Tuesday, 26th October 2021

ಆರೋಗ್ಯ ಯೋಜನೆ, ಆಯುಷ್ಮಾನ್ ಭಾರತ್ ಕ್ಕೆ 3 ವರ್ಷ

ಬೆಂಗಳೂರು: 10 ಕೋಟಿಗೂ ಅಧಿಕ ಬಡ ಕುಟುಂಬಗಳಿಗೆ ವಾರ್ಷಿಕ 5ಲಕ್ಷ ರೂಪಾಯಿವರೆಗೆ ಆರೋಗ್ಯ ವಿಮೆ ಕಲ್ಪಿಸುವ ವಿಶ್ವದ ಅತಿದೊಡ್ಡ ಆರೋಗ್ಯ ಯೋಜನೆ, ಆಯುಷ್ಮಾನ್ ಭಾರತ್ ಮೂರು ವರ್ಷ ಪೂರೈಸಿದೆ.

ಸೆಪ್ಟೆಂಬರ್ 23, 2018 ರಂದು ಆಯುಷ್ಮಾನ್ ಭಾರತ್ ಪ್ರಾರಂಭಗೊಂಡಿತ್ತು. ಇನ್ನು ಈ ಬಗ್ಗೆ ಮಾಡಲಾದ ಕೂ ನಲ್ಲಿ ‘ಬಡ ಕುಟುಂಬದ ಯಾವುದೇ ಸದಸ್ಯರು ಅನಾರೋಗ್ಯಕ್ಕೆ ಒಳಗಾದರೆ, ಇಡೀ ಕುಟುಂಬ ಅಸಮಾಧಾನಗೊಳ್ಳುತ್ತದೆ ಮತ್ತು ಅವರ ಆರ್ಥಿಕ ಸ್ಥಿತಿ ಕೆಟ್ಟದಾಗಿ ಪರಿಣಾಮ ಬೀರುತ್ತದೆ. ಹೀಗಿರುವಾಗ ಆಯು ಷ್ಮಾನ್ ಭಾರತ್ ಆರೋಗ್ಯಕರ ಭಾರತಕ್ಕೆ ಸಮಗ್ರ ಪರಿಹಾರ ವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ(arendra Modi)ಯ ಸಂದೇಶವನ್ನು ನೀಡಲಾ ಗಿದೆ.

ಆಯುಷ್ಮಾನ್ ಭಾರತ್ ಮೂರು ವರ್ಷ ಪೂರೈಸಿದ್ದಕ್ಕೆ ಬಿಜೆಪಿ ಮುಖಂಡರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಹಾಗು ಆಯುಷ್ಮಾನ್ ಭಾರತ್ ದ ಪ್ರಯೋಜನಗಳ ಬಗ್ಗೆ ಕೂ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *