Friday, 2nd December 2022

ಶ್ರೀರಾಮನ ಹುಟ್ಟಿಗಷ್ಟೇ ಸೀಮಿತವಲ್ಲ ಅಯೋಧ್ಯೆ

ಅಯೋಧ್ಯೆೆ ಎಂದರೆ ಬರಿಯ ಹೆಸರಲ್ಲ, ಬರಿಯ ನಗರವಲ್ಲ, ಅದೊಂದು ಜೀವಂತ ಸಂಸ್ಕೃತಿ. ಭಾರತೀಯ ಪರಂಪರೆಯ ಸಮರ್ಥ ಪ್ರತಿನಿಧಿ.

ಬರಹವನ್ನು ಪ್ರಾಾಚೀನರು ಅಕ್ಷರ ಎಂದರು. ಅ-ಕ್ಷರ ಎಂದರೆ ನಾಶವಿಲ್ಲದ್ದು ಎಂದರ್ಥ. ಯಾವುದೇ ಜನಸಮುದಾಯ ತನ್ನ ನೂರಾರು ಇಲ್ಲವೇ ಸಾವಿರಾರು ವರ್ಷಗಳ ಇತಿಹಾಸವನ್ನು ಅಕ್ಷರಗಳಲ್ಲಿ ಕಾಪಿಡುತ್ತದೆ ಎಂಬುದೇನೋ ಸರಿ, ಆದರೆ ಆ ಅಕ್ಷರಗಳಿಗೂ ಅಪಾಯ ಒದಗಿದರೆ? ಶತ್ರುಗಳ ದೊಂದಿಯ ಜ್ವಾಾಲೆಗೆ ಅವು ಸುಟ್ಟು ಬೂದಿಯಾಗಿಬಿಟ್ಟರೆ? ಅವಿನಾಶಿಯೆನ್ನಿಿಸಿಕೊಂಡ ಅಕ್ಷರಗಳು ಕೂಡ ಒಂದಿಲ್ಲೊೊಂದು ಸಂದರ್ಭದಲ್ಲಿ ನಾಶವಾಗಬಹುದು ಮತ್ತು ಆ ಮೂಲಕ ಜನಸಮುದಾಯ ತನ್ನ ಸಂಸ್ಕೃತಿಯನ್ನೆೆಲ್ಲ ಕಳೆದುಕೊಂಡು ವಿಸ್ಮತಿಗೊಳಗಾಗುವ ಪರಿಸ್ಥಿಿತಿಯೂ ಬಂದೀತು. ಆದರೆ ಪ್ರತಿ ದೇಶದ ನೆಲಕ್ಕೂ ಒಂದು ಸ್ಮರಣಕೋಶವಿರುತ್ತದೆ. ಗ್ರಂಥಗಳು ನಾಶವಾದರೂ ಜನಪದದ/ನೆಲದ ಸ್ಮತಿಕೋಶ ನಾಶವಾಗುವುದಿಲ್ಲ. ಒಂದು ನೆಲ ಗಳಿಸಿಕೊಂಡ ಸಂಸ್ಕೃತಿ ಕಾಲಾಂತರದಲ್ಲಿ ಮಸುಕಾದರೂ ಮತ್ತಿಿನ್ಯಾಾವಾಗಾದರೂ ಮುನ್ನೆೆಲೆಗೆ ಬಂದೇ ಬರುತ್ತದೆ. ನೆಲದ ಕಾರಣಿಕ ಎಂದರೆ ಬೇರೇನಲ್ಲ, ಅದೇ.

ಯಾಕೆ ಈ ಮಾತು ಹೇಳುತ್ತಿಿದ್ದೇನೆಂದರೆ, ಇಷ್ಟೇ ಇದರ ಪ್ರಾಾಯ ಎಂದು ನಿಖರ ಕಾಲಚೀಟಿಯನ್ನು ಅಂಟಿಸಲಾಗದಷ್ಟು ಪುರಾತನ ನಗರಿ ಅಯೋಧ್ಯೆೆ ಈಗ ಮುನ್ನೆೆಲೆಗೆ ಬಂದಿದೆ. ಅದೀಗ ಭರತಖಂಡದ ಗೀತೆ, ಉಸಿರು, ಪ್ರಾಾಣಶಕ್ತಿಿ. ಅಲ್ಲಿರುವ ಶ್ರೀರಾಮನ ಜನ್ಮಭೂಮಿಯನ್ನು ದಕ್ಕಿಿಸಿಕೊಳ್ಳಬೇಕು; ಅಲ್ಲೊೊಂದು ಭವ್ಯಮಂದಿರವನ್ನು ಕಟ್ಟಿಿತೋರಿಸಬೇಕು ಎಂದು ಅರ್ಧ ಶತಮಾನದಿಂದ ಕಾನೂನು ಹೋರಾಟ ಮಾಡುತ್ತಿಿರುವ ಮಂದಿಗೆ ಇದೀಗ ಕನಸು ಕೈಗೂಡಬಹುದೆಂಬ ನಿರೀಕ್ಷೆ, ತಲ್ಲಣ. ಮರ್ಯಾದಾ ಪುರುಷೋತ್ತಮನ ಐನೂರು ವರ್ಷಗಳ ಗೃಹಬಂಧನಕ್ಕೆೆ ಮುಕ್ತಿಿ ಸಿಗಬಹುದೆಂಬ ಆಶಾಭಾವ. ಪರಕೀಯರು ಅಯೋಧ್ಯೆೆಯೆಂಬ ಭಾರತದ ಹೃದಯವನ್ನು ಕಿತ್ತರು, ಸುಟ್ಟರು, ಕಲ್ಲುಗಳನ್ನೆೆತ್ತಿಿ ಎಸೆದರು, ತಮ್ಮದನ್ನು ಕಟ್ಟಿಿಕೊಂಡು ನೈಜೇತಿಹಾಸವನ್ನೆೆ ಮರೆಸಿದರು. ಅದೆಷ್ಟೆೆಲ್ಲ ಅತ್ಯಾಾಚಾರಗಳು ನಡೆದರೂ, ಎಲ್ಲ ಅಕ್ಷರದಾಖಲೆಗಳು ಕಾಲಗರ್ಭದಲ್ಲಿ ಶಾಶ್ವತವಾಗಿ ಹೂತುಹೋದರೂ ಅಯೋಧ್ಯೆೆಯ ಜೊತೆ ಭಾರತೀಯರು ತಮ್ಮ ಕಳ್ಳುಬಳ್ಳಿಿಯ ಸಂಬಂಧವನ್ನು ಮಾತ್ರ ಕತ್ತರಿಸಿಕೊಳ್ಳಲಿಲ್ಲ. ಭಾರತದ ಹಿಂದೂಗಳು ಅಯೋಧ್ಯೆೆಗೆ ಮತ್ತೆೆ ಮತ್ತೆೆ ಹೋದರು. ಶ್ರೀರಾಮನಿಗಾಗಿ ಕಣ್ಣೀರು ಮಿಡಿದರು. ಸರಯೂ ನದಿಯಲ್ಲಿ ಮಿಂದು ಅರ್ಘ್ಯಪ್ರದಾನ ಮಾಡಿದರು. ಇಂದಲ್ಲ ನಾಳೆ, ನಾಳೆಯಲ್ಲವಾದರೆ ನಾಡಿದ್ದು ಈ ಭೂಮಿ ಸೇರಬೇಕಿರುವುದು ಹಿಂದೂಗಳ ಹೃದಯಸಾಮ್ರಾಾಟನಾದ ಶ್ರೀರಾಮನಿಗೇನೇ ಎಂಬ ಅಚಲಶ್ರದ್ಧೆೆಯಿಂದ ಕಾದರು. ಈ ತಾಳ್ಮೆೆಗೆ ಬಹುಮಾನದಂತೆ ಇರಲಿದೆ ಸರ್ವೋಚ್ಚ ತೀರ್ಪು ಎಂಬ ಭರವಸೆಯೇ ಈಗ ಎಲ್ಲರದ್ದೂ. ನ್ಯಾಾಯತೀರ್ಮಾನಗಳಿಗೆ ಹೆಸರಾಗಿದ್ದ ಅಯೋಧ್ಯಾಾಪತಿಯೇ ಇಲ್ಲಿ ಕೋರ್ಟಿನ ಅಂತಿಮ ತೀರ್ಪಿಗೆ ಕಾದು ನಿಲ್ಲಬೇಕಾದ ಪ್ರಸಂಗ ಒದಗಿಬಂತಲ್ಲ ಎಂಬುದಷ್ಟೇ ಆಸ್ತಿಿಕರ ನೋವು ಮತ್ತು ದುಃಖ. ವಿಧಿವಿಪರ್ಯಾಸ! ಏನು ಮಾಡೋಣ!

