Saturday, 21st May 2022

ಖಾಸಗಿ ವಿವಿಗಳು ಮನ್ನಣೆ ಗಳಿಸಲು ಪಾರದರ್ಶಕತೆ ಬಹು ಮುಖ್ಯ

ಆಗ್ರಹ

ತುರುವೇಕೆರೆ ಪ್ರಸಾದ್
ಅಜೀಂ ಪ್ರೇಮ್‌ಜೀ ಎನ್ನುವುದು ಜಾಗತಿಕ ಮಟ್ಟದಲ್ಲಿ ಒಂದು ವಿಶ್ವಾಾಸಾರ್ಹತೆಯ ಹೆಸರು. ಕೇವಲ ಕರ್ನಾಟಕ, ಭಾರತದಲ್ಲಲ್ಲ, ಇಡೀ ಪ್ರಪಂಚಕ್ಕೇ ಆದರ್ಶವಾದ,ಯಶಸ್ಸಿಿನ ಒಂದು ಬ್ರ್ಯಾಾಂಡ್ ಅಜೀಂ ಪ್ರೇಮ್‌ಜೀ ವ್ಯವಹಾರವನ್ನು, ಕಂಪನಿಗಳನ್ನು ಸ್ವಾಾರ್ಥಕ್ಕೆೆ ಮಾಡಿದವರಲ್ಲ. ಉದ್ಯಮ ಎನ್ನುವುದು ತನ್ನ ಸ್ಥಿಿತಿಯನ್ನು ಮಾತ್ರ ಉತ್ತಮಗೊಳಿಸುವುದಲ್ಲದೆ ಜನರ ಬದುಕನ್ನು ಸಮೃದ್ಧಗೊಳಿಸುವ,ಅವರನ್ನು ಉತ್ತೇಜಿಸುವ ಒಂದು ಸಾಮಾಜಿಕ ಸೇವೆ ಎನ್ನುವ ಮಾತಿದೆ.ಅದಕ್ಕೆೆ ಸಾಟಿಯಿಲ್ಲದ ಉದಾಹರಣೆ ಎಂದರೆ ಅಜೀಂ ಪ್ರೇಮ್‌ಜೀ. ಕೋಟಿ ಕೋಟಿ ಯುವಕರಿಗೆ ಪ್ರೇರಕ, ಪೂರಕ ಶಕ್ತಿಿಯಾಗಿರುವ ಅಜೀಂ ಪ್ರೇಮ್‌ಜೀ ಈ ಶತಮಾನದ ಭಾರತದ ಒಂದು ದೊಡ್ಡ ಐಕಾನ್ ಆಗಿ ಹೊರಹೊಮ್ಮಿಿದ್ದಾಾರೆ. ಅದು ನಮಗೆಲ್ಲಾಾ ಅತ್ಯಂತ ಸಂತೋಷ ಮತ್ತು ಹೆಮ್ಮೆೆಯ ಸಂಗತಿ.

