Friday, 2nd December 2022

ನಾಳೆ ತಲಕಾವೇರಿಗೆ ರಾಷ್ಟ್ರಪತಿ ಭೇಟಿ: ಭಕ್ತರ ಪ್ರವೇಶಕ್ಕೆ ನಿಷೇಧ

ಕೊಡಗು : ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶನಿವಾರ ತಲಕಾವೇರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಮತ್ತು ನಾಳೆ ಭಾಗಮಂಡಲ ಮತ್ತು ತಲಕಾವೇರಿ ದೇವಾಲಯಗಳಿಗೆ ಭಕ್ತರ ಪ್ರವೇಶಕ್ಕೆ ನಿಷೇಧಿಸಲಾಗಿದೆ.

ರಾಜ್ಯ ಪ್ರವಾಸದಲ್ಲಿರುವ ರಾಮನಾಥ್ ಕೋವಿಂದ್ ಅವರು ಏರ್ ಶೋ ನಲ್ಲಿ ಭಾಗವಹಿಸಿದ್ದಾರೆ. ನಾಳೆ ಕುಟುಂಬ ಸಮೇತರಾಗಿ ತಲಾ ಕಾವೇರಿಗೆ ಭೇಟಿ ನೀಡುತ್ತಿದ್ದಾರೆ.

ಹೀಗಾಗಿ ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಭಾಗಮಂಡಲ ಹಾಗೂ ತಲಾಕಾವೇರಿ ದೇವಾಲಯಗಳಿಗೆ ಭಕ್ತರ ಪ್ರವೇಶವನ್ನು ಇಂದು ಮತ್ತು ನಾಳೆ ನಿಷೇಧಿಸಿದೆ. ಐದು ಜನ ಅರ್ಚಕರಿಗೆ ಮಾತ್ರ ನಾಳೆ ಪೂಜೆ ಸಲ್ಲಿಸಲು ಅವಕಾಶ ನೀಡಲಾಗಿದೆ.