣೆಗೆ ಇಳಿಯೋಣ. ಯಾವುದೇ ಪ್ರದೇಶದಲ್ಲಿ ಒಂದು ಜನಾಂಗ ತನ್ನ ಭಾಷೆಯನ್ನು ಇನ್ನೊೊಂದು ಜನಾಂಗದ ಮೇಲೆ ಹೇರಬೇಕಾದರೆ ಈ ಕೆಳಗಿನ ನಾಲ್ಕರಲ್ಲಿ ಒಂದು ಅಥವಾ ಕೆಲವು ಕಾರಣಗಳು ಇರಬೇಕಾಗುತ್ತದೆ. (1) ಆಕ್ರಮಣ ಮಾಡಿದವರ ಸಂಖ್ಯೆೆ ಬಹಳಷ್ಟು ಹೆಚ್ಚು ಇದ್ದು, ಆಕ್ರಮಣಕ್ಕೆೆ ಗುರಿಯಾದವರ ಸಂಖ್ಯೆೆ ತೀರಾ ಚಿಕ್ಕದಿರಬೇಕು. ಆಗ ಆಕ್ರಮಣಕಾರರು, ಈ ಚಿಕ್ಕ ಗುಂಪನ್ನು ಬಲಾತ್ಕಾಾರದಿಂದಲೋ ಓಲೈಕೆಯಿಂದಲೋ ತಮ್ಮ ಗುಂಪಿಗೆ ಸೇರಿಸಿಕೊಳ್ಳುತ್ತಾಾರೆ. (2) ಆಕ್ರಮಣಕಾರರು, ಆಕ್ರಮಣಕ್ಕೊೊಳಗಾದ ಭಾಷೆಯಲ್ಲಿ ಮಾತಾಡುವ ಯಾರೊಬ್ಬರನ್ನೂ ಉಳಿಸದಂತೆ ಸರ್ವರನ್ನೂ ನಾಶ ಮಾಡಬೇಕು. (3) ಆಕ್ರಮಣಕಾರರು, ಆಕ್ರಮಣ ಮಾಡಿದ ಇಡೀ ಭೂಪ್ರದೇಶದ ಆಡಳಿತವನ್ನು ತಮ್ಮ ಕೈಗೆ ತೆಗೆದುಕೊಳ್ಳಬೇಕು ಮತ್ತು ತಮ್ಮ ಭಾಷೆಯನ್ನೇ ಆಡಳಿತ ಭಾಷೆಯಾಗಿ ಜನತೆಯ ಮೇಲೆ ಹೇರಬೇಕು. (4) ಆಕ್ರಮಣಕಾರರು ಆಕ್ರಮಣಕ್ಕೊೊಳಗಾದವರ ಎಲ್ಲ ಬಗೆಯ ಸಾಹಿತ್ಯ ಆಕರಗಳನ್ನೂ ನಾಶಪಡಿಸಬೇಕು.

ಈ ಅಂಶಗಳನ್ನು ಒಂದೊಂದಾಗಿ ವಿಶ್ಲೇಷಿಸೋಣ. ಮೊದಲನೆಯದಾಗಿ, ಆರ್ಯರು ಭಾರತದಲ್ಲಿ ಸಂಸ್ಕೃತವನ್ನು ಜನರ ಮೇಲೆ ಹೇರಬೇಕಾದರೆ ಬಹಳ ದೊಡ್ಡ ಸಂಖ್ಯೆೆಯಲ್ಲಿ ಇಲ್ಲಿಗೆ ಆಕ್ರಮಣ ಮಾಡಬೇಕಾಗಿತ್ತು. ವೈಜ್ಞಾಾನಿಕ ಸಂಶೋಧನೆಗಳು ಹೇಳುವಂತೆ ಭಾರತ ಕನಿಷ್ಠ 10,000 ವರ್ಷಗಳಿಂದಲೂ ನೈಸರ್ಗಿಕವಾಗಿ ಸಂಪದ್ಭರಿತವಾದ ಪ್ರದೇಶವೇ ಆಗಿತ್ತು. ಇಲ್ಲಿನ ಜನಸಂಖ್ಯೆೆ ಹಿಂದೆಯೂ ಅತ್ಯಂತ ದೊಡ್ಡದಾಗಿಯೇ ಇತ್ತು. ಭಾರತದ ಜನಸಂಖ್ಯೆೆ ಲಕ್ಷ ಲಕ್ಷಗಳ ಸಂಖ್ಯೆೆಯಲ್ಲಿ ಕಡಿಮೆಯಾದ ಯಾವೊಂದು ದೊಡ್ಡ ಘಟನೆಯೂ ಇತಿಹಾಸದಲ್ಲಿ ನಡೆಯಲಿಲ್ಲ ಎಂಬುದನ್ನು ನಾವು ಗಮನಿಸಬೇಕು. ಹಾಗಿದ್ದ ಮೇಲೆ ಮೂರು ಸಾವಿರ ವರ್ಷಗಳ ಹಿಂದಿನ ಭಾರತದಲ್ಲೂ ಮೂಲನಿವಾಸಿಗಳ ಸಂಖ್ಯೆೆ ದೊಡ್ಡದಾಗಿಯೇ ಇತ್ತು ಎಂದು ಯಾವ ಸಂಶಯಕ್ಕೆೆ ಎಡೆ ಇಲ್ಲದಂತೆ ನಾವು ಊಹಿಸಬಹುದು.

ಈ ಸಂಖ್ಯೆೆಯೇ ಕುಬ್ಜ ಎನ್ನಿಿಸಬೇಕಾದರೆ ಆಕ್ರಮಣ ಮಾಡಿದವರ ಸಂಖ್ಯೆೆ ಕೋಟಿಗಳಲ್ಲಿರಬೇಕಾಗಿತ್ತು ಎಂದಾಗುತ್ತದೆ. ಹಾಗಾದರೆ ಆ ಬೃಹತ್ ಸಂಖ್ಯೆೆಯ ಪಡೆ ಎಲ್ಲಿಂದ ಬಂತು? ಕೋಟಿಗಳ ಸಂಖ್ಯೆೆಯಲ್ಲಿ ಅವರು ಭಾರತದ ಮೇಲೆ ದಾಳಿ ಮಾಡಲು ಏನು ಕಾರಣ ಇದ್ದಿರಬಹುದು? ಅವರೆಲ್ಲರೂ ಒಟ್ಟಾಾಗಿ, ಒಂದೇ ಸಲಕ್ಕೆೆ ದಾಳಿ ಮಾಡಿದರೋ ಹಂತ ಹಂತವಾಗಿ ಮಾಡಿದರೋ? ಆರ್ಯರು ಈ ನೆಲದ ಮೂಲನಿವಾಸಿಗಳ ಮೇಲೆ ದಾಳಿ ಮಾಡಿದ್ದನ್ನು ಮೂಲನಿವಾಸಿಗಳು ತಮ್ಮ ಲಿಖಿತ ಅಥವಾ ಮೌಖಿಕ ಸಾಹಿತ್ಯದಲ್ಲಿ ದಾಖಲಿಸಿದರೇ? ಈ ಎಲ್ಲ ಪ್ರಶ್ನೆೆಗಳು ಉದ್ಭವಿಸುತ್ತವೆ. ಆದರೆ ಅಂಥ ಯಾವೊಂದು ಯುದ್ಧ ವಿಶ್ಲೇಷಣೆಯೂ ನಮಗೆ ಆರ್ಯರ ಸಾಹಿತ್ಯದಲ್ಲಾಾಗಲೀ ದ್ರಾಾವಿಡರ ಸಾಹಿತ್ಯದಲ್ಲಾಾಗಲೀ ಸಿಗುವುದಿಲ್ಲ. ಒಂದು ಗುಂಪು ಇನ್ನೊೊಂದರ ಮೇಲೆ ಮುಗಿಬಿತ್ತು, ಅವರನ್ನು ಗುಲಾಮರನ್ನಾಾಗಿಸಿಕೊಂಡಿತು, ಅವರ ಕೈಬಾಯಿ ಮುಚ್ಚಿಿಸಿ ಅವರ ಮೇಲೆ ತಮ್ಮ ಭಾಷೆಯನ್ನು ಬಲವಂತವಾಗಿ ಹೇರಿತು ಎಂದು ಹೇಳುವ ಯಾವೊಂದು ವಿವರವೂ ನಮಗೆ ಸಾಹಿತ್ಯದಲ್ಲಿ ದೊರೆಯುವುದಿಲ್ಲ.