2001ರಲ್ಲಿ ಸ್ಥಾಾಪಿತವಾದ ಅಜೀಂ ಪ್ರೇಮ್‌ಜೀ ಪ್ರತಿಷ್ಠಾಾನ ಒಂದು ವಿಶ್ವವಿದ್ಯಾಾಲಯವನ್ನೂ ನಡೆಸುತ್ತಿಿದೆ. ಅದು ಕೂಡ ಅವರ ಹೆಸರಲ್ಲೇ ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾಾಲಯ(ಎಪಿಯು) ಎಂದೇ ನಾಮಾಂಕಿತಗೊಂಡು 2011ರಲ್ಲಿ ಪ್ರಾಾರಂಭವಾಗಿದೆ. ಅಜೀಂ ಪ್ರೇಮ್‌ಜೀ ಎನ್ನುವುದೇ ಒಂದು ವಿಶಿಷ್ಟತೆ, ವಿಶ್ವಾಾಸಾರ್ಹತೆ, ಗುಣಮಟ್ಟ, ಕಾರ್ಯದಕ್ಷತೆ, ಪ್ರಾಾಮಾಣಿಕತೆ ಹೀಗೆ ಹಲವಾರು ಗುಣ ಸಂಯೋಗಗಳ ಹೆಸರು. ಅಂದಮೇಲೆ ಅವರ ಹೆಸರಿನ ವಿಶ್ವವಿದ್ಯಾಾಲಯವೂ ಕೂಡ ಹಾಗೆಯೇ ಗುಣಮಟ್ಟದ ಶಿಕ್ಷಣ ಹಾಗೂ ಪಾರದರ್ಶಕತೆಗೆ ಮಾದರಿಯಾಗಬೇಕು ಎಂದು ಜನ ನಿರೀಕ್ಷಿಸುವುದು ತಪ್ಪಲ್ಲ. ಬೋಧನೆ, ಹೊಸ ಹೊಸ ವಿಷಯಗಳ ಸಂಯೋಜನೆ, ಕಲಿಕೆಗೆ ಪೂರಕ ವಾತಾವರಣ ಈ ಎಲ್ಲಾಾ ದೃಷ್ಟಿಿಯಿಂದ ಅದು ಶೈಕ್ಷಣಿಕ ಕ್ಷೇತ್ರದ ನಿರೀಕ್ಷೆಗಳನ್ನು ಉಳಿಸಿಕೊಂಡಿದೆ ಎಂದೇ ಹೇಳಲಾಗುತ್ತಿಿದೆ. ಆದರೆ ವಿಶ್ವವಿದ್ಯಾಾಲಯ ವಿದ್ಯಾಾರ್ಥಿಗಳಿಗೆ ಪ್ರವೇಶ ನೀಡುವಲ್ಲಿ ಅನುಸರಿಸುತ್ತಿಿರುವ ರೀತಿ, ನೀತಿಗಳು, ಮಾನದಂಡಗಳು ಪೂರಾ ಪಾರದರ್ಶಕವಾಗಿಲ್ಲದೆ ಹಲವು ಗೊಂದಲ,ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿಿರುವುದು ದುರ್ದೈವದ ಸಂಗತಿ.

ಎಪಿಯು ಶೈಕ್ಷಣಿಕ ಅಭಿವೃದ್ಧಿಿ, ಸಾರ್ವಜನಿಕ ನೀತಿ ಮತ್ತು ಆಢಳಿತ, ಆರ್ಥಶಾಸ್ತ್ರ, ರಾಜಕೀಯ ಶಾಸ್ತ್ರ ಇತ್ಯಾಾದಿ ವಿಷಯಗಳಲ್ಲಿ ಪದವಿ, ಸ್ನಾಾತಕೊತ್ತರ ಪದವಿ ನೀಡುತ್ತಿಿದೆ. ಕಳೆದ ಮೂರು ವರ್ಷಗಳಿಂದ ಅದು ಶುದ್ಧವಿಜ್ಞಾಾನ ವಿಭಾಗದ ಭೌತಶಾಸ್ತ್ರ, ಜೀವಶಾಸ್ತ್ರದಲ್ಲಿ ಬಿಎಸ್ಸಿಿ ಪದವಿಗಳನ್ನು ನೀಡುತ್ತಿಿದ್ದು ಈ ವರ್ಷದಿಂದ ಗಣಿತಶಾಸ್ತ್ರ ವಿಭಾಗವನ್ನೂ ತೆರೆಯಲಾಗಿದೆ. ಈ ಎಲ್ಲಾಾ ವಿಭಾಗಗಳಲ್ಲಿ ಎಪಿಯು ಸೀಮಿತ ಸಂಖ್ಯೆೆಯ ಪ್ರವೇಶಕ್ಕೆೆ ಅವಕಾಶ ನೀಡುತ್ತದೆ.

ಪ್ರತಿ ಕೋರ್ಸ್‌ಗೆ ಪ್ರವೇಶವನ್ನು ಪೂರ್ವ ಪ್ರವೇಶಗಳು ಮತ್ತು ಸಾಮಾನ್ಯ ಪ್ರವೇಶಗಳು ಎಂದು ಎರಡು ಹಂತದಲ್ಲಿ ನೀಡಲಾಗುತ್ತದೆ. ಪ್ರವೇಶದ ಅರ್ಹತೆಯ ಮಾನದಂಡ, ಎಪಿಯು ನಡೆಸುವ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಯಲ್ಲಿ (ಎನ್‌ಇಟಿ) ಉತ್ತೀರ್ಣರಾಗಬೇಕು ಅಥವಾ ಇತರೆ ಯಾವುದಾದರೂ ರಾಷ್ಟ್ರಮಟ್ಟದ ( ಕೆವಿಪಿವೈ, ಸ್ಯಾಾಟ್ ಇತರೆ) ಪರೀಕ್ಷೆಯಲ್ಲಿ ಅರ್ಹತೆ ಪಡೆದಿರಬೇಕು, ಜೊತೆಗೆ ತಾನು ನಡೆಸುವ ಸಂದರ್ಶನದಲ್ಲಿ ಉತ್ತೀರ್ಣರಾಗಬೇಕು ಎಂದಿದೆ. ಪದವಿ ವ್ಯಾಾಸಂಗಕ್ಕೆೆ ಸ್ವಲ್ಪ ದುಬಾರಿಯೇ ಎನಿಸಬಹುದಾದ ಒಟ್ಟಾಾರೆ ಸುಮಾರು 10 ಲಕ್ಷ ರುಪಾಯಿ (ಮೂರು ವರ್ಷಗಳ ಬೋಧನಾ ಶುಲ್ಕ, ವಾಸ್ತವ್ಯ ಇತರೆ ಖರ್ಚುಗಳು ಸೇರಿ) ಶುಲ್ಕ ನಿಗದಿ ಮಾಡಿದೆ. ಇದರಲ್ಲಿ ಆದಾಯದ ಆಧಾರದ ಮೇಲೆ ಹಲವು ವಿದ್ಯಾಾರ್ಥಿಗಳಿಗೆ ಶುಲ್ಕ ರಿಯಾಯಿತಿ, ವಿದ್ಯಾಾರ್ಥಿವೇತನ ನೀಡುತ್ತದೆ.

ಗೊಂದಲವಿರುವುದು ಇಲ್ಲಿಯೇ! ಎಪಿಯು ಎನ್‌ಇಟಿ ಮತ್ತು ಸಂದರ್ಶನದಲ್ಲಿ ಉತ್ತೀರ್ಣರಾಗುವುದೇ ಆದ್ಯತೆಯ ವಿಷಯ, ಇದರ ನಂತರವಷ್ಟೇ ವಿದ್ಯಾಾರ್ಥಿಯ ಶುಲ್ಕ ಪ್ರಮಾಣವನ್ನು ಅವನ/ಳ ಆದಾಯದ ಹಿನ್ನೆೆಲೆಯಲ್ಲಿ ನಿಗದಿಮಾಡಲಾಗುತ್ತದೆ ಎಂದು ಸ್ಪಷ್ಟೀಕರಿಸಿದೆ. ಆದರೆ ಪ್ರವೇಶದ ಅರ್ಜಿಯಲ್ಲೇ ಯಾವುದೇ ವಿವಿ ಕೇಳದ ಎಲ್ಲಾಾ ವೈಯಕ್ತಿಿಕ ಹಣಕಾಸು, ಆಸ್ತಿಿ ವಿವರಗಳನ್ನೂ ಕೇಳುತ್ತದೆ. ವಿದ್ಯಾಾರ್ಥಿಯ ಪೋಷಕರ ಆದಾಯ, ಅವರ ಕಾರು, ಸ್ವಂತ ಮನೆ, ವಾಣಿಜ್ಯ ಸಂಕೀರ್ಣ, ಇತರೆ ಆಸ್ತಿಿ ಹೊಂದಿದ್ದಾಾರಾ ಎಂಬೆಲ್ಲಾಾ ಮಾಹಿತಿಯನ್ನು ಕರಾರುವಾಕ್ಕಾಾಗಿ ಸಂಗ್ರಹಿಸುತ್ತದೆ. ಎನ್‌ಇಟಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಸಂದರ್ಶನಕ್ಕೆೆ ಹಾಜರಾಗುವ ಸಂದರ್ಭದಲ್ಲೇ ಅವರ ಪೋಷಕರಿಗೂ ಒಂದು ಹಣಕಾಸು ಸಂದರ್ಶನ (ಫೈನಾನ್ಷಿಿಯಲ್ ಇಂಟರ್‌ವ್ಯೂೆ) ನಡೆಸುತ್ತದೆ. ಇಲ್ಲಿ ಪೋಷಕರ ಆದಾಯ ತೆರಿಗೆ ರಿಟರ್‌ನ್‌‌ಗಳು, ಬ್ಯಾಾಂಕ್ ದಾಖಲೆಗಳು, ಇತರೆ ಆದಾಯ ಪ್ರಮಾಣಪತ್ರಗಳು ಎಲ್ಲದರ ಪ್ರತಿ ಪಡೆಯಲಾಗುತ್ತದೆ. ನಿಜವಾಗಿ ಎನ್‌ಇಟಿ ಮತ್ತು ಸಂದರ್ಶನದ ಸಾಧನೆಯೇ ಅರ್ಹತೆಯ ಮಾನದಂಡವಾಗುವುದಾದರೆ ಈ ಎಲ್ಲಾಾ ವಿವರಗಳನ್ನು ವಿವಿ ಮುಂಚೆಯೇ ಏಕೆ ಪಡೆಯಬೇಕು? ವಿದ್ಯಾಾರ್ಥಿ ಸಂದರ್ಶನದಲ್ಲಿ ತೇರ್ಗಡೆ ಆದ ನಂತರ ಅವನ ಪ್ರವೇಶ ಖಚಿತವಾದ ಮೇಲೆ ಪಡೆಯಬಹುದಲ್ಲ?

ಸಂದರ್ಶನದ ಫಲಿತಾಂಶ ಪ್ರಕಟಿಸುವಲ್ಲೂ ಪೋಷಕರನ್ನು, ವಿದ್ಯಾಾರ್ಥಿಗಳನ್ನು ಗೊಂದಲಕ್ಕೆೆ, ಅನಿಶ್ಚಿಿತತೆಗೆ ಕೆಡವುತ್ತದೆ. ಉದಾಹರಣೆಗೆ ಬಿಎಸ್ಸಿಿ ಭೌತಶಾಸ್ತ್ರ ವಿಭಾಗದಲ್ಲಿ ಸಾಮಾನ್ಯ ಪ್ರವೇಶ ವಿಭಾಗದಲ್ಲಿ ವಿವಿ, 2019-20ನೇ ಸಾಲಿಗೆ ಒಟ್ಟು 29 ಅಭ್ಯರ್ಥಿಗಳನ್ನು ಆಯ್ಕೆೆ ಮಾಡಬೇಕಿದೆ ಎಂದಿಟ್ಟುಕೊಳ್ಳೋೋಣ. ಪೂರ್ವ ಪ್ರವೇಶಾತಿಯಲ್ಲಿ 10 ವಿದ್ಯಾಾರ್ಥಿಗಳನ್ನು ಆಯ್ಕೆೆ ಮಾಡುತ್ತದೆ. ಆನಂತರ ಉಳಿದ 19 ವಿದ್ಯಾಾರ್ಥಿಗಳ ಆಯ್ಕೆೆಗೆ ಸುಮಾರು ಒಂದು ತಿಂಗಳು ಕಾಲಾವಕಾಶ ತೆಗೆದುಕೊಳ್ಳುತ್ತದೆ. ಸಂದರ್ಶನದ ಫಲಿತಾಂಶವೂ ಅಡ್ಡಗೋಡೆ ಮೇಲೆ ದೀಪವಿಟ್ಟಂತಿರುತ್ತದೆ. ಒಂದು ಮಾದರಿ ಹೀಗಿದೆ: ‘ಈ ಬಾರಿ ನಮಗೆ ಬಹಳಷ್ಟು ಸ್ವಾಾರಸ್ಯಕರ/ಆಸಕ್ತಿಿದಾಯಕ ಅರ್ಜಿಗಳು ಬಂದಿವೆ. ಹೀಗಾಗಿ ನಿಮ್ಮ ಪ್ರವೇಶವನ್ನು ಈ ಕೂಡಲೇ ದೃಢೀಕರಿಸಲಾಗುತ್ತಿಿಲ್ಲ. ಇಂತಿಷ್ಟು ದಿನಾಂಕದೊಳಗೆ ಅಂತಿಮ ನಿರ್ಧಾರ ತಿಳಿಸಲಾಗುವುದು.’ ಇಂತಹ ಒಂದು ಇಮೇಲ್ ಸಂದರ್ಶನ ನಡೆಸಿದ 15 ದಿನಗಳ ನಂತರ ಬರುತ್ತದೆ.