ಅಯೋಧ್ಯೆೆ ಎಂದರೆ ಅದು ಕೇವಲ ಮಸೀದಿ-ಮಂದಿರಗಳ ವ್ಯಾಾಜ್ಯಭೂಮಿಯಲ್ಲ. ಅಯೋಧ್ಯೆೆಗೊಂದು ಇತಿಹಾಸವಿದೆ. ಅದಕ್ಕೊೊಂದು ಮಿಡಿವ ಹೃದಯವಿದೆ. ನಾವು ನಮ್ಮ ಕೋರ್ಟುಕಚೇರಿಗಳ ಚಿಲ್ಲರೆವ್ಯಾಾಜ್ಯಗಳನ್ನು ಒಪ್ಪೊೊತ್ತು ಬದಿಗಿಟ್ಟು ಕಿವಿಗೊಟ್ಟರೆ ಆ ನಗರದ ಮಿಡಿತ-ತುಡಿತಗಳು ನಮ್ಮ ಕಿವಿಗಳಿಗೂ ಕೇಳಿಯಾವು. ಮಥುರಾ ಮಾಯಾ ಕಾಶೀ ಕಾಂಚೀ ಅವಂತಿಕಾ ಪುರೀ ದ್ವಾಾರಕಾ ಮುಂತಾದ ಮೋಕ್ಷದಾಯಕ ತೀರ್ಥಕ್ಷೇತ್ರಗಳ ಪಟ್ಟಿಿಯಲ್ಲಿ ಮೊದಲನೆಯದೇ ಅಯೋಧ್ಯೆೆ. ವಿಷ್ಣುವಿನ ದೇಹದ ಒಂದೊಂದು ಭಾಗವೂ ಈ ತೀರ್ಥಗಳ ಪಟ್ಟಿಿಯಲ್ಲಿ ಒಂದೊಂದನ್ನು ಸೂಚಿಸುತ್ತದೆ ಎನ್ನುವಾಗ, ಕಾಂಚೀಪುರ ಕಟಿಯೆಂದೂ ದ್ವಾಾರಕೆ ನಾಭಿಯೆಂದೂ ಮಥುರೆ ಭುಜವೆಂದೂ ಹೇಳಿ ಅಯೋಧ್ಯೆೆಯನ್ನು ಭಗವಂತನ ಮಸ್ತಕಕ್ಕೆೆ ಸಮೀಕರಿಸಿದರು ಪ್ರಾಾಚೀನರು. ಅಷ್ಟಚಕ್ರಾಾ ನವದ್ವಾಾರಾ ದೇಹಿನಾಂ ಪುರಯೋಧ್ಯಾಾ ತಸ್ಯಾಾಂ ಹಿರಣ್ಯಮಯಃ ಕೋಶಃ ಸ್ವರ್ಗೋ ಜ್ಯೋೋತಿಷಾವೃತಃ ॥ ಎಂಬುದು ವೇದಮಂತ್ರ. ವೇದಗಳೆಷ್ಟು ಪ್ರಾಾಚೀನವೋ ಅದಕ್ಕಿಿಂತ ಹಿಂದೆ ಹೋಗುತ್ತದೆ ಅಯೋಧ್ಯೆೆಯ ಪಳಮೆ. ಅಯೋಧ್ಯೆೆ ಎಂದರೆ ಬರಿಯ ಹೆಸರಲ್ಲ, ಬರಿಯ ನಗರವಲ್ಲ, ಅದೊಂದು ಜೀವಂತ ಸಂಸ್ಕೃತಿ. ಭಾರತೀಯ ಪರಂಪರೆಯ ಸಮರ್ಥ ಪ್ರತಿನಿಧಿ. ಕಾರಣಿಕದ ಕ್ಷೇತ್ರ. ಅದಕ್ಕೆೆಂದೇ ಅಕ್ಷರೇತಿಹಾಸದ ಬಲವಿಲ್ಲದೆ ಹೋದರೂ ಭಾರತದ ಆಸೇತುಹಿಮಾಚಲ ಮಂದಿ ಅಯೋಧ್ಯೆೆಯೊಂದಿಗೆ ಕನೆಕ್‌ಟ್‌ ಆಗುತ್ತಾಾರೆ. ನೆಲ ಅಗೆದು ಸಾಕ್ಷಿ ತೋರಿಸಿ ಎನ್ನುವ ಜಡವ್ಯವಸ್ಥೆೆಗೆ ಇಂಥ ಕನೆಕ್ಷನ್‌ಗಳು ಅರ್ಥವಾಗುವುದು ಕಷ್ಟ.

ಅಯೋಧ್ಯೆೆಯ ಕತೆಯೆಂದರೆ ಅದು ಭಾರತದ ಕತೆಯೇ ಹೌದು. ವೈವಸ್ವತ ಮನುವಿನಿಂದ ಪ್ರಾಾರಂಭಿಸಿ ಎರಡನೆಯ ಸುಮಿತ್ರನವರೆಗೆ ಸೂರ್ಯವಂಶದ 125 ರಾಜರು ಈ ನಗರವನ್ನಾಾಳಿದರಂತೆ. ಈ ಅವಿಚ್ಛಿಿನ್ನ ವಂಶಾವಳಿಯಲ್ಲಿ 64ನೆಯ ದೊರೆಯೇ ಶ್ರೀರಾಮ. ಅಯೋಧ್ಯೆೆಗೂ ಮಾನಸ ಸರೋವರಕ್ಕೂ ದೈವಿಕ ನಂಟು. ಬ್ರಹ್ಮನು ಸೃಷ್ಟಿಿಕ್ರಿಿಯೆಯ ಶುರುವಾತಿನಲ್ಲಿ ವಿಷ್ಣುವನ್ನು ಪ್ರಾಾರ್ಥಿಸಿದನಂತೆ. ಪುತ್ರನ ಪಿತೃಭಕ್ತಿಿಗೆ ಆನಂದತುಂದಿಲನಾದ ವಿಷ್ಣು ಆನಂದಭಾಷ್ಪ ಸುರಿಸಿದನಂತೆ. ಕಣ್ಣೀರ ಹನಿಯೇ ಆದರೂ ಭಗವಂತನದೆಂದ ಮೇಲೆ ಅಮೌಲ್ಯವೇ ತಾನೇ? ಬ್ರಹ್ಮ ಅದನ್ನು ಜತನದಿಂದ ತನ್ನ ಕಮಂಡಲದಲ್ಲಿ ಶೇಖರಿಸಿದ. ಆ ಹನಿಯೇ ಹಿಮಾಲಯ ಪರ್ವತದಲ್ಲಿ ಮಾನಸ ಸರೋವರವಾಯಿತು. ಅದಾಗಿ ಹಲವರ್ಷಗಳು ಸಂದು, ಅಯೋಧ್ಯಾಾನಗರಿಯನ್ನು ವೈವಸ್ವತ ಮನು ಆಳಿ, ಅವನ ಮಗ ಇಕ್ಷ್ವಾಾಕು ಪಟ್ಟಕ್ಕೆೆ ಬಂದಾಗ, ಅವನಿಗೆ ತನ್ನ ರಾಜಧಾನಿಯಲ್ಲಿ ನದಿಯೊಂದು ಹರಿಯುತ್ತಿಿದ್ದರೆ ಚೆನ್ನಲ್ಲವೇ ಎನ್ನಿಿಸಿರಬೇಕು! ಇಕ್ಷ್ವಾಾಕುವು ಗುರು ವಸಿಷ್ಠರಲ್ಲಿ ಬೇಡಿದ. ಆ ಋಷಿಗಳೋ, ತಂದೆ ಬ್ರಹ್ಮನನ್ನು ಕೇಳಿಕೊಂಡರು.

ತನ್ನಪ್ಪನಿಂದ ಮಾನಸ ಸರೋವರವನ್ನೆೆ ಸಂಪಾದಿಸಿದ್ದ ಬ್ರಹ್ಮದೇವ, ತನ್ನ ಮಗ ವಸಿಷ್ಠನ ವಿನಂತಿಯನ್ನು ಮನ್ನಿಿಸಿ ಆ ಸರೋವರದ ನೀರನ್ನು ಅಯೋಧ್ಯೆೆಗೆ ಎಳೆದುತಂದ. ಹೀಗೆ ಸರಯೂ, ಅಯೋಧ್ಯೆೆಯಲ್ಲಿ ನದಿಯಾಗಿ ಹರಿದಳು. ವಸಿಷ್ಠರ ದಯೆಯಿಂದ ಬಂದವಳಾಗಿ ಆಕೆ ವಾಸಿಷ್ಠೀಯಾದಳು. ಹುಟ್ಟಿಿನ ಐತಿಹ್ಯಕ್ಕೆೆ ತಕ್ಕಂತೆ ಅವಳಿಗೆ ನೇತ್ರಜಾ, ಮಾನಸನಂದಿನೀ, ಬ್ರಹ್ಮಾಾನಂದದ್ರವ ಎಂಬ ಹೆಸರುಗಳೂ ಬಂದವು. ಅರವತ್ತು ಸಾವಿರ ವರ್ಷಗಳುದ್ದಕ್ಕೆೆ ಗಂಗಾಸ್ನಾಾನವನ್ನು ಮಾಡಿ ಸಂಪಾದಿಸುವ ಪುಣ್ಯವನ್ನು ಸರಯೂ ನದಿಯ ದರ್ಶನಮಾತ್ರದಿಂದ ಗಳಿಸಬಹುದಂತೆ! *ನಮಾಮಿ ಸರಯೂ ತವ ಪಾದಪಂಕಜಂ ಸುರಾಸುರೈರ್ವಂದಿತ ಪಾದಪೀಠಮ್ ॥ ಭಕ್ತಿಿಶ್ಚ ಮುಕ್ತಿಿಶ್ಚ ದದಾಸಿ ನಿತ್ಯಂ ಭಾವಾನುಸಾರೇಣ ಸದಾ ನರಾಣಾಮ್ ॥ ಎಂಬುದು ಆಕೆಯ ಮೇಲಿರುವ ಸ್ತುತಿ; ಆಸ್ತಿಿಕರ ಪ್ರಾಾರ್ಥನೆ.