ಆದರೆ ಇದಕ್ಕೆೆ ವಿರುದ್ಧವೆಂಬಂತೆ, ದ್ರಾಾವಿಡ ಭಾಷೆ ಎಂದು ಇಂದು ಕೆಲವರು ಚರಿತ್ರಕಾರರು ಗುರುತಿಸುವ ಭಾಷೆಗಳಾದ ಕನ್ನಡ, ತಮಿಳು, ಮಲಯಾಳಂ, ತೆಲುಗು, ತುಳು ಭಾಷೆಗಳಲ್ಲಿ ಸಂಸ್ಕೃತದ ಬಹಳಷ್ಟು ಶಬ್ದಗಳು ಧಾರಾಳವಾಗಿ ತುಂಬಿಕೊಂಡಿವೆ ಎನ್ನುವುದನ್ನು ನಾವು ವೈಜ್ಞಾಾನಿಕವಾಗಿ ತೋರಿಸಬಹುದು! ಕೆಲವು ವರ್ಷಗಳ ಹಿಂದೆ ತಮಿಳು ನಿಘಂಟಿನಲ್ಲಿ ಎಷ್ಟು ಶಬ್ದಗಳು ನೇರವಾಗಿ ಸಂಸ್ಕೃತದವು ಎಂಬುದನ್ನು ಒಬ್ಬರು ಲೆಕ್ಕ ಹಾಕಿದರು (ಅಪಭ್ರಂಶಗಳಲ್ಲ; ನಿಚ್ಚಳ ಸಂಸ್ಕೃತ ಶಬ್ದಗಳು). ಪ್ರತಿ ನೂರು ತಮಿಳು ಪದಗಳಲ್ಲಿ 41 ಪದಗಳು ಅಚ್ಚ ಸಂಸ್ಕೃತದವಾಗಿದ್ದವು! ಒಂದು ಮೂಲನಿವಾಸಿಗಳ ಭಾಷೆಯಲ್ಲಿ ಇಷ್ಟೊೊಂದು ದೊಡ್ಡ ಸಂಖ್ಯೆೆಯಲ್ಲಿ ಪರಭಾಷಿಕರ ಶಬ್ದಗಳು ನುಸುಳಬೇಕಾದರೆ ಆ ಎರಡೂ ಪಂಗಡಗಳು ಹಲವು ನೂರು ವರ್ಷಗಳ ಕಾಲ ಜೊತೆಯಾಗಿದ್ದವೆಂದು ನಾವು ಊಹಿಸಬಹುದು. ಅಂದರೆ ಅಷ್ಟು ಕಾಲ ಒಂದೋ ಅವರಿಬ್ಬರೂ ಸಹಬಾಳ್ವೆೆ ಮಾಡಿದರು ಅಥವಾ ಸಂಘರ್ಷದಲ್ಲಿದ್ದರು.

ತಥಾಕಥಿತ ಬುದ್ಧಿಿಜೀವಿಗಳ ಸಿದ್ಧಾಾಂತ ಹಿಡಿದುಹೋದರೆ, ಆರ್ಯರು ತಮಿಳರ ಜೊತೆ ಸಹಬಾಳ್ವೆೆ ನಡೆಸಿದರು ಎಂಬ ವಾದವನ್ನು ನಾವು ಕೈ ಬಿಡಬೇಕಾಗುತ್ತದೆ. ಹಾಗಾದರೆ ಅವರಿಬ್ಬರೂ ನಿರಂತರವಾಗಿ, ನೂರಾರು ವರ್ಷಗಳ ಕಾಲ ಯುದ್ಧ, ಕಾಳಗ, ಸಂಘರ್ಷಗಳಲ್ಲಿ ತೊಡಗಿದ್ದರು ಎಂದು ಭಾವಿಸಬೇಕಾಗುತ್ತದೆ. ಅಂಥ ಯುದ್ಧ ಯಾವಾಗ ನಡೆಯಿತು? ಯಾವ ಇಸವಿಯಲ್ಲಿ? ಅಂಥದೊಂದು ಯುದ್ಧ ನಡೆದದ್ದಕ್ಕೆೆ ಪುರಾತತ್ತ್ವ ಇಲಾಖೆ ಏನಾದರೂ ಸಾಕ್ಷಿ ಕಂಡುಹಿಡಿದಿದೆಯೆ? ಯಾವುದಾದರೂ ಉತ್ಖನನದಲ್ಲಿ ಆರ್ಯ – ತಮಿಳು ಜನರ ನಡುವಿನ ಯುದ್ಧಕ್ಕೆೆ ಪುರಾವೆಗಳು ಸಿಕ್ಕಿಿವೆಯೆ? ಈ ಎರಡು ಪಂಗಡಗಳ ಲಿಖಿತ/ಮೌಖಿಕ ಸಾಹಿತ್ಯದಲ್ಲಿ ಪುರಾವೆ ಇದೆಯೆ? ಈ ಎಲ್ಲ ಪ್ರಶ್ನೆೆಗಳಿಗೂ ಇಲ್ಲ ಎಂಬುದೇ ಖಚಿತವಾದ ಉತ್ತರ. ಆರ್ಯರು ತಮಿಳರನ್ನು ತುಳಿದ, ತಮಿಳರು ಆರ್ಯರಿಂದ ಆಳಿಸಿಕೊಂಡ ಯಾವೊಂದು ಘಟನೆಗೂ ಯಾರೊಬ್ಬರ ಬಳಿಯಲ್ಲೂ ಆಧಾರಗಳಿಲ್ಲ. ಆಧಾರವಿಲ್ಲದ ಶಬ್ದಗೋಪುರ ಕೇವಲ ಊಹೆ ಆಗುತ್ತದೆಯೇ ವಿನಾ ವೈಜ್ಞಾಾನಿಕ ಸಿದ್ಧಾಾಂತ ಆಗುವುದಿಲ್ಲ.

