Wednesday, 1st December 2021

ಸೊರಬ ತಾಲೂಕಿನಲ್ಲಿ ಮೂವರಿಗೆ ಕೋವಿಡ್ ಪಾಸಿಟಿವ್

ಶಿವಮೊಗ್ಗ : ಸೊರಬ ತಾಲೂಕಿನಲ್ಲಿ ಕರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಕಳೆದ 24 ಗಂಟೆಯಲ್ಲಿ 438 ಜನರ ಪರೀಕ್ಷೆಯ ವರದಿಯಲ್ಲಿ ಮೂವರಿಗೆ ಕೋವಿಡ್ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.

ಈ ಕುರಿತಂತೆ ತಾಲೂಕು ಆರೋಗ್ಯ ಇಲಾಖೆ ವರದಿ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ RT-PCR ಮೂಲಕ 288 ಜನರನ್ನು ಪರೀಕ್ಷೆಗೆ ಒಳಪಡಿಸ ಲಾಗಿ, ಇವರಲ್ಲಿ ಇಬ್ಬರಿಗೆ ಹಾಗೂ RAT ಮೂಲಕ ಪರೀಕ್ಷೆಗೆ ಒಳಪಡಿಸಿದ 150 ಜನರಲ್ಲಿ ಒಬ್ಬರು ಸೇರಿದಂತೆ ಮೂವರಿಗೆ ಕೋವಿಡ್ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 4,445ಕ್ಕೆ ಏರಿಕೆಯಾಗಿದೆ. 4,211 ಸೋಂಕಿತರು ಗುಣಮುಖರಾದ ಕಾರಣ, ತಾಲೂಕಿನಲ್ಲಿ ಈಗ 68 ಸಕ್ರೀಯ ಸೋಂಕಿತರು ಇರುವುದಾಗಿ ತಿಳಿಸಿದೆ.

ಇದುವರೆಗೆ 166 ಸೋಂಕಿತರು ಮೃತಪಟ್ಟು, 46,600 ಜನರು ಕೋವಿ ಶೀಲ್ಡ್ ಮೊದಲ ಡೋಸ್ ಹಾಗೂ 8,434 ಜನರು ಕೋವಿಶೀಲ್ಡ್ 2ನೇ ಡೋಸ್ ಪಡೆದಿದ್ದಾರೆ. ಇದುವರೆಗೆ 55,034 ಜನರು ತಾಲೂಕಿನಲ್ಲಿ ಕೊರೋನಾ ಲಸಿಕೆ ಪಡೆದಿರುವುದಾಗಿ ತಿಳಿಸಿದೆ.