Thursday, 1st December 2022

ಕೋಲಾರ: ಟ್ರಾನ್ಸ್‌ಫಾರ್ಮರ್‌, ಎಲೆಕ್ಟ್ರಾನಿಕ್‌ ಉಪಕರಣ ಸುಟ್ಟು ಭಸ್ಮ

ಕೋಲಾರ : ಕೋಲಾರ ಬೈಪಾಸ್ ಬಳಿ ಬೆಸ್ಕಾಂ ವಿದ್ಯುತ್ ಪೂರೈಕೆ ಘಟಕಗಳಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದ್ದು, ಟ್ರಾನ್ಸ್‌ಫಾರ್ಮರ್‌, ಎಲೆಕ್ಟ್ರಾನಿಕ್‌ ಉಪಕರಣ ಸುಟ್ಟುಭಸ್ಮವಾಗಿವೆ.

ಆಕಾಶದೆತ್ತರಕ್ಕೆ ಆವರಿಸಿದ ದಟ್ಟವಾದ ಹೊಗೆಯಿಂದ ಆತಂಕ ಸೃಷ್ಟಿಯಾಗಿದ್ದು, ಅಕ್ಕ-ಪಕ್ಕದ ಏರಿಯಾಗಳಿಗೂ ಬೆಂಕಿಯ ಹೊಗೆ ಆವರಿಸಿದೆ. ಮಹಾಲಕ್ಷ್ಮೀ ಬಡಾವಣೆ ಬಳಿಯಿರುವ ಸಬ್‌ ಸ್ಟೇಷನ್‌ನಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳಗಳು ಧಾಮಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.