ಇನ್ನೊೊಂದು ವಿಷಯವನ್ನು ಗಮನಿಸಬೇಕು. ಎಡ ಚರಿತ್ರಕಾರರ ಪ್ರಕಾರ, ಭಾರತದ ಮೇಲೆ ದಂಡೆತ್ತಿಿ ಬಂದ ಆರ್ಯರು ದ್ರಾಾವಿಡರನ್ನು ದಕ್ಷಿಣಕ್ಕೆೆ ತಳ್ಳಿಿದರು. ಇಲ್ಲಿ ಕೆಲವೊಂದು ಪ್ರಶ್ನೆೆಗಳು ಏಳುತ್ತವೆ. (1) ಆರ್ಯರು ಎಲ್ಲ ದ್ರವಿಡರನ್ನೂ ದಕ್ಷಿಣಕ್ಕೆೆ (ಅಂದರೆ ಒಂದೇ ದಿಕ್ಕಿಿಗೆ) ತಳ್ಳಲು ಕಾರಣವೇನು? ಆ ದ್ರವಿಡರು ಪೂರ್ವಕ್ಕೆೆ ಅಥವಾ ಈಶಾನ್ಯಕ್ಕೆೆ ಯಾಕೆ ಹೋಗಲಿಲ್ಲ? (2) ಉತ್ತರದಲ್ಲಿದ್ದ ಎಲ್ಲ ದ್ರವಿಡರೂ ಒಟ್ಟಾಾಗಿ ದಕ್ಷಿಣಕ್ಕೆೆ ತಳ್ಳಲ್ಪಟ್ಟರು ಎಂದರೆ ಅವರು ಇಲ್ಲಿ ದಕ್ಷಿಣದಲ್ಲಿ ಅದಾಗಲೇ ಇದ್ದ ಬೇರೆ ಮೂಲನಿವಾಸಿಗಳನ್ನು ಕೂಡ ಒತ್ತುವರಿ ಮಾಡಿದರು ಎಂದಾಗುತ್ತದಲ್ಲವೆ? ಹಾಗೆ ಒತ್ತುವರಿ ಮಾಡಲ್ಪಟ್ಟ ಮೂಲನಿವಾಸಿಗಳಿಗೆ ಏನು ಹೆಸರು? ಅವರು ಎಲ್ಲಿ ಹೋದರು? (3) ದ್ರವಿಡರೆಲ್ಲರೂ ದಕ್ಷಿಣಕ್ಕೆೆ ಬಂದರು ಎಂದಾಗ, ದಕ್ಷಿಣದಲ್ಲಿ ಬೇರೊಂದು ಸಂಸ್ಕೃತಿ, ಭಾಷೆ ಇತ್ತು ಎಂದಾಗುತ್ತದೆ.

ಆ ಸಂಸ್ಕೃತಿ, ಭಾಷೆ ದ್ರವಿಡರ ಈ ಒತ್ತುವರಿಯಿಂದಾಗಿ ನಾಶವಾದವು ಎಂದು ಭಾವಿಸಬೇಕಾಗುತ್ತದೆ. ಅಂದರೆ ಆರ್ಯರು ದ್ರವಿಡರ ಮೇಲೆ ಏನು ಮಾಡಿದರೋ ಅದನ್ನು ದ್ರವಿಡರು ಭಾರತದ ದಕ್ಷಿಣದ ಮೂಲನಿವಾಸಿಗಳ ಮೇಲೆ ಮಾಡಿದರು ಎಂದಾಯಿತು! (4) ಇಪ್ಪತ್ತನೇ ಶತಮಾನದ ಕ್ರೈಸ್ತ ಮಿಷನರಿ ಕಾಲ್‌ಡ್‌‌ವೆಲ್ ಪ್ರಕಾರ ದ್ರವಿಡಭಾಷೆಗಳು ಐದು: ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ತುಳು. ಈ ಐದೂ ಭಾಷೆಗಳು ನಿರ್ದಿಷ್ಟ ಪ್ರಾಾಂತ್ಯಗಳಲ್ಲಷ್ಟೇ ಬಳಕೆಯಲ್ಲಿವೆ. ದ್ರಾಾವಿಡರು ದಕ್ಷಿಣ ಭಾರತಕ್ಕೆೆ ಒತ್ತಲ್ಪಟ್ಟಾಾಗ ಈ ಭಾಷಾ ವಿಭಜನೆ ಹೇಗೆ ಸಾಧ್ಯವಾಯಿತು? ಅಂದರೆ ತಮಿಳರೆಲ್ಲರೂ ಒಂದು ಭಾಗದಲ್ಲಿ, ಕನ್ನಡಿಗರೆಲ್ಲರೂ ಇನ್ನೊೊಂದು ಭಾಗದಲ್ಲಿ, ಮಲಯಾಳಿಗರೆಲ್ಲರೂ ಮತ್ತೊೊಂದು ಭಾಗದಲ್ಲಿ ಎಂಬಂತೆ ಅತ್ಯಂತ ನಿಷ್ಕೃಷ್ಟವಾಗಿ ಐದು ಪ್ರಾಾಂತ್ಯಗಳಲ್ಲಿ ಹಂಚಿಹೋದದ್ದು ಹೇಗೆ? ಇದು ಒಂದು ಸಂಶೋಧನಾರ್ಹ ಸಂಗತಿಯಾಗಿದೆ! (5) ಆರ್ಯರು ದ್ರವಿಡರ ಮೇಲೆ ದಾಳಿ ಮಾಡಿದಾಗ ದ್ರವಿಡರು ತಮ್ಮ ಉತ್ತರ ಭಾರತದ ವಾಸ್ತವ್ಯವನ್ನು ಬಿಟ್ಟುಕೊಟ್ಟರೇ ವಿನಾ ತಮ್ಮ ಭಾಷೆ, ಸಂಸ್ಕೃತಿಯನ್ನಲ್ಲ. ಯಾಕೆಂದರೆ ಇಂದಿಗೂ ಆ ಎಲ್ಲ ದ್ರವಿಡ ಭಾಷೆಗಳು ಚಾಲ್ತಿಿಯಲ್ಲಿವೆ.

ಹಾಗೆಯೇ ದ್ರಾಾವಿಡರು ದಕ್ಷಿಣ ಭಾರತಕ್ಕೆೆ ಒತ್ತಲ್ಪಟ್ಟಾಾಗ ಇಲ್ಲಿದ್ದ ಮೂಲನಿವಾಸಿಗಳು ಕೂಡ ತಮ್ಮ ಭಾಷೆಯನ್ನು ಉಳಿಸಿಕೊಂಡಿದ್ದಿರಲೇಬೇಕಲ್ಲವೆ? ಆ ಭಾಷೆಗಳು ಈಗ ಎಲ್ಲಿವೆ? ಯಾರು ಮಾತಾಡುತ್ತಿಿದ್ದಾಾರೆ? ಒಂದು ವೇಳೆ ನಾಮಾವಶೇಷವಾದವು ಎಂದು ಊಹಿಸುವುದಾದರೆ ದ್ರಾಾವಿಡರು ಇಲ್ಲಿನ ಮೂಲನಿವಾಸಿಗಳ ಮೇಲೆ ಬರ್ಬರ ಆಕ್ರಮಣ ಮಾಡಿದರು; ಇಲ್ಲಿನ ಮೂಲನಿವಾಸಿಗಳನ್ನು ಸಂಪೂರ್ಣವಾಗಿ ನಾಶ ಮಾಡಿದ್ದಲ್ಲದೆ ಅವರ ಭಾಷೆಗಳನ್ನು ಕೂಡ ನಿರ್ನಾಮ ಮಾಡಿದರು ಎಂದು ಭಾವಿಸಬೇಕು ಅಲ್ಲವೆ? (6) ಆರ್ಯರು ದ್ರಾಾವಿಡರ ಮೇಲೆ ಆಕ್ರಮಣ ಮಾಡಿದ್ದನ್ನು ದ್ರಾಾವಿಡರು ದಾಖಲಿಸಲಿಲ್ಲ ನಿಜ.

