Thursday, 11th August 2022

ಪಶ್ಚಿಮ ಬಂಗಾಳ ಬೈಎಲೆಕ್ಷನ್‌: ಮುನ್ನಡೆದ ಟಿಎಂಸಿ

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಅ.30 ರಂದು ನಡೆದ ನಾಲ್ಕು ಕ್ಷೇತ್ರಗಳ ಉಪಚುನಾ ವಣೆ ಮತ ಎಣಿಕೆ ನ.02 ರಂದು ನಡೆಯುತ್ತಿದ್ದು ನಾಲ್ಕೂ ಕ್ಷೇತ್ರಗಳಲ್ಲಿ ಆಡಳಿತಾರೂಢ ಟಿಎಂಸಿ, ಬಿಜೆಪಿಯ ಭದ್ರಕೋಟೆ ದಿನ್ಹತಾದಲ್ಲಿಯೂ ಟಿಎಂಸಿ ಮುನ್ನಡೆ ಕಾಯ್ದು ಕೊಂಡಿದೆ.

ಖರ್ದಾಹ್, ಶಾಂತಿಪುರ, ಗೋಸಾಬ ಮತ್ತು ದಿನ್ಹತಾಗಳಲ್ಲಿ ಮತ ಎಣಿಕೆ ನಡೆಯುತ್ತಿದೆ.

ಮತ ಎಣಿಕೆ ಶಾಂತಿಯುತವಾಗಿ ನಡೆಯುತ್ತಿದ್ದು, ಇತ್ತೀಚಿನ ವರೆಗೂ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ ಎಂದು ಆಯೋಗ ತಿಳಿಸಿವೆ.

ದಿನ್ಹತಾ ಹಾಗೂ ಶಾಂತಿಪುರದಲ್ಲಿ ಬಿಜೆಪಿ ಶಾಸಕರು ತಮ್ಮ ಸಂಸದರ ಪದವಿಯನ್ನು ಉಳಿಸಿಕೊಳ್ಳುವುದಕ್ಕಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಖರ್ದಾಹ್, ಗೋಸಾಬಗಳಲ್ಲಿ ಟಿಎಂಸಿ ಶಾಸಕರ ನಿಧನದಿಂದಾಗಿ ಈ ಉಪಚುನಾವಣೆ ನಡೆದಿತ್ತು.