ತ್ರೇತಾಯುಗದ ಅಂತ್ಯಕ್ಕೆೆ ಶ್ರೀರಾಮನ ಆಳ್ವಿಿಕೆ ಕೊನೆಗೊಳ್ಳುತ್ತಲೇ ಮಂದಗಮನೆಯಾಗಿದ್ದ ಸರಯೂ ಉಕ್ಕೇರಿಹರಿದು ಅಯೋಧ್ಯೆೆಯನ್ನು ತನ್ನ ಒಡಲೊಳಗೆ ತೆಗೆದುಕೊಂಡಳು. ನೂರಾರು ವರ್ಷಗಳುದ್ದಕ್ಕೆೆ ಅಯೋಧ್ಯೆೆಗೆ ಜಲಾಧಿವಾಸ. ಮುಂದೆ ದ್ವಾಾಪರ ಯುಗದ ಪ್ರಾಾರಂಭದಲ್ಲಿ ಅದನ್ನು ರಾಮಸುತ ಕುಶ ಆಳಿದನಂತೆ. ನಂತರದ ರಾಜರುಗಳಲ್ಲಿ ಪ್ರಮುಖರಾದವರು ಋಷಭ, ಪ್ರಸೇನಜಿತ, ಸುರಥ, ಸುಮಿತ್ರ ಮೊದಲಾದವರು. ಸಂಜಯ, ಶಾಕ್ಯ, ಶುದ್ಧೋೋದನ, ಸಿದ್ಧಾಾರ್ಥ ಕೂಡ ಈ ವಂಶಾವಳಿಯಲ್ಲೇ ಆಳಿಹೋದ ರಾಜರೆಂಬುದನ್ನು ಮತ್ಸ್ಯಪುರಾಣ ಸಂಶಯಕ್ಕೆೆಡೆಯಿಲ್ಲದಂತೆ ತಿಳಿಸುತ್ತದೆ. ಸೂರ್ಯವಂಶದ 118ನೆಯ ಅರಸನಾದ ಶುದ್ಧೋೋದನ ಈಚೆ ಬದಿಯ ಅಯೋಧ್ಯೆೆಯನ್ನು ತೊರೆದು ಸರಯೂ ನದಿಯ ಆಚೆ ದಡದಲ್ಲಿದ್ದ ಶ್ರಾಾವಸ್ತಿಿಯನ್ನು ರಾಜಧಾನಿಯಾಗಿ ಆರಿಸಿ, ಅಭಿವೃದ್ಧಿಿಪಡಿಸಿದ.

ಮುಂದಿನ ಏಳೆಂಟು ತಲೆಮಾರಿನವರೆಲ್ಲ ಶ್ರಾಾವಸ್ತಿಿ, ಸಾಕೇತಗಳನ್ನು ತಮ್ಮ ರಾಜಧಾನಿಯಾಗಿರಿಸಿಕೊಂಡು ಅಯೋಧ್ಯೆೆಯನ್ನು ಉಪೇಕ್ಷಿಸಿದರು. ನಂದರು ಪ್ರಬಲರಾದಾಗ ಇಕ್ಷ್ವಾಾಕು ವಂಶದ ರಾಜರ ಆಡಳಿತ ಕೊನೆಯಾಗಿ ಅಯೋಧ್ಯೆೆ ಇತಿಹಾಸಗರ್ಭದಲ್ಲಿ ಅಡಗಿತು, ಎರಡನೇ ಬಾರಿ. ಕಾಲವೆಂಬುದು ಎಂತೆಂಥ ಸಿಂಹಾಸವನವನ್ನೂ ಹೊಯಿಗೆಯಡಿ ಹುಗಿದುಹಾಕುತ್ತದೆ ಅಲ್ಲವೆ? ಸಾವಿರಾರು ವರ್ಷಗಳ ಕಾಲ ವೈಭವೋಪೇತ ನಗರಿಯಾಗಿ, ಪ್ರಸಿದ್ಧ ರಾಜಮನೆತನದ ರಾಜಧಾನಿಯಾಗಿ ಮೆರೆದಿದ್ದ ಅಯೋಧ್ಯೆೆ ಕೂಡ ಹೀಗೆ ತೆರೆಮರೆಗೆ ಸರಿಯಿತು. ಜನರ ಬುದ್ಧಿಿಗೆ ಮಂಕು ಕವಿಯಿತು. ಕಾಲ ಕೆಳಗಿದ್ದ ಚಿನ್ನದ ಗಣಿಯನ್ನೇ ಜನ ಒದ್ದು ಚೆಲ್ಲಿ ಮರೆತುಬಿಟ್ಟರು. ಆಗ ಬಂದವನು ಗಂಧರ್ವಸೇನನ ಮಗ ವಿಕ್ರಮಾದಿತ್ಯ.

ರಾಮಾಯಣ ಕಾವ್ಯವನ್ನು ಓದಿ ರೋಮಾಂಚನಗೊಂಡಿದ್ದ ವಿಕ್ರಮಾದಿತ್ಯ ಅಯೋಧ್ಯೆೆಯನ್ನು ಕಣ್ಣಾಾರೆ ಕಂಡು ಹೃದಯತುಂಬಿಕೊಳ್ಳಬೇಕೆಂದು ಬಂದರೆ ಅಲ್ಲೇನಿತ್ತು? ಬರಿಯ ಬರಡು ಮಣ್ಣು! ನಿರುತ್ಸಾಾಹದಿಂದ ವಿಕ್ರಮ ಹಿಂದೆ ಹೋಗಲಿಲ್ಲ. ಪ್ರಯಾಗದೇವನ ಬಳಿ ಹೋದ. ಅಯೋಧ್ಯೆೆಯ ನಗರಿಯಿದ್ದ ಜಾಗವನ್ನು ತೋರಿಸಿ ಎಂದು ಬೇಡಿದ. ಸರಯೂ ನದಿಯ ದಡದಲ್ಲಿ ಅಯೋಧ್ಯೆೆಯಿದ್ದ (ಮತ್ತೀಗ ವಿಶಾಖವನವಾಗಿದ್ದ) ಜಾಗವನ್ನು ಕೊನೆಗೂ ಪತ್ತೆೆಹಚ್ಚಿಿ, ಅಲ್ಲಿನ 360 ಸ್ಥಳಗಳನ್ನು ಗುರುತಿಸಿ, ಅವಷ್ಟನ್ನೂ ಅಭಿವೃದ್ಧಿಿಪಡಿಸುವ ಯೋಜನೆ ಹಾಕಿದ. ಯುಧಿಷ್ಠಿಿರ ಶಕ 2426ರಲ್ಲಿ ಪ್ರಾಾರಂಭಗೊಂಡ ನಗರನಿರ್ಮಾಣಕಾರ್ಯ ಆರು ವರ್ಷಗಳ ಕಾಲ ಬಿಟ್ಟೂಬಿಡದೆ ನಡೆದು 2432ರಲ್ಲಿ ಪೂರ್ಣಗೊಂಡಿತು.