ಯಾಕೆಂದರೆ ಅವರಿಗೆ ಅದೊಂದು ಅಪಮಾನಕರ ಸಂಗತಿಯಾಗಿತ್ತು ಎಂದು ಭಾವಿಸೋಣ. ಆದರೆ ಅವರು ದಕ್ಷಿಣ ಭಾರತದಲ್ಲಿ ತಮ್ಮ ಹೊಸ ನೆಲೆ ಕಂಡುಕೊಂಡ ಬಗ್ಗೆೆ ಕೂಡ ಯಾಕೆ ಬರೆದುಕೊಳ್ಳಲಿಲ್ಲ? (7) ಹೆಚ್ಚಾಾಗಿ ಯಾವುದೇ ಒಂದು ಜನಾಂಗ ಒಂದೆಡೆಯಿಂದ ಇನ್ನೊೊಂದೆಡೆ ಹೋಗಿ ನೆಲೆಸಿದಾಗ ತನ್ನ ಮೂಲ ನೆಲೆಯನ್ನು ಸಾಹಿತ್ಯದ ಮೂಲಕ ಮತ್ತೆೆ ಮತ್ತೆೆ ನೆನಪಿಸಿಕೊಳ್ಳುವ ಕೆಲಸವನ್ನು ಮಾಡುತ್ತದೆ (ಉದಾ: ಯಹೂದ್ಯರು). ದ್ರಾಾವಿಡರು ಯಾಕೆ ತಮ್ಮ ಉತ್ತರ ಭಾರತದ ನೆಲೆಗಳ ಬಗ್ಗೆೆ ಸಾಹಿತ್ಯದಲ್ಲಿ ಪ್ರಸ್ತಾಾಪ ಮಾಡಲಿಲ್ಲ? ಅದೇ ರೀತಿಯಲ್ಲಿ, ಆರ್ಯರು ಯಾಕೆ ಭಾರತಕ್ಕೆೆ ಬರುವುದಕ್ಕೆೆ ಮೊದಲು ತಮ್ಮ ನೆಲೆಯಾಗಿದ್ದ ಜಾಗದ ಪ್ರಸ್ತಾಾಪವನ್ನು ತಮ್ಮ ಸಾಹಿತ್ಯದಲ್ಲಿ ತರಲಿಲ್ಲ?

ಒಂದು ಜನಾಂಗ ಇನ್ನೊೊಂದರ ಮೇಲೆ ಆಕ್ರಮಣ ಮಾಡಿದಾಗ ಆಕ್ರಮಣ ಮಾಡಿದ್ದ ಜನಾಂಗ ತಾನೇ ಎಲ್ಲರನ್ನೂ ಉದ್ಧರಿಸಿದೆ ಎಂಬ ಮತ್ತು ಆಕ್ರಮಣಕ್ಕೊೊಳಗಾದ ಜನಾಂಗ ತಾನು ಅನ್ಯಾಾಯಕ್ಕೊೊಳಗಾದೆ ಎಂಬ ಭಾವವನ್ನು ಹಲವು ರೀತಿಗಳಲ್ಲಿ ಅಭಿವ್ಯಕ್ತಗೊಳಿಸುವುದನ್ನು ನಾವು ನೋಡಬಹುದು. ಉದಾಹರಣೆಗೆ ಬ್ರಿಟಿಷರು ಜಗತ್ತಿಿನ ಎಲ್ಲೆೆಲ್ಲಿ ವಸಾಹತುಗಳನ್ನು ಸ್ಥಾಾಪಿಸಿ ಬೇರೆ ಜನರನ್ನು ಆಳಿದರೋ ಆ ಎಲ್ಲ ಕಡೆಗಳಲ್ಲೂ ಬ್ರಿಿಟಷರ ಅನ್ಯಾಾಯವನ್ನು ಪ್ರತಿಭಟಿಸುವಂಥ ಸಾಹಿತ್ಯ ಮೂಡಿಬಂದಿದೆ. ಬ್ರಿಟಿಷರ ಅತಿ ಕಟು ದಬ್ಬಾಾಳಿಕೆಗೆ ಒಳಗಾದ ಆಫ್ರಿಿಕನ್ನರು ಕೂಡ ತಮ್ಮ ಕರಾಳ ನೆನಪುಗಳನ್ನು ಕೃತಿಗಳಲ್ಲಿ ದಾಖಲಿಸಿದ್ದಾಾರೆ. ಆದರೆ ಭಾರತದ ಕಳೆದ ಮೂರ್ನಾಲ್ಕು ಸಾವಿರ ವರ್ಷಗಳ ಇತಿಹಾಸ ನೋಡಿದರೆ ಇಲ್ಲಿ ಆರ್ಯರಿಂದ ನಾವು ತುಳಿಸಿಕೊಂಡೆವು ಎಂದು ಯಾವ ಜನಾಂಗವೂ ಬರೆದುಕೊಂಡದ್ದನ್ನು ನಾವು ಕಾಣಲಾರೆವು.

ಅಸಲಿಗೆ, ಆರ್ಯ ಎಂಬ ಜನಾಂಗದ ಉಲ್ಲೇಖವೇ ಭಾರತದ ಯಾವ ಸಾಹಿತ್ಯದಲ್ಲೂ ಬರುವುದಿಲ್ಲ! ಹಾಗಾಗಿ ಆರ್ಯರ ಆಕ್ರಮಣ ಎಂಬ ಸಿದ್ಧಾಾಂತವನ್ನು ವೈಜ್ಞಾಾನಿಕವಾಗಿ ವಿಶ್ಲೇಷಣೆಗೊಳಪಡಿಸುವುದೇ ಆದರೆ ಮೊದಲ ಹಂತದಲ್ಲೇ ಅದು ತಿರಸ್ಕೃತವಾಗಿಬಿಡುತ್ತದೆ. ತಮ್ಮ ಮೇಲೆ ಆಕ್ರಮಣ ಮಾಡಿದವರು ಆರ್ಯರು ಎಂದು ದ್ರಾಾವಿಡರು; ತಮ್ಮಿಿಂದ ಸೋಲುಂಡವರು ದ್ರಾಾವಿಡರು ಎಂದು ಆರ್ಯರು ಎಲ್ಲೂ ದಾಖಲಿಸಿದ ವಿವರಗಳೇ ನಮಗೆ ಸಿಕ್ಕಿಿಲ್ಲ – ಸಾಹಿತ್ಯದ ರೂಪದಲ್ಲೂ ಆರ್ಕಿಯಾಲಜಿ ವಿಭಾಗದವರು ಅಗೆದು ತೆಗೆವ ಕಲ್ಲು ಮಣ್ಣುಗಳ ಪ್ರತಿಕೃತಿಗಳ ರೂಪದಲ್ಲೂ.