ಎಪಿಯು ನೀಡುವ ಈ ಮಾಹಿತಿ ವಿದ್ಯಾಾರ್ಥಿ ಸಂದರ್ಶನದಲ್ಲಿ ತೇರ್ಗಡೆಯಾಗಿದ್ದು ಪ್ರವೇಶಕ್ಕೆೆ ಕಾಯಬೇಕಾಗಿದೆ ಎಂಬ ಅರ್ಥ ಕೊಡುತ್ತದೆ. ಸ್ವಾಾರಸ್ಯಕರ/ಆಸಕ್ತಿಿದಾಯಕ ಅರ್ಜಿಗಳು ಅಂದರೇನು, ಅಂತಹ ಸ್ವಾಾರಸ್ಯ ಅಥವಾ ಆಸಕ್ತಿಿಯುತ ಅಂಶ ಕಾಯಬೇಕಾದ ವಿದ್ಯಾಾರ್ಥಿಯಲ್ಲಿ ಏನಿಲ್ಲ ಎಂಬ ಹಲವು ಗೊಂದಲಗಳು ಕಾಡುತ್ತವೆ. ಇತರೆ ವಿವಿಗಳ ಪದವಿ ತರಗತಿಗಳೂ ಅದೇ ಸಮಯದಲ್ಲಿ ಪ್ರಾಾರಂಭವಾಗುವುದರಿಂದ ವಿದ್ಯಾಾರ್ಥಿಗಳು ಬೇರೆ ಕಡೆ ಸಾವಿರಾರು ರುಪಾಯಿ ತೆತ್ತು, ಯಾವುದಾದರೊಂದು ಕಾಲೇಜಲ್ಲಿ ನಾಮಕಾವಸ್ಥೆೆ ಪ್ರವೇಶ ಪಡೆದು ಎಪಿಯು ನೀಡುವ ಮಾಹಿತಿಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಾಾ ಕೂರಬೇಕಾಗುತ್ತದೆ.

ಅದೆಲ್ಲಾಾ ಆದಮೇಲೆ ಇನ್ನೊೊಂದು ವಾರ ಬಿಟ್ಟು ಮತ್ತೆೆ ‘ಈ ಬಾರಿ ಹಲವು ಸ್ವಾಾರಸ್ಯಕರ/ಆಸಕ್ತಿಿದಾಯಕ ಅರ್ಜಿಗಳು ಬಂದಿದ್ದು ನಿಮಗೆ ಪ್ರವೇಶ ನೀಡಲಾಗುತ್ತಿಿಲ್ಲ’ ಎಂದು ವಿಷಾದಿಸಿ ಕೈ ತೊಳೆದುಕೊಳ್ಳುತ್ತದೆ. ಆರ್ಥಿಕ ನೆರವು ಕೋರಿ ಪ್ರವೇಶ ಬಯಸಿದ್ದ ವಿದ್ಯಾಾರ್ಥಿನಿಯೊಬ್ಬಳು ಈ ಹಂತದಲ್ಲಿ ‘ಆರ್ಥಿಕ ನೆರವು ಬೇಡ, ಪೂರಾ ಶುಲ್ಕ ಭರಿಸುತ್ತೇವೆ. ಸಾಮಾನ್ಯ ವರ್ಗದಲ್ಲಿ ಪ್ರವೇಶ ನೀಡಿ’ ಎಂದು ಕೋರಿದರೆ ‘ಈ ಹಂತದಲ್ಲಿ ನಿಮ್ಮ ಕೋರಿಕೆ ಈಡೇರಿಸಲು ಸಾಧ್ಯವಿಲ್ಲ’ ಎಂದು ಹೇಳುತ್ತದೆ. ಹಾಗಾದರೆ ಯಾವ ಹಂತದಲ್ಲಿ ಈ ಕೋರಿಕೆಯನ್ನು ವಿವಿ ಈಡೇರಿಸುತ್ತಿಿತ್ತು? ಮುಂಚೆಯೇ ಪೂರಾ ಶುಲ್ಕ ರು.2.8 ಲಕ್ಷ ನೀಡುತ್ತೇವೆ ಎಂದು ಫೋಷಿಸಿದ್ದರೆ ಪ್ರವೇಶ ಕೊಡುತ್ತಿಿತ್ತೇ? ಹಾಗಾದರೆ ಎನ್‌ಇಟಿ ಮತ್ತು ಸಂದರ್ಶನದ ಆಧಾರದ ಮೇಲೇಯೇ ಪ್ರವೇಶ ನೀಡುವುದು ಎಂಬ ವಿವಿಯ ಬದ್ಧತೆ ಏನಾಯಿತು ಎಂಬ ಅನುಮಾನ ಕಾಡುವುದಿಲ್ಲವೇ?

