Wednesday, 28th July 2021

ರಾಜ್ಯದಲ್ಲಿರುವುದು ಮೂರು ಸರಕಾರ: ಸಚಿವ ಯೋಗೇಶ್ವರ್​ ಕಿಡಿ

ಬೆಂಗಳೂರು: ರಾಜ್ಯದಲ್ಲಿ ಇರುವುದು ಮೂರು ಸರ್ಕಾರ ಎಂದು ಸಚಿವ ಸಿಪಿ ಯೋಗೇಶ್ವರ್​ ಕಿಡಿ ಕಾರಿದ್ದಾರೆ.

ಮೂರು ರಾಜಕೀಯ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿದೆ. ಪಕ್ಷದ ಕೆಲವು ಸ್ನೇಹಿತರು ನನ್ನ ಬಗ್ಗೆ ಮಾತನಾಡುತ್ತಿರುವುದು ಗೊತ್ತು. ಯಾರ ಕುಮ್ಮಕ್ಕು ಇದೆ ಅಂತಲೂ ಗೊತ್ತು’ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿಗಳ ಬದಲಾವಣೆ ನನ್ನ ಮೂಲ ಉದ್ದೇಶವಲ್ಲ, ಆ ಅಭಿಪ್ರಾಯವೂ ನನಗಿಲ್ಲ. ನಾನು ದೆಹಲಿಗೆ ಬೆಳಗ್ಗೆ ಹೋದೆ, ಸಂಜೆ ಬಂದೆ ಅಷ್ಟೇ. ನನ್ನ ವಿಚಾರ ಎಲ್ಲಿ ಹೇಳಬೇಕೋ ಅಲ್ಲಿ ಹೇಳುತ್ತೇನೆ ಎಂದರು.

ಇದೇ ವೇಳೆ ಬಿ.ಎಸ್‌ ವಿಜಯೇಂದ್ರ ಅವರ ವಿರುದ್ಧ ಪರೋಕ್ಷವಾಗಿ ಗುಡುಗಿದ ಸೈನಿಕ, ನನ್ನ ಅಧಿಕಾರದಲ್ಲಿ ಬೇರೆಯವರು ಹಸ್ತಕ್ಷೇಪ ಮಾಡಿದರೆ ಸಹಿಸಲು ಆಗಲ್ಲ’ ಎಂದು ಗುಡುಗಿದರು.

Leave a Reply

Your email address will not be published. Required fields are marked *