ಒಟ್ಟು 30 ಯೋಜನ ಉದ್ದ, 12 ಯೋಜನ ಅಗಲವಿರುವ ಮಹಾನ್ ನಗರವೊಂದು, ಸ್ವರ್ಗಕ್ಕೆೆ ಕಿಚ್ಚು ಹಚ್ಚೆೆಂದ ಎಂಬ ಮಟ್ಟದಲ್ಲಿ ಭೂಮಿಯ ಮೇಲೆ ಅರಳಿನಿಂತಿತು. ಹೊಚ್ಚಹೊಸ ಪುರವನ್ನು ನಿರ್ಮಿಸಿದ ವಿಕ್ರಮ ದೇಶದಲ್ಲಿ ಪ್ರಸಿದ್ಧನಾದ. ಅಯೋಧ್ಯಾಾ ನಗರದ ನಿರ್ಮಾಣಕಾರ್ಯ ಪೂರ್ಣಗೊಂಡ ಸ್ಮರಣೆಗೆಂದು, ಯುಧಿಷ್ಠಿಿರ ಶಕ 2432ರಿಂದ ವಿಕ್ರಮಶಕೆ ಪ್ರಾಾರಂಭಗೊಂಡಿತು. ಅಯೋಧ್ಯೆೆಯನ್ನು ಮತ್ತೆೆ ಎಬ್ಬಿಿಸಿನಿಲ್ಲಿಸಿದ ವಿಕ್ರಮ, ಶ್ರೀರಾಮನು ಹುಟ್ಟಿಿದ ಅರಮನೆ ಇದ್ದ ಜಾಗದಲ್ಲಿ ಸ್ಫಟಿಕ ಶಿಲೆಗಳಿಂದ ಒಂದು ಭವ್ಯ ಮಂದಿರ ನಿರ್ಮಿಸಿದ. ನೂರಾರು ವರ್ಷಗಳ ಅವಧಿಯಲ್ಲಿ ಅದು ಮತ್ತೆೆ ಶಿಥಿಲಾವಸ್ಥೆೆಗೆ ಬೀಳುತ್ತಿಿದೆಯೆಂದಾಗ ಕನೌಜದ ರಾಜ ಜಯಚಂದ್ರ ಅದರ ಜೀರ್ಣೋದ್ಧಾಾರದ ಕೆಲಸ ಕೈಗೆತ್ತಿಿಕೊಂಡ. ಒಟ್ಟಲ್ಲಿ ಅಯೋಧ್ಯೆೆಯ ಆಯುಸ್ಸು ಮುಗಿಯಿತು; ಅದಿನ್ನೇನು ಕೊನೆಯುಸಿರೆಳೆಯಿತು ಎಂಬ ಸ್ಥಿಿತಿಯೊದಗಿದಾಗೆಲ್ಲ ಶಕಪುರುಷರು ಕಾಣಿಸಿಕೊಂಡರು. ಅಯೋಧ್ಯೆೆಗೆ ವೈಭವವನ್ನು ಮರಳಿಸಿದರು.

ಆರಲಿದ್ದ ದೀಪಕ್ಕೆೆ ಎಣ್ಣೆೆ ಎರೆಯುವ ಕೈಗಳು ಹೀಗೆ ಸದಾ ಸಿಕ್ಕಿಿದ್ದು ಕೂಡ ಆ ನಗರದ ಪುಣ್ಯವೆಂದೇ ಹೇಳಬೇಕು. ವಿಕ್ರಮಾದಿತ್ಯ ನಿರ್ಮಿಸಿದ ಕಟ್ಟಡವನ್ನು ಜಯಚಂದ್ರ ಜೀರ್ಣೋದ್ಧಾಾರ ಮಾಡಿ, ಮತ್ತೆೆ ರಾಮಚಂದ್ರನ ಪೂಜೆ-ಆರಾಧನೆಗಳು ನಿರಾತಂಕ ಮುಂದುವರಿದವು. ಆದರೆ ಕ್ರಿಿಸ್ತಶಕ 1528ರಲ್ಲಿ ಅದನ್ನು ಕೆಡವಿ ಅಲ್ಲಿ ಮಸೀದಿಯನ್ನು ಕಟ್ಟಿಿದವನು ಮುಘಲರಸ ಬಾಬರ್. ಹಾಗೆ ಮಾಡೆಂದು ಅವನಿಗೆ ಸಲಹೆಕೊಟ್ಟವನು ಜಲಾಲ್‌ಷಹನೆಂಬ ಫಕೀರ. ರಾಮನ ಮಂದಿರ ಭಗ್ನವಾಯಿತು. ವಿಗ್ರಹಭಂಜಕರ ದಾಳಿಗೆ ತುತ್ತಾಾದ ಮಂದಿರದಲ್ಲಿ ಗರ್ಭಗುಡಿಯಲ್ಲಿದ್ದ ರಾಮಚಂದ್ರನ ಶಿಲಾಪ್ರತಿಮೆಯನ್ನು ಬಾಬಾ ಶ್ಯಾಾಮಾನಂದನೆಂಬ ಭಕ್ತ ಮಗುವಿನಂತೆ ಎತ್ತಿಿಕೊಂಡು ಉತ್ತರಖಂಡಕ್ಕೆೆ ಓಡಿದನಂತೆ. ತನ್ನದಲ್ಲದ ತಪ್ಪಿಿಗೆ ವನವಾಸ ಮಾಡುತ್ತಲೇ ಇರಬೇಕೆಂದು ದೇವರ ಹಣೆಯಲ್ಲೆೆ ಬರೆದಿತ್ತೇನೋ!

ರಾಮಾಯಣ ನಡೆಯಿತೋ ಇಲ್ಲವೋ ಎಂಬ ಜಿಜ್ಞಾಾಸೆ ಕೋರ್ಟಿಗಿರಬಹುದು. ಆದರೆ ಅಯೋಧ್ಯೆೆಯ ಮಟ್ಟಿಿಗೆ ಅದು ರಮ್ಯಕಾವ್ಯವೋ ಕಟ್ಟುಕತೆಯೋ ಅಲ್ಲ, ಜೀವಂತ ಇತಿಹಾಸ. ಒಂದಾನೊಂದು ಕಾಲದಲ್ಲಿ ಅಯೋಧ್ಯೆೆಯ ತುಂಬ 5000 ಗುಡಿಗಳಿದ್ದವಂತೆ. ಅಷ್ಟೊೊಂದೆ ಎನ್ನಬೇಡಿ. ಪ್ರತಿಯೊಬ್ಬರ ಮನೆಯೂ ಒಂದು ಗುಡಿಯೇ ಎಂಬ ಅರ್ಥಾನುಸಂಧಾನವದು. ರಾಮಸ್ಯಾಾರ್ಥೇ ಸರ್ವಂ ತ್ಯಜೇತ್ ಎಂಬ ಭಾವ. ನಮ್ಮ ಮನೆ ನಮ್ಮದಲ್ಲ, ಅದು ಶ್ರೀರಾಮಚಂದ್ರನ ಗುಡಿ. ನಾವು ಅಲ್ಲಿ ಬಾಡಿಗೆಗಿದ್ದೇವೆ ಅಷ್ಟೆೆ – ಎಂಬ ವಿನಯ. ಅಯೋಧ್ಯೆೆಯ ಸರಹದ್ದಿನಲ್ಲೆೆ ದಶರಥ ಮಹಾರಾಜ, ಪುತ್ರೇಷ್ಠಿಿ ಯಜ್ಞ ನಡೆಸಿದ ಮಖಭೂಮಿ ಇಂದಿಗೂ ಇದೆ. ಚೈತ್ರ ಶುದ್ಧ ಹುಣ್ಣಿಿಗೆಗೆ ಇಲ್ಲಿ ಜಾತ್ರೆೆ.

ಈ ಪುಣ್ಯನೆಲದ ಚಿಟಿಕೆ ಮಣ್ಣನ್ನು ಬಾಯಲ್ಲಿ ಹಾಕಿಕೊಂಡರೂ ಸಾಕು, ಸಂತಾನವಾಗುತ್ತದೆ ಎಂಬುದು ನೆಲದ ನಂಬಿಕೆ. ಮಖಭೂಮಿಯ ಪಕ್ಕದಲ್ಲೇ ಕೈಕೇಯಿ ಭವನ್, ಸುಮಿತ್ರಾಾ ಭವನ್ ಇವೆ. ರಾಮನ ಮೂವರು ಸೋದರರು ಹುಟ್ಟಿಿದ ಜಾಗಗಳಿವು. ಈ ನಾಲ್ವರೂ ಜೊತೆಯಾಗಿ ಆಡಿ ಬೆಳೆದ ಶಿಶುವಿಹಾರದ ಹೆಸರು ಆನಂದಭವನ. ಅಯೋಧ್ಯೆೆಯ ಹೃದಯಭಾಗದಲ್ಲಿ ಸೀತೆ, ತನ್ನ ಪತಿ ಮತ್ತು ಭಾಮೈದರಿಗೆ ಅಡುಗೆ ಮಾಡಿ ಬಡಿಸಿದ ಸೀತಾ ರಸೋಯಿ ಇದೆ. ಅದರಾಚೆ, ಮಂಥರೆಯ ಚಾಡಿಮಾತುಗಳನ್ನು ಕೇಳಿ ಕೈಕೇಯಿ ಪ್ರವೇಶಿಸಿದ ಕೋಪಗೃಹವಿದೆ. ಲಕ್ಷ್ಮಣನ ಮನೆ ಲಕ್ಷ್ಮಣ ಕಿಲಾ, ಭರತನ ಪತ್ನಿಿ ಮಾಂಡವಿ ಹದಿನಾಲ್ಕು ವರ್ಷ ತಪಸ್ಸಾಾಚರಿಸಿದ ಮಂಡನಾ ತೀರ್ಥ, ಭರತನ ಕರ್ಮಭೂಮಿ ನಂದಿಗ್ರಾಾಮ, ತ್ರೇತಾನಾಥ, ಧರ್ಮಹರಿ, ಸ್ವರ್ಗದ್ವಾಾರ, ಗುಪ್ತಹರಿ ಮೊದಲಾದ ತೀರ್ಥಗಳ ಸಾಲು ಸಾಲು. ಅಯೋಧ್ಯೆೆಯಲ್ಲಿ ಒಂದು ಸುತ್ತು ಹೊಡೆದುಬಂದರೆ ರಾಮಾಯಣ ಕಾವ್ಯದೊಳಗೆ ಪುಟದಿಂದ ಪುಟಕ್ಕೆೆ ಹಾದುಬಂದಂಥ ಅನುಭವ.

ಪ್ರಾಾಚೀನ ಅಯೋಧ್ಯೆೆ ಹೇಗಿತ್ತೆೆಂಬುದಕ್ಕೆೆ ರಾಮಾಯಣದಲ್ಲಿ ಧಂಡಿಯಾಗಿ ಸಿಗುತ್ತವೆ ದೃಷ್ಟಾಾಂತಗಳು. ಕೋಟೆಯಿಂದ ಆವೃತವಾಗಿದ್ದ ಈ ನಗರಕ್ಕೆೆ ಶತ್ರುಗಳನ್ನು ತಡೆಯುವುದಕ್ಕಾಾಗಿ ಸುತ್ತಲೂ ಆಳವಾದ ಕಂದಕಗಳಿದ್ದವಂತೆ. ಕೋಟೆಯ ನಾಲ್ಕು ದಿಕ್ಕುಗಳಲ್ಲಿ ಭವ್ಯವಾದ, ವೈಜಯಂತೀ ಹೆಸರಿನ ದ್ವಾಾರಗಳಿದ್ದವಂತೆ. ನಗರದಲ್ಲಿ ವೈಶ್ಯರ ಕೇರಿಯಲ್ಲಿ ಸಾಲು ಸಾಲು ಅಂಗಡಿಗಳಿದ್ದವು. ವಸತಿಪ್ರದೇಶದಲ್ಲಿದ್ದ ಮನೆಗಳಿಗೆ ವಿಮಾನಗೋಪುರವನ್ನು ಹೋಲುವ ಶಿಖರಗಳಿದ್ದವು. ಇಡೀ ನಗರದ ವಿನ್ಯಾಾಸ ಚತುರಂಗದ ಹಾಸಿನಂತೆ ತೋರುತ್ತಿಿದ್ದುದರಿಂದ ಶಿಲ್ಪಶಾಸ್ತ್ರರೀತ್ಯಾಾ ಅದನ್ನು ‘ದಂಡಕ’ ಎಂದು ಕರೆಯಲಾಗುತ್ತಿಿತ್ತು. ನಗರದ ಸರಹದ್ದು ದಾಟಿ ಹೊರಬಂದರೆ ಸರಯೂ ನದಿಯಿಂದ ಗೋದಾವರಿಯವರೆಗೂ ಅಲ್ಲಲ್ಲಿ ಋಷಿಮುನಿಗಳ ಆಶ್ರಮಗಳ ಸಾಲು.