ಇನ್ನು ಬೇರೆ ವಿವಿಗಳು ಅನುಸರಿಸುವ ಯಾವುದೇ ಸಂವಿಧಾನ ಬದ್ಧ ಮೀಸಲಾತಿ ನೀತಿಯನ್ನು ಅಜೀಂ ಪ್ರೇಮ್‌ಜಿ ವಿವಿ ಅನುಸರಿಸುತ್ತಿಿಲ್ಲ. ಬದಲಿಗೆ ತಾನೇ ಒಂದು ಅನಾನುಕೂಲ ಅಂಶಗಳು ( ಡಿಸ್‌ಅಡ್‌ವಾಂಟೇಜ್ ಫ್ಯಾಾಕ್ಟರ್‌ಸ್‌) ಎಂಬ ಸಂಕೀರ್ಣ ನೀತಿ ಅಳವಡಿಸಿಕೊಂಡಿದೆ. ಎನ್‌ಇಟಿಯಲ್ಲಿ ತೇರ್ಗಡೆಯಾದ ವಿದ್ಯಾಾರ್ಥಿಗಳ, ಅವರ ಪೋಷಕರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಇತರೆ ಹಿನ್ನೆೆಲೆಗಳ ಆಧಾರದ ಮೇಲೆ ಅವರಿಗೆ ಅನಾನುಕೂಲ ಅಂಕ(ಡಿಸ್‌ಅಡ್‌ವಾಂಟೇಜ್ ಸ್ಕೋೋರ್ ) ನೀಡಿ ಪ್ರವೇಶಕ್ಕೆೆ ಪರಿಗಣಿಸಲಾಗುತ್ತದೆ ಎಂದು ಎಪಿಯು ಹೇಳುತ್ತದೆ. ಆದರೆ ಈ ಅನಾನುಕೂಲ ಅಂಶ/ಅಂಕಗಳ ಮಾನದಂಡವೇನು? ಅದನ್ನು ನಿರ್ಧರಿಸುವ ವಿಧಾನಗಳು ಯಾವುವು ಎಂಬುದನ್ನು ಬಹಿರಂಗಪಡಿಸುವುದಿಲ್ಲ.