ನಮ್ಮ ವಾದದ ಎರಡನೆ ಮುಖ್ಯ ಅಂಶದತ್ತ ಬರೋಣ. ಒಂದು ಭಾಷೆ ಇನ್ನೊೊಂದರ ಮೇಲೆ ಅಧಿಪತ್ಯ ಸಾಧಿಸಬೇಕಾದರೆ ಆಕ್ರಮಣಕ್ಕೊೊಳಗಾದವರಲ್ಲಿ ಯಾರೊಬ್ಬರನ್ನೂ ಉಳಿಸದಂತೆ ಆಕ್ರಮಣಕಾರರು ನಾಶ ಮಾಡಬೇಕು – ಎಂಬುದೇ ಈ ಎರಡನೇ ಅಂಶ. ಇದಕ್ಕೆೆ ಜಾಗತಿಕ ಇತಿಹಾಸದಲ್ಲಿ ಹಲವು ಉದಾಹರಣೆಗಳು ನಮಗೆ ಸಿಗುತ್ತವೆ. ಲ್ಯಾಾಟಿನ್ ಅಮೆರಿಕಾದ ಅನೇಕ ಪ್ರಾಾಂತ್ಯಗಳಲ್ಲಿ ಈ ಬಗೆಯ ದಾಳಿಗಳಾದವು. ಯುರೋಪ್‌ನಿಂದ ಬಂದ ಸ್ಪ್ಯಾಾನಿಷರು ಮತ್ತು ಪೋರ್ಚುಗೀಸರು ಲ್ಯಾಾಟಿನ್ ಅಮೆರಿಕನ್ ದೇಶಗಳಲ್ಲಿ ನಡೆಸಿದ್ದು ಇಂಥ ಪಾಶವೀ ಆಕ್ರಮಣಗಳನ್ನೇ. ಅಲ್ಲಿ ಮೂಲನಿವಾಸಿಗಳಾಗಿದ್ದ ಜನರನ್ನು ಅವರು ಒಂದೋ ಬಲವಂತವಾಗಿ ತಮ್ಮ ಮತಕ್ಕೆೆ ಸೇರಿಸಿಕೊಂಡರು, ಇಲ್ಲವೇ ಕೊಂದುಹಾಕಿದರು.

ಮೂಲನಿವಾಸಿಗಳ ಎಲ್ಲ ಲಿಖಿತ ಸಾಹಿತ್ಯವನ್ನೂ – ಒಂದು ಪುಟವೂ ಉಳಿಯದಂತೆ – ರಾಶಿ ಹಾಕಿ ಬೆಂಕಿ ಕೊಡಲಾಯಿತು. ಮಾಯನ್ನರ ಸಾವಿರಾರು ಪುಸ್ತಕಗಳು ನಾಶವಾದದ್ದು ಹೀಗೆ. ಆದರೆ ನಮ್ಮಲ್ಲಿ ಎಡಪಂಥೀಯ ಚರಿತ್ರಕಾರರ ಪ್ರಕಾರ ಆರ್ಯರು ಒಂದೆರಡು ಸಾವಿರ ವರ್ಷಗಳ ಹಿಂದಷ್ಟೇ ದ್ರಾಾವಿಡರ ಮೇಲೆ ಆಕ್ರಮಣ ಮಾಡಿದ್ದು. ಆದರೆ ಅವರು ದ್ರಾಾವಿಡರ ಭಾಷೆಯನ್ನಾಾಗಲೀ ಸಾಹಿತ್ಯವನ್ನಾಾಗಲೀ ನಾಶ ಮಾಡಲಿಲ್ಲ ಎಂಬುದಕ್ಕೆೆ ಅಷ್ಟೇ ಸಾವಿರ ವರ್ಷಗಳಿಂದ ಜೀವಂತವಿರುವ ದ್ರವಿಡ ಭಾಷೆ ಮತ್ತು ಸಾಹಿತ್ಯ ಸಾಕ್ಷಿ. ತಮಿಳರು ತಮ್ಮದು ಅಭಿಜಾತ ಭಾಷೆ; ಎರಡೂವರೆ ಸಾವಿರ ವರ್ಷಗಳಿಂದ ಅದರ ಸಾಹಿತ್ಯವಿದೆ ಎಂದು ಹೇಳುತ್ತಾಾರೆ, ಅದಕ್ಕೆೆ ಉದಾಹರಣೆಯಾಗಿ ಸಂಗಂ ಸಾಹಿತ್ಯವನ್ನು ತೋರುತ್ತಾಾರೆ. ಆದ್ದರಿಂದ ಆರ್ಯರು ಇಲ್ಲಿ ಬೇರೆ ಭಾಷೆಗಳನ್ನು ತುಳಿಯುವ ಕೆಲಸ ಮಾಡಲಿಲ್ಲ ಎಂಬುದನ್ನು ಇತ್ತಂಡಗಳೂ ಒಪ್ಪುುತ್ತವೆ ಎನ್ನಬಹುದು.

ಭಾರತದಲ್ಲಿ ಪೋರ್ಚುಗೀಸರು ಬರೋಬ್ಬರಿ 400 ವರ್ಷಗಳ ಕಾಲ ಗೋವಾ ಪ್ರಾಾಂತ್ಯದಲ್ಲಿ ಆಳಿದರು; ಅಲ್ಲಿನ ಗೌಡ ಸಾರಸ್ವತರನ್ನು ಅವರು ಕ್ರಿಿಶ್ಚಿಿಯಾನಿಟಿಗೆ ಮತಾಂತರಿಸಿದರು. ಆದರೆ ಮತಾಂತರವಾದ ಜನ ತಮ್ಮ ಮೂಲಭಾಷೆಯನ್ನು ಬಿಟ್ಟು ಪೋರ್ಚುಗೀಸ್ ಅನ್ನು ಅಪ್ಪಿಿಕೊಳ್ಳಲಿಲ್ಲ. ಅವರು ಇಂದಿಗೂ ತಮ್ಮ ವ್ಯವಹಾರ ಭಾಷೆಯಾಗಿ ಕೊಂಕಣಿಯನ್ನೇ ಉಳಿಸಿಕೊಂಡಿದ್ದಾಾರೆ. ಕರಾವಳಿಯುದ್ದಕ್ಕೆೆ ಹರಡಿರುವ ಎಲ್ಲ (ಮತಾಂತರಗೊಂಡ) ಕ್ರೈಸ್ತರ ಮನೆಭಾಷೆಯೂ ಕೊಂಕಣಿಯೇ.

ಅದರಲ್ಲಿ ಅಲ್ಲಿಲ್ಲಿ 1-2% ಪೋರ್ಚುಗೀಸ್‌ನ ಪ್ರಭಾವ ಇರಬಹುದು ಅಷ್ಟೆೆ. ಮುಘಲರು ಮತ್ತು ಅಫ್ಘಾಾನ್ ಕಡೆಯಿಂದ ಬಂದ ಮುಸ್ಲಿಿಮ್ ವಂಶಸ್ಥರು ಕನಿಷ್ಠ ನಾಲ್ಕುನೂರು ವರ್ಷಗಳ ಕಾಲ ಭಾರತದ ವಿವಿಧ ಭಾಗಗಳನ್ನು ತಮ್ಮ ಕೈಯೊಳಗಿರಿಸಿಕೊಂಡಿದ್ದರು. ಆದರೂ ಜನ ಪರ್ಷಿಯನ್, ಅರೇಬಿಕ್ ಭಾಷೆಗಳನ್ನು ಒಪ್ಪಿಿಕೊಳ್ಳಲೇ ಇಲ್ಲ. ಅರೇಬಿಯನ್ ಜನ ಪರ್ಷಿಯಾ ದೇಶದ ಮೇಲೆ ಆಕ್ರಮಣ ಮಾಡಿ ಬಲವಂತದಿಂದ ಅಲ್ಲಿ ತಮ್ಮ ಸಾಮ್ರಾಾಜ್ಯ ಸ್ಥಾಾಪನೆ ಮಾಡಿದರೂ ಪರ್ಷಿಯಾದ ಮೂಲನಿವಾಸಿಗಳು ಅರೇಬಿಕ್ ಅನ್ನು ತಮ್ಮ ರಾಜ್ಯಭಾಷೆ ಎಂದು ಎಂದಿಗೂ ಒಪ್ಪಿಿಕೊಳ್ಳಲಿಲ್ಲ. ಇಂದು ಅದು ಇರಾನ್ ಆಗಿದೆ; ಪಾರ್ಸಿಗಳು ಅಲ್ಪಸಂಖ್ಯಾಾತರು; ಮುಸ್ಲಿಿಮರದ್ದೇ ಪ್ರಾಾಬಲ್ಯ ಎಲ್ಲವೂ ನಿಜ. ಆದರೆ ಅವರ ರಾಜ್ಯಭಾಷೆ ಮಾತ್ರ ಪರ್ಷಿಯನ್ ಆಗಿಯೇ ಉಳಿದಿದೆ.