ಆಶ್ರಮವೆಂದರೆ ಹುಲ್ಲಿನ ಜೋಪಡಿಯಲ್ಲ; ಸಾವಿರಾರು ಮಂದಿಗೆ ವಿದ್ಯಾಾದಾನ ಮಾಡುವ ವಿಶ್ವವಿದ್ಯಾಾಲಯಗಳು. ಅಗಸ್ತ್ಯ, ಅತ್ರಿಿ, ವಾಲ್ಮೀಕಿ, ಭರದ್ವಾಾಜ, ಗೌತಮ, ಸುತೀಕ್ಷ್ಣ, ವಸಿಷ್ಠ, ಶರಭಂಗ ಮೊದಲಾದವರೆಲ್ಲ ಹಾಗೆ ಸಾವಿರಾರು ಮಂದಿ ವಿದ್ಯಾಾರ್ಥಿಗಳಿಗೆ ಪಾಠ ಮಾಡುತ್ತಿಿದ್ದ ಸಂಸ್ಥೆೆಗಳ ಕುಲಾಧಿಪರು. ಅಯೋಧ್ಯೆೆಯಲ್ಲಿ ಸುಂದರ, ವ್ಯವಸ್ಥಿಿತ, ವಿಶಾಲ ರಸ್ತೆೆಗಳಿದ್ದವು. ರಾಜಮಾರ್ಗವನ್ನು ದಿನವೂ ಸ್ವಚ್ಛಗೊಳಿಸಿ ರಂಗೋಲಿ ಬರೆಯುತ್ತಿಿದ್ದರಂತೆ. ರಾತ್ರಿಿಯಲ್ಲಿ ರಸ್ತೆೆ ಮೇಲೆ ನಡೆವವರಿಗೆ ಅನುಕೂಲವಾಗುವಂತೆ ಅಲ್ಲಲ್ಲಿ ಕಂಬಗಳನ್ನು ನೆಟ್ಟು ಕಂದೀಲುಗಳನ್ನೇರಿಸುತ್ತಿಿದ್ದರು. ನಾಲ್ಕು ರಸ್ತೆೆಗಳು ಕೂಡುವ ಚತ್ವರಗಳು ಎಲ್ಲ ಬಗೆಯ ವಿಚಾರವಿನಿಮಯಕ್ಕೆೆ ಕೇಂದ್ರವಾಗಿದ್ದವು.

ಅಯೋಧ್ಯೆೆಯ ಯುವರಾಜನಾಗಿ ಪಟ್ಟವೇರಿದ ಶ್ರೀರಾಮಚಂದ್ರ ವನವಾಸಕ್ಕೆೆ ಹೋಗುವ ಮುನ್ನ 12 ವರ್ಷ ಅಯೋಧ್ಯೆೆಯ ಆಡಳಿತ ನೋಡಿಕೊಂಡ. ಹಾಗಾಗಿ ವನವಾಸಕ್ಕೆೆಂದು ವಲ್ಕಲ ಬಟ್ಟೆೆಗಳನ್ನು ಧರಿಸಿ ಅವನು ಹೊರಟುನಿಂತಾಗ ಕಣ್ಣೀರುಗರೆದದ್ದು ತಂದೆ ದಶರಥ, ತಾಯಿ ಕೌಸಲ್ಯೆೆ ಮಾತ್ರವಲ್ಲ. ಇಡೀ ಅಯೋಧ್ಯೆೆಯೇ. ಅಯೋಧ್ಯೆೆಯನ್ನು ತೊರೆದು ವನವಾಸಕ್ಕೆೆ ಹೊರಟಾಗ ರಾಮ, ಆ ನಗರಕ್ಕೆೆ ಕೈಮುಗಿದು ವಂದಿಸಿ, ಮತ್ತೆೆ ಬಂದು ನಿನ್ನನ್ನು ಕೂಡಿಕೊಳ್ಳುತ್ತೇನೆ ಎನ್ನುತ್ತಾಾನೆ. ಹಾಗೆಯೇ, ಹದಿನಾಲ್ಕು ವರ್ಷಗಳ ಬಳಿಕ ಪುಷ್ಪಕ ವಿಮಾನದಲ್ಲಿ ಕೂತು ಅಯೋಧ್ಯೆೆಯತ್ತ ಬರುವಾಗ, ಆ ನಗರಿಯು ದೃಷ್ಟಿಿಗೋಚರವಾಗುತ್ತಲೇ ಅವನ ಹೃದಯ ಹಿಗ್ಗುತ್ತದೆ.

