Tuesday, 9th August 2022

ಟಿಎಂಸಿ ಮುಖಂಡ ಅನುಪಮ್ ದತ್ತಾ ಗುಂಡಿಕ್ಕಿ ಹತ್ಯೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮುಖಂಡ ಅನುಪಮ್ ದತ್ತಾ  ರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಇಬ್ಬರು ದುಷ್ಕರ್ಮಿಗಳು ಫೈರಿಂಗ್ ಮಾಡಿದ್ದಾರೆ.

ಪಾನಿಹಟಿ ಪುರಸಭೆಯ ತೃಣಮೂಲ ಕಾಂಗ್ರೆಸ್(ಟಿಎಂಸಿ) ಕೌನ್ಸಿಲರ್ ದತ್ತಾ ಪಾನಿಹಟಿ ಪುರಸಭೆಯ ವಾರ್ಡ್ 8 ರ ಟಿಎಂಸಿ ಕೌನ್ಸಿಲರ್ ಆಗಿದ್ದು, ಅವರು ಭಾನುವಾರ ಉತ್ತರ ಸ್ಟೇಷನ್ ರಸ್ತೆಯ ಅಗರ್ಪಾರಾ ಟೆಂಟುಲ್ಟಾಲಾ ಪ್ರದೇಶ ದಲ್ಲಿ ಔಷಧಿಗಳನ್ನು ಖರೀದಿಸುತ್ತಿದ್ದಾಗ ದುಷ್ಕರ್ಮಿಗಳು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ದತ್ತಾ ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ಕರೆ ದೊಯ್ಯಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.

ಹಿರಿಯ ತೃಣಮೂಲ ನಾಯಕ ಮತ್ತು ನೈಹಟಿಯ ಶಾಸಕ ಪಾರ್ಥ ಭೌಮಿಕ್, ಬ್ಯಾರಕ್‌ ಪೋರ್ ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿದ್ದೇನೆ. ದಾಳಿಯ ಹಿಂದೆ ಯಾರಿದ್ದಾರೆ ಎಂಬುದನ್ನು ಕಂಡುಹಿಡಿಯಲು ಪೊಲೀಸರು ತನಿಖೆ ನಡೆಸುತ್ತಾರೆ ಎಂದು ಹೇಳಿದರು.