ರಷ್ಯದ ವಿಷಯದಲ್ಲೂ ಇದು ನಿಜ. ತನ್ನ ಅಕ್ಕಪಕ್ಕದ ಹಲವಾರು ಪ್ರಾಾಂತ್ಯಗಳನ್ನು ರಷ್ಯ ಹಕ್ಕಿಿನಿಂದ ಎಂಬಂತೆ ತೆಕ್ಕೆೆಯೊಳಗಿಟ್ಟುಕೊಂಡರೂ ಆ ಯಾವ ಪ್ರಾಾಂತ್ಯಗಳಲ್ಲೂ ರಷ್ಯನ್ ಅನ್ನು ರಾಜ್ಯಭಾಷೆಯಾಗಿ ತರಲು ಅದಕ್ಕೆೆ ಸಾಧ್ಯವಾಗಲಿಲ್ಲ. ಅವೆಲ್ಲವೂ ತಮ್ಮ ಪ್ರಾಾಂತೀಯ ಭಾಷೆಗಳನ್ನೇ ಉಳಿಸಿಕೊಂಡವು. ಇದೆಲ್ಲದರ ಅರ್ಥವೇನು ಎಂದರೆ, ಒಂದು ಭಾಷೆ/ಜನಾಂಗ ಇನ್ನೊೊಂದು ಭಾಷೆ/ಜನಾಂಗದ ಮೇಲೆ ಆಕ್ರಮಣ ಮಾಡಿದಾಗ, ತನ್ನನ್ನು ಒಪ್ಪಿಿಕೊಳ್ಳುವಂತೆ ಮಾಡಬೇಕಾದರೆ ಆಕ್ರಮಣಕ್ಕೊೊಳಗಾದ ಜನಾಂಗ/ಭಾಷೆಯನ್ನು ಸಂಪೂರ್ಣವಾಗಿ ಮುಗಿಸುವುದೊಂದೇ ದಾರಿ. ಆರ್ಯರು ಭಾರತಕ್ಕೆೆ ಬಂದು ಉತ್ತರ ಭಾಗದ ಮೇಲೆ ಆಕ್ರಮಣ ಮಾಡಿದರು ಎಂಬುದು ನಿಜವಾದರೆ, ಉತ್ತರದಲ್ಲಿ ಅವರ ಆಕ್ರಮಣವನ್ನು ಸಹಿಸಿಕೊಂಡು ಉಳಿದವರು ತಂತಮ್ಮ ದ್ರವಿಡ ಭಾಷೆಗಳನ್ನೇ ಆಡಬೇಕಾಗಿತ್ತು. ಅದು ಸಂಸ್ಕೃತದಿಂದ ಮೈಲಿಗೆಯಾಗದಂತೆ ಶುದ್ಧ ರೂಪದಲ್ಲಿ ಉಳಿಸಿಕೊಳ್ಳಬೇಕಾಗಿತ್ತು. ಆದರೆ ಅಂಥ ಕುರುಹುಗಳೇನೂ ನಮಗೆ ಕಾಣಬರುವುದಿಲ್ಲ.

ಆಕ್ರಮಣ ಮಾಡಿದವರು ಒಂದು ಜಾಗದ ಸಂಪೂರ್ಣ ಹಿಡಿತ ಪಡೆದ ಮೇಲೆ ಅಲ್ಲಿ ತಮ್ಮ ಪ್ರಭುತ್ವ ಹೇರಿದಾಗ ಅಲ್ಲಿನ ಮೂಲನಿವಾಸಿಗಳ ಭಾಷೆ ಉಸಿರುಗಟ್ಟಿಿ ಸಾಯುತ್ತದೆ. ಇದಕ್ಕೆೆ ಒಂದು ಉದಾಹರಣೆ ಟಿಪ್ಪುು. ಮೈಸೂರಿನಲ್ಲಿ ಒಡೆಯರ್ ಆಡಳಿತವಿದ್ದಾಾಗ ಇಡೀ ಪ್ರಾಾಂತ್ಯದಲ್ಲಿ ಕನ್ನಡ ರಾಜಭಾಷೆ, ರಾಜ್ಯಭಾಷೆ ಆಗಿತ್ತು. ಟಿಪ್ಪುು ಒಡೆಯರನ್ನು ಗೃಹಬಂಧನದಲ್ಲಿಟ್ಟು ಅಧಿಕಾರಸೂತ್ರ ಕಿತ್ತುಕೊಂಡಾಗ, ಎಲ್ಲೆೆಲ್ಲೂ ಫಾರಸಿ ಭಾಷೆ ತನ್ನ ದೌಲತ್ತು ಮೆರೆಯಿತು. ಟಿಪ್ಪುುವಿನ ಆಡಳಿತ ಕೆಲವೇ ವರ್ಷಗಳಿಗೆ ಸೀಮಿತವಾಗಿದ್ದರೂ ಇಂದಿಗೂ ಮೈಸೂರು ಬಿಡಿ, ಇಡೀ ಕರ್ನಾಟಕದಲ್ಲಿ ಒಂದು ವರ್ಗ ಕನ್ನಡವನ್ನು ತನ್ನ ತಾಯ್ನುಡಿಯಾಗಿ ಒಪ್ಪಿಿಕೊಂಡೇ ಇಲ್ಲ.

ಉತ್ತರಭಾರತವನ್ನು ಆರ್ಯರು ಸಂಪೂರ್ಣವಾಗಿ ಆಕ್ರಮಿಸಿಕೊಂಡು ದ್ರಾಾವಿಡರನ್ನು ದಕ್ಷಿಣಕ್ಕೆೆ ತಳ್ಳಿಿದಾಗ, ಆ ಅಷ್ಟೂ ಪ್ರದೇಶದಲ್ಲಿ ಅವರದ್ದೇ ಆಡಳಿತ ಪ್ರಾಾರಂಭವಾಗಬೇಕಿತ್ತು. ಈ ರೀತಿ ರಾಜಕೀಯ ಅಧಿಕಾರ ಹಿಡಿದಾಗ ಅಲ್ಲಿ ಹಿಂದೆ ಇದ್ದ ಭಾಷೆಯನ್ನು ಕುಗ್ಗಿಿಸಿ ಜಗ್ಗಿಿಸಿ ಮೂಲೆಗುಂಪು ಮಾಡಬಹುದೇ ವಿನಾ ಪೂರ್ತಿಯಾಗಿ ನಾಶ ಮಾಡಲು ಹಲವು ನೂರು ವರ್ಷಗಳೇ ಬೇಕಾಗುತ್ತವೆ. ಯಾರು ಅಲ್ಲಿ ರಾಜಕೀಯ ಅಧಿಕಾರವನ್ನು ಕಳೆದುಕೊಂಡರೋ ಅವರು ಮತ್ತೆೆ ಮತ್ತೆೆ ತಮ್ಮ ಪದವಿ ಮತ್ತು ರಾಜ್ಯವನ್ನು ಮರಳಿಪಡೆಯಲು ಯತ್ನಿಿಸುವುದು ನಡೆದೇ ಇರುತ್ತದೆ. ಇದು ಒಂದು ಸುದೀರ್ಘ ಯುದ್ಧ/ಸಂಘರ್ಷಕ್ಕೆೆ ಕಾರಣವಾಗಬಹುದು.