ಪುರಪ್ರವೇಶದ ಮುನ್ನ ಆ ಪುರಕ್ಕೆೆ ಕೈಮುಗಿ ಎಂದು ಸೀತೆಗೆ ಉಪದೇಶಿಸುತ್ತಾಾನಾತ. ಚಿತ್ರಕೂಟದಲ್ಲಿದ್ದ ರಾಮನನ್ನು ತಮ್ಮ ಭರತ ವಾಪಸು ಕರೆದೊಯ್ಯಲೆಂದು ಬಂದಾಗಲೂ ರಾಮನ ಪ್ರಶ್ನೆೆ, ಅಯೋಧ್ಯೆೆಯ ಬಗ್ಗೆೆಯೇ. ‘ಯಥಾ ರಾಜ ತಥಾ ಪ್ರಜಾ’ ಎಂಬಂತೆ ಅಯೋಧ್ಯೆೆಯ ಪ್ರಜೆಗಳೂ ಹಾಗೇ ಸತ್ಯಸಂಧರೂ ಪ್ರಾಾಮಾಣಿಕರೂ ಧರ್ಮನಿಷ್ಠರೂ ಶ್ರಮಜೀವಿಗಳೂ ಆಗಿದ್ದರಂತೆ. ‘ಸಬ ನರ ಕರಹೀ ಪರಸ್ಪರ ಪ್ರೀತಿ, ಚಲಹಿ ಸ್ವಧರ್ಮ ನಿರತ ಶ್ರುತಿನೀತಿ’ ಎಂಬುದು ಅಯೋಧ್ಯಾಾ ನಗರಿಯ ಬೀದಿ ಬೀದಿಗಳಲ್ಲಿ ಹಾಡಿ ಕುಣಿದ ರಾಮಭಕ್ತ ತುಲಸೀದಾಸರ ಮಾತು.

ಒಂದಾನೊಂದು ಕಾಲದಲ್ಲಿ ಇಂತಿದ್ದ ಅಯೋಧ್ಯೆೆ ಈಗ ಶುಷ್ಕಕಾನೂನಿನ ಸರಪಳಿಯಲ್ಲಿ ಬಂಧಿ. ತನ್ನದೇ ಮನೆಯಲ್ಲಿ ಕಲ್ಯಾಾಣರಾಮ ಒಳಮನೆಯಿಂದ ಹೊರದಬ್ಬಿಿಸಿಕೊಂಡು ಅಂಗಳದಲ್ಲಿ ದಗ್ಧನಾಗಿ, ಸಂದಿಗ್ಧನಾಗಿ ಕೂತಿದ್ದಾಾನೆ. ಮರ್ಯಾದಾ ಪುರುಷೋತ್ತಮನನ್ನು ಮರ್ಯಾದೆಯಿಂದ ನಡೆಸಿಕೊಳ್ಳಬೇಕೆಂಬ ಹಕ್ಕೊೊತ್ತಾಾಯ ಮಾಡುತ್ತ 1949ರ ಅಕ್ಟೋೋಬರ್ 27ರಿಂದಲೂ ಇಲ್ಲಿ ನಡೆಯುತ್ತಿಿದೆ ನಿರಂತರ ರಾಮಸಂಕೀರ್ತನಯಜ್ಞ. ಆದರೆ, ಬಾಬರಿಯ ಉಸಾಬರಿ ನಮಗೇಕೆ! ಎಂದು ರಾಮನನ್ನು ಅವನ ಪಾಡಿಗೆ ಬೀದಿಯಲ್ಲಿ ಬಿಟ್ಟು ಆರಾಮಾಗಿರುವ ನಿರ್ಲಜ್ಜ ನಿರ್ಭಾವುಕ ಪ್ರಜ್ಞಾಾಶೂನ್ಯರ ಸಂಖ್ಯೆೆಯೂ ಕಡಿಮೆಯೇನಿಲ್ಲ ಬಿಡಿ! ಅಯೋಧ್ಯೆೆ ಬೇಕಿರುವುದು ರಾಮಭಕ್ತರಿಗೆ, ಹೆಚ್ಚೆೆಂದರೆ ಸಂಗಳಿಗೆ ಅಷ್ಟೇ – ಎಂಬಂತೆ ನಮ್ಮ ದೇಶದ ಬಹುದೊಡ್ಡ ಅಕ್ಷರಸ್ಥ ಸಮುದಾಯ ನರಸತ್ತವರಂತೆ ಕೂತಿರುವುದು ಈ ದೇಶ ಮತ್ತೆೆ ಮತ್ತೆೆ ಅನುಭವಿಸುತ್ತ ಬಂದಿರುವ ವಿಸ್ಮತಿಯ ರೋಗಕ್ಕೊೊಂದು ನಿದರ್ಶನ.

ಅಯೋಧ್ಯೆೆಯೆಂಬುದು ಹಿಂದೂಗಳಿಗಷ್ಟೇ ಪವಿತ್ರವಲ್ಲ; ಅಥವಾ ರಾಮನಿದ್ದನೆಂಬ ಕಾರಣಕ್ಕಷ್ಟೇ ಅದು ಮುಖ್ಯವಲ್ಲ. ಗೌತಮ ಬುದ್ಧ ಇದ್ದದ್ದು ಇಲ್ಲೇ. ಗುರುನಾನಕರಿಂದ ಮೊದಲ್ಗೊೊಂಡು ಎಲ್ಲ ಹತ್ತು ಸಿಖ್ ಗುರುಗಳಿಗೂ ಅಯೋಧ್ಯೆೆಯ ಸಂಪರ್ಕವಿತ್ತು. ಅದು ಅವರಿಗೆ ಪವಿತ್ರಕ್ಷೇತ್ರವೂ ಆಗಿತ್ತು. ಭಾರತದ ಸಹಸ್ರ ವರ್ಷಗಳ ಇತಿಹಾಸವನ್ನು ಬರೆದ ಸೂರ್ಯವಂಶವನ್ನು ಪೊರೆದ ಪುಣ್ಯಭೂಮಿ ಅಯೋಧ್ಯೆೆ. ಬ್ರಾಾಹ್ಮಣರ ಬಗ್ಗೆೆ ಉಲ್ಲೇಖ ಮಾಡುವ ಮೊದಲ ಕನ್ನಡ ಶಾಸನವೆಂದು ಗುರುತಿಸಲ್ಪಟ್ಟಿಿರುವ ಮಾಧವಪುರದ ಪ್ರಾಾಕೃತ ಶಾಸನದಲ್ಲಿ ಇರುವುದು ‘ಸೋಮಯಶಸ್’ ಎಂಬ ಅಯೋಧ್ಯೆೆಯ ಬ್ರಾಾಹ್ಮಣನ ಉಲ್ಲೇಖ!
ಕೋರ್ಟಿನ ತೀರ್ಪು ಅತ್ತಲಾದರೂ ಬರಲಿ, ಇತ್ತಲಾದರೂ ಬರಲಿ, ಅಯೋಧ್ಯೆೆಯಲ್ಲಿ ದೇಶದ ಆತ್ಮವನ್ನು ಕಾಣುವ ಚಿತ್ತವನ್ನು ದೇವರು ನಮಗೆ ಮೊದಲು ಕೊಡಲಿ!