Thursday, 23rd March 2023

ಶಾಸಕ ಯತ್ನಾಳರಿಗೆ ಕೊಲೆ ಬೆದರಿಕೆ ಹಾಕಿದ ಯುವಕನ ಬಂಧನ

ವಿಜಯಪುರ: ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರಿಗೆ ಕೊಲೆ ಬೆದರಿಕೆ ಹಾಕಿದ ಯುವಕನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ ಅಗರವಾಲ ತಿಳಿಸಿದ್ದಾರೆ.

ನಗರದ ಕನಕದಾಸ ಬಡಾವಣೆಯ ನಿವಾಸಿ ರಘು ಕಣಮೇಶ್ವರ (39) ಬಂಧಿತ ಆರೋಪಿಯಾಗಿದ್ದು, ಈತನು ಈಚೆಗೆ ನಗರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಹಿರಿಮರಿ ಕಡಿದು ಹಾಕುವಂತೆ ಕತ್ತರಿಸಿ ಹಾಕುತ್ತೇನೆ ಎಂದು ಶಾಸಕರಿಗೆ ಕೊಲೆ ಬೆದರಿಕೆ ಹಾಕಿದ್ದ. ಈ ಘಟನೆ ಹಾಗೂ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ತೀವ್ರ ಚರ್ಚೆಗೀಡಾದಾಗ, ಆರೋಪಿ ಪರಾರಿಯಾಗಿದ್ದ. ಅನಂತರ ತಾಂಡಾವೊಂದರ ಹೊಲಗಳಲ್ಲಿ ಅಡಗಿಕೊಂಡು ವಿಡಿಯೋ, ಆಡಿಯೋ ಹರಿಬಿಟ್ಟಿದ್ದ.

ಬಳಿಕ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿದ್ದು, ಈ ಸಂಬಂಧ ಗೋಳಗುಮ್ಮಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.

error: Content is protected !!