ದಕ್ಷಿಣಕ್ಕೆೆ ಒತ್ತಲ್ಪಟ್ಟ ದ್ರಾಾವಿಡರು ಆರ್ಯರ ಮೇಲೆ ಅಂಥದೊಂದು ನಿರಂತರ ಕಾಳಗವನ್ನು ಜಾರಿಯಲ್ಲಿಡಬೇಕಿತ್ತು. ತಮ್ಮ ಭೂಮಿಯನ್ನು ಮರಳಿಪಡೆಯಲು ಇನ್ನಿಿಲ್ಲದ ಯತ್ನ ಮಾಡಬೇಕಿತ್ತು. ಆದರೆ ಅಂಥ ಯಾವುದೇ ಪ್ರತಿರೋಧವನ್ನೂ ದ್ರವಿಡರು ತೋರಿಸದೇ ಇದ್ದುದು ಅಚ್ಚರಿಯ ಸಂಗತಿ! ಆರ್ಯರು ಉತ್ತರದಲ್ಲಿ ತಮ್ಮ ರಾಜ್ಯಸ್ಥಾಾಪನೆ ಮಾಡಿದ್ದಷ್ಟೇ ಅಲ್ಲ, ಅಲ್ಲಿ ಒಬ್ಬನೇ ಒಬ್ಬ ದ್ರವಿಡನೂ ಉಳಿಯದಂತೆ ಪ್ರತಿಯೊಬ್ಬನನ್ನೂ ದಕ್ಷಿಣಕ್ಕೆೆ ಕಳಿಸಿಬಿಟ್ಟದ್ದು ಕೂಡ ನ ಭೂತೋ ನ ಭವಿಷ್ಯತಿ ಎಂಬಂಥ ವಿಸ್ಮಯವೇ.

ಆರ್ಯರಿಂದ ತುಳಿಸಿಕೊಂಡು ದಕ್ಷಿಣಕ್ಕೆೆ ಒಗೆಯಲ್ಪಟ್ಟ ದ್ರವಿಡರಲ್ಲಿ ಯಾರೊಬ್ಬರೂ ಉತ್ತರದ ತಮ್ಮ ಮಾತೃಭೂಮಿಯ ಮೇಲೆ ಹಕ್ಕುಸ್ಥಾಾಪನೆ ಮಾಡಲಿಲ್ಲ. ಉತ್ತರದಲ್ಲಿ ತಾವು ಇಂತಿಂಥ ಜಾಗಗಳಲ್ಲಿದ್ದೆೆವೆಂಬುದರ ನೆನಪನ್ನೂ ಮಾಡಿಕೊಳ್ಳಲಿಲ್ಲ! ಉತ್ತರದಲ್ಲಿ ತಮ್ಮ ರಾಜ್ಯ ಎಲ್ಲಿತ್ತು, ರಾಜಧಾನಿ ಯಾವುದಾಗಿತ್ತು ಎಂಬ ಯಾವ ವಿವರಗಳನ್ನೂ ಈ ದ್ರಾಾವಿಡರು ಶಾಸನಗಳಲ್ಲಿ, ಕಾವ್ಯಗ್ರಂಥಗಳಲ್ಲಿ ಬರೆದಿಡಲಿಲ್ಲ! ಆದರೆ ಇದಕ್ಕೆೆ ವ್ಯತಿರಿಕ್ತವೆಂಬಂತೆ ಇದೇ ದ್ರಾಾವಿಡರು ಆರ್ಯರನ್ನು ಮತ್ತೆೆ ದಕ್ಷಿಣ ದೇಶಗಳೊಳಗೆ ಬಿಟ್ಟುಕೊಂಡರು. ಆರ್ಯರ ವ್ಯಾಾಕರಣ, ಭಾಷಾಶಾಸ್ತ್ರಗಳನ್ನು ತಮ್ಮದಾಗಿಸಿಕೊಂಡರು. ಆರ್ಯರು ಹಾಕಿಕೊಟ್ಟ ಚೌಕಟ್ಟಿಿನಲ್ಲಿ ಮಹಾಕಾವ್ಯಗಳನ್ನು ಬರೆದರು.

ಆರ್ಯರ ರಾಮಾಯಣ, ಭಾರತ ಮಹಾಕಾವ್ಯಗಳನ್ನೇ ಒಪ್ಪಿಿಕೊಂಡು ಅವನ್ನು ತಮ್ಮ ಭಾಷೆಗಳಲ್ಲಿ ತಂದರು. ಆರ್ಯರ ದೇವತೆಗಳನ್ನು ತಮ್ಮ ದೇವತೆಗಳು ಎಂದು ಮುಕ್ತ ಮನಸ್ಸಿಿನಿಂದ ಒಪ್ಪಿಿಕೊಂಡರು. ಬೃಹದೀಶ್ವರ, ಮೀನಾಕ್ಷಿ, ಕಾಮಾಕ್ಷಿ, ಅನಂತ ಪದ್ಮನಾಭ, ನಾರಾಯಣ, ಕೃಷ್ಣ ಮುಂತಾದ ಎಲ್ಲ ಆರ್ಯದೇವತೆಗಳ ದೊಡ್ಡ ದೊಡ್ಡ ದೇವಸ್ಥಾಾನಗಳನ್ನು ತಮ್ಮ ರಾಜ್ಯಗಳೊಳಗೆ ಸ್ಥಾಾಪನೆಯಾಗುವುದಕ್ಕೆೆ ಅವಕಾಶ ಕೊಟ್ಟರು. ಅಂತೂ ಒಂದೇ ಸರಳ ಮಾತಲ್ಲಿ ಹೇಳುವುದಾದರೆ ಆರ್ಯರು ಭಾರತಕ್ಕೆೆ ಬಂದು ಉತ್ತರವನ್ನು ಆಕ್ರಮಿಸಿಕೊಂಡು ದ್ರವಿಡರನ್ನು ದಕ್ಷಿಣಕ್ಕೆೆ ತಳ್ಳಿಿದ್ದು ಮಾತ್ರವಲ್ಲ, ದಕ್ಷಿಣದಲ್ಲೂ ತಮ್ಮ ಸಾಂಸ್ಕೃತಿಕ, ಧಾರ್ಮಿಕ, ಸಾಹಿತ್ಯಿಿಕ, ಭಾಷಾ ಪ್ರಭಾವಲಯವನ್ನು ನಿರ್ಮಿಸಿಕೊಂಡರು. ದ್ರಾಾವಿಡರಿಂದ ಯಾವ ಪ್ರತಿಭಟನೆಯೂ ಈ ವಿಷಯದಲ್ಲಿ ಇರಲಿಲ್ಲ.

ಇನ್ನು ಕೊನೆಯದಾಗಿ ಆರ್ಯರು ದ್ರಾಾವಿಡರ ಕುಲವನ್ನೇ ಸಂಪೂರ್ಣ ನಾಶ ಮಾಡಬೇಕಿದ್ದರೆ ಅವರ ಎಲ್ಲ ಪುಸ್ತಕಗಳನ್ನೂ, ಮೌಖಿಕ/ಲಿಖಿತ ಸಾಹಿತ್ಯವನ್ನೂ ನಾಶಪಡಿಸಬೇಕಿತ್ತು. ಅದಾದರೂ ಆಗಿದೆಯೆ? ತಮಿಳರು ತಮ್ಮದು ಎರಡೂವರೆ ಸಾವಿರ ವರ್ಷಗಳ ಇತಿಹಾಸವಿರುವ ಸಾಹಿತ್ಯ ಎನ್ನುತ್ತಾಾರೆ. ನಾವು ಕನ್ನಡಿಗರು ಎರಡು ಸಾವಿರ ವರ್ಷಗಳ ಸಾಹಿತ್ಯವಿದೆ ಎಂದು ಹೆಮ್ಮೆೆ ಪಡುತ್ತೇವೆ. ಅದರರ್ಥ, ಕಳೆದ ಎರಡೂವರೆ ಸಾವಿರ ವರ್ಷಗಳಿಂದ ಈ ಜನಾಂಗಗಳ ಸಾಹಿತ್ಯವನ್ನು ಯಾರೂ ನಾಶ ಮಾಡುವ ಕೆಲಸಕ್ಕೆೆ ಕೈ ಹಾಕಿಲ್ಲ ಎಂದೇ ಆಗುತ್ತದೆ.

ಸಾಹಿತ್ಯ ನಾಶವಾಗಿದ್ದರೂ ಅದು ಆರ್ಯರಿಂದ ಅಂತೂ ಅಲ್ಲ. ನಾಶ ಮಾಡುವ ಹೊರತಾಗಿ ಆರ್ಯರು ತಮ್ಮ ಭಾಷೆ, ಸಾಹಿತ್ಯದ ಬಹಳಷ್ಟನ್ನು ದ್ರಾಾವಿಡರಿಗೆ ಕೊಟ್ಟಿಿದ್ದಾಾರೆ ಎಂದೂ ಅರ್ಥೈಸಿಕೊಳ್ಳಬಹುದು. ದ್ರಾಾವಿಡರ ಭಾಷೆಯನ್ನು ಕಿಂಚಿತ್ತೂ ಹಾನಿಪಡಿಸದೆಯೂ ಆ ಆರ್ಯರು ಇಡೀ ಉತ್ತರ ಭಾರತವನ್ನು ಸಂಪೂರ್ಣವಾಗಿ ತಮ್ಮ ಸುಪರ್ದಿಗೊಳಪಡಿಸಿಕೊಂಡದ್ದು ಹೇಗೆ? ಯಾವ ಮ್ಯಾಾಜಿಕ್ಕಿಿನಿಂದ?

ಕೆದಕುತ್ತ ಹೋದರೆ ತಳವಿಲ್ಲದ ಬಾವಿ ಈ ತರ್ಕ. ಕಳೆದ ಎಪ್ಪತ್ತು ವರ್ಷಗಳಿಂದ ನಮ್ಮ ದೇಶದ ಎಡಬುದ್ಧಿಿಜೀವಿಗಳು ಬೆಳೆಸುತ್ತ ಬಂದಿರುವ ಆರ್ಯ-ದ್ರಾಾವಿಡ ಸಿದ್ಧಾಾಂತದಲ್ಲಿ ಸ್ವಲ್ಪ ಬೌದ್ಧಿಿಕ ಸಾಮರ್ಥ್ಯವಿದ್ದವರು ಕೂಡ ಎತ್ತಿಿ ತೋರಿಸಬಹುದಾದ ಹತ್ತಾಾರು ಹುಳುಕುಗಳಿದ್ದವು. ಆದರೆ ಯಾರೊಬ್ಬರೂ ಯಾವ ಪ್ರಶ್ನೆೆಯನ್ನೂ ಎತ್ತದಂತೆ ನಮ್ಮ ಶಿಕ್ಷಣ ವ್ಯವಸ್ಥೆೆ ನಮ್ಮನ್ನು ಕೈ ಕಟ್ ಬಾಯ್ ಮುಚ್ ಸ್ಥಿಿತಿಯಲ್ಲಿ ಕೂರಿಸಿತ್ತು ಇಷ್ಟು ವರ್ಷ.

ಇದೀಗ ಭಾರತದ ವಿಜ್ಞಾಾನಿಗಳು ಹರ್ಯಾಾಣದ ಪಕ್ಕದಲ್ಲಿ ‘ರಾಖಿಗಡಿ’ ಎಂಬ ಜಾಗದಲ್ಲಿ ಉತ್ಖನನ ನಡೆಸಿ ನಾಲ್ಕೂವರೆ ಸಾವಿರ ವರ್ಷಗಳ ಹಿಂದೆ ಬದುಕಿದ್ದ ಮಹಿಳೆಯೊಬ್ಬರ ತಲೆಬುರುಡೆಯ ಡಿಎನ್‌ಎ ತೆಗೆದು ಮೂರು ವರ್ಷ ಪರೀಕ್ಷೆ ಮಾಡಿ ಕೊನೆಗೆ, ಆಕೆ ಇಲ್ಲಿಯವಳೇ, ಹೊರಗಿನಿಂದ ಬಂದವಳಲ್ಲ ಎಂದು ವೈಜ್ಞಾಾನಿಕ ಫಲಿತಾಂಶವನ್ನು ಪ್ರಕಟಿಸಿದರೆ ಬುದ್ಧಿಿಜೀವಿಗಳ ಬಾಯಿಬಡಿದಾಟ ಶುರುವಾಗಿದೆ. ಪ್ರಯೋಗ ವೈಜ್ಞಾಾನಿಕವಾಗಿ ನಡೆದಿಲ್ಲ; ಫಲಿತಾಂಶ ವೈಜ್ಞಾಾನಿಕವಲ್ಲ ಎಂಬುದು ಅವರ ಹೊಸ ವರಾತ. ಕೆಸರಲ್ಲಿ ಉರುಳಾಡುವ ಹಂದಿ ಮೇಕೆಯ ಗೊರಸಿಗೆ ಬೂದಿ ತಾಗಿದೆ ಎಂದಷ್ಟೇ ಅಸಂಬದ್ಧ ಪ್ರಲಾಪ ಇದು. ಬುದ್ಧಿಿಜೀವಿಗಳು ಇಷ್ಟು ವರ್ಷ ಕಟ್ಟಿಿದ ಥಿಯರಿಗಳಲ್ಲಿ ಎಷ್ಟು ವೈಜ್ಞಾಾನಿಕವಿದ್ದವು ಎಂದು ಆ ರಾಖಿಗಡಿಯ ಅಸ್ಥಿಿಪಂಜರವೇ ಎದ್ದು ಬಾಯ್ಬಿಿಟ್ಟು ಕೇಳಿದರೂ ಕೇಳೀತೇ!