Sunday, 27th November 2022

`ಮನೆ ಮನೆಯಲ್ಲೂ ತ್ರಿವರ್ಣ ದ್ವಜ’ ಅಭಿಯಾನ

ವಿಜಯಪುರ : ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಈ ಸುಸಂದರ್ಭದಲ್ಲಿ ನರೇಂದ್ರ ಮೋದಿ ಅವರು ಕರೆ ನೀಡಿರುವ `ಮನೆ ಮನೆಯಲ್ಲೂ ತ್ರಿವರ್ಣ ದ್ವಜ’ ಅಭಿಯಾನದ ಅಂಗವಾಗಿ ಕನ್ನೂರ ಗ್ರಾಮದ ಕಲ್ಲಪ್ಪ ಬೆಳ್ಳೂಂಡಗಿ ಯವರ ನಿವಾಸದ ಮೇಲೆ ಸಚಿವ ಕಾರಜೋಳ ಕುಟುಂಬಸ್ಥರು ಹಾಗೂ ಗ್ರಾಮಸ್ಥರೊಂದಿಗೆ ರಾಷ್ಟ್ರಧ್ವಜ ಹಾರಿಸಿದರು.
.
ಈ ವೇಳೆ ರಾಷ್ಟ್ರಧ್ಜ ಜಕ್ಕೆ ಗೌರವ ಸಲ್ಲಿಸಿ ಮಾತನಾಡಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ, ರಾಷ್ಟ್ರಧ್ವಜ ನಮ್ಮ ದೇಶಾಭಿಮಾನದ ಪ್ರತೀಕ, ನಮ್ಮ ದೇಶದ ಗೌರವದ ಸಂಕೇತ, ಆಜಾದಿ ಕಾ ಅಮೃತ ಮಹೋತ್ಸವ ಆಚರಣೆಯ ಸಂದರ್ಭದಲ್ಲಿ ಮನೆ – ಮನೆಯಲ್ಲಿಯೂ ರಾಷ್ಟ್ರಧ್ವಜ ರಾರಾಜಿಸಬೇಕು ಎಂಬ ಧ್ಯೇಯದೊಂದಿಗೆ ಹರ್ ಘರ್ ತಿರಂಗಾ ಅಭಿಯಾನ ಕರೆ ನೀಡ ಲಾಗಿದೆ. ಈ ಅಭಿಯಾನಕ್ಕೆ ಸಮಸ್ತ ಭಾರತೀಯರು ಅತ್ಯಂತ ಉತ್ಸಾಹದಿಂದ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಎಲ್ಲರ ಮನೆಗಳ ಮೇಲೆ ತ್ರಿವರ್ಣ ಧ್ವಜ ರಾರಾಜಿಸುತ್ತಿದೆ, ನಾಗಠಾಣ ಮತಕ್ಷೇತ್ರದಲ್ಲಿ ೨೦,೦೦೦ಸಾವಿರಕ್ಕು ಅಧಿಕ ಧ್ವಜಗಳನ್ನು ವಿತರಣೆ ಮಾಡಲಾಗಿದೆ.

ವಿಜಯಪುರ ನಗರದ ನಾಗಠಾಣ ಮತಕ್ಷೇತ್ರಕ್ಕೆ ಸಂಭಂಧಿಸಿರುವ ೭ ವಾರ್ಡಗಳಲ್ಲಿ ೯ ಸಾವಿರಕ್ಕೂ ಅಧಿಕ ದ್ವಜಗಳನ್ನು ವಿತರಣೆ ಮಾಡಲಾಗಿದೆ, ರಾಷ್ಟ್ರಧ್ವಜ ಹಾರಿಸುವುದು ಒಂದು ಅಭಿಮಾನದ ಸಂಕೇತ, ಸ್ವಾತಂತ್ರಕ್ಕಾಗಿ ತ್ಯಾಗ ಬಲಿದಾನ ಮಾಡಿದ ಮಹನೀಯ ರಿಗೆ ಸಲ್ಲಿಸುವ ಒಂದು ಗೌರವದ ಪ್ರತೀಕವಾಗಿದೆ ಎಂದರು.

ಸ್ವಾತಂತ್ರ್ಯಕ್ಕಾಗಿ ಭಗತ್‌ಸಿಂಗ್, ವೀರ ಸಾವರಕರ್, ಚಂದ್ರಶೇಖರ ಆಜಾದ್ ಸೇರಿದಂತೆ ಅನೇಕರು ತಮ್ಮ ಪ್ರಾಣವನ್ನೇ ಅರ್ಪಿಸಿ ದ್ದಾರೆ. ಈ ಎಲ್ಲ ಸ್ವಾತಂತ್ರ ಯೋಧರ ಜೀವನ ನಮಗೆ ನಿತ್ಯ ಸ್ಪೂರ್ತಿಯಾಗಬೇಕು, ಅವರನ್ನು ನಾವು ಅನುದಿನವೂ ಸ್ಮರಿಸಬೇಕು, ಸ್ವಾತಂತ್ರದ ಬೆಳಕು ತೋರಿದ ಈ ಎಲ್ಲ ಯೋಧರಿಗೆ ನಾವು ಸದಾ ಚಿರಋಣಿಯಾಗಿರಬೇಕು ಎಂದು ಉಮೇಶ ಕಾರಜೋಳ ಕರೆ ನೀಡಿದರು.