‘ವಿದ್ಯಾಾರ್ಥಿಯ ಪೋಷಕರ ಖಾಸಗಿತನದ ಮೇಲೆ ಅಸಮರ್ಥನೀಯ ಆಕ್ರಮಣ’ ಎಂಬ ಕಾರಣ ಹೇಳಿ ಮಾಹಿತಿ ನೀಡಲು ನಿರಾಕರಿಸುತ್ತದೆ. (ಆದರೆ ವಿದ್ಯಾಾರ್ಥಿಯ ಅರ್ಜಿಯಲ್ಲೇ ಪೋಷಕರ ಅರ್ಥಿಕ ವಿವರಗಳು, ಆಸ್ತಿಿ ವಿವರಗಳನ್ನು ಪಡೆಯುವ, ಹಣಕಾಸು ಸಂದರ್ಶನದ ಸಂದರ್ಭದಲ್ಲಿ ಎಲ್ಲಾಾ ಖಾಸಗಿ ದಾಖಲೆ ಪಡೆಯುವ ಎಪಿಯುಗೆ ಅದು ಖಾಸಗಿತನದ ಮೇಲೆ ಅಸಮರ್ಥನೀಯ ಆಕ್ರಮಣ ಎನಿಸುವುದೇ ಇಲ್ಲ) ಯಾವುದೇ ಟ್ಯೂಷನ್, ತರಬೇತಿಯ ಸೌಲಭ್ಯವಿಲ್ಲದ ಪ್ರದೇಶದಲ್ಲಿ ವ್ಯಾಾಸಂಗ ಮಾಡಿದ, ಪಿಯುನಲ್ಲಿ ಶೇ.91 ಅಂಕ ಪಡೆದು, ವಿವಿಯ ಎನ್‌ಇಟಿಯಲ್ಲಿ, ಸಂದರ್ಶನದಲ್ಲಿ ತೇರ್ಗಡೆಯಾಗುವ ಗ್ರಾಾಮೀಣ ಪ್ರದೇಶದ, ಮಧ್ಯಮವರ್ಗದ ಹೆಣ್ಣುಮಗಳಿಗೆ ಎಪಿಯು ಪ್ರವೇಶ ನೀಡುವುದಿಲ್ಲ ಎಂದಾದರೆ ಆಯ್ಕೆೆಯಾದ ಅಭ್ಯರ್ಥಿಯ ಸಾಧನೆ ಅಥವಾ ಅನಾನುಕೂಲಕರ ಅಂಶಗಳನ್ನು ತಿಳಿಯುವ ಹಕ್ಕು ಆಕೆಗೆ, ಅವರ ಪೋಷಕರಿಗೆ ಇರುವುದಿಲ್ಲವೇ? ಇತರೆ ವಿವಿಗಳಲ್ಲಿ ಜಾತಿ ಅಥವಾ ಆದಾಯದ ಮೇಲೆ, ಇತರೆ ಮೀಸಲಾತಿ ಆಧಾರದ ಮೇಲೆ ಪ್ರವೇಶ ಪಡೆಯುವ ವಿದ್ಯಾಾರ್ಥಿಗಳ ವಿವರಗಳನ್ನು ವಿವಿಗಳ ಅಂತರ್ಜಾಲ ತಾಣದಲ್ಲಿ ಬಹಿರಂಗವಾಗಿ ಪ್ರಕಟಿಸಲಾಗುತ್ತದೆ. ಅದರಲ್ಲಿ ಖಾಸಗಿತನದ ಆಕ್ರಮಣ ಏನಿದೆ? ಹಾಗಿದ್ದರೆ ಎಪಿಯು ಪ್ರವೇಶ ಪ್ರಕ್ರಿಿಯೆಗೆ ಸಂಬಂಧಿಸಿದ ಅಂಶಗಳನ್ನು ಗುಟ್ಟಾಾಗಿ ಏಕೆ ಇಡಬೇಕು? ಇದನ್ನು ಪ್ರಶ್ನಿಿಸಿದರೆ ಎಪಿಯು ಸಮರ್ಥಿಸಿಕೊಳ್ಳಲಾಗದೆ ಮೌನಕ್ಕೆೆ ಶರಣಾಗುವುದೇಕೆ?

ಎಪಿಯು ಯುಜಿಸಿಯ ಎಷ್ಟೋೋ ನಿಯಮಗಳನ್ನು ಅನುಸರಿಸುತ್ತಿಿಲ್ಲ ಹಾಗೂ ಸ್ವರೂಪ ಮತ್ತು ಕಾರ್ಯದಕ್ಷತೆಗೆ ಸಂಬಂಧಿಸಿದಂತೆ ಸೂಕ್ತ ನಿಯಮ/ಕಾನೂನುಗಳನ್ನು ಅಳವಡಿಸಿಕೊಂಡಿಲ್ಲ ಎಂದು ಎಪಿಯುಗೆ ಭೇಟಿ ನೀಡಿದ ಯುಜಿಸಿ ತಜ್ಞರ ಸಮಿತಿ ಅಭಿಪ್ರಾಾಯಪಟ್ಟಿಿದೆ. ಅದಕ್ಕೆೆ ಪೂರಕವೆಂಬಂತೆ ಎಪಿಯುನ ಎಷ್ಟೋೋ ವಿಷಯಗಳು ಪಾರದರ್ಶಕವಾಗಿಲ್ಲ.

ಪ್ರವೇಶಕ್ಕೆೆ ಸಂಬಂಧಿಸಿದಂತೆ ಎಪಿಯು ಯಾವ ಯಾವ ಕೋರ್ಸ್‌ನಲ್ಲಿ ಎಷ್ಟು ಸಂಖ್ಯೆೆಯ ಪ್ರವೇಶಾವಕಾಶವಿದೆ? ಪೂರ್ವ ಪ್ರವೇಶ ಪ್ರಕ್ರಿಿಯೆಯಲ್ಲಿ ಎಷ್ಟು ವಿದ್ಯಾಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ? ಸಾಮಾನ್ಯ ಪ್ರವೇಶ ಪ್ರಕ್ರಿಿಯೆಯಲ್ಲಿ ಎಷ್ಟು ಸೀಟುಗಳು ಲಭ್ಯವಿದೆ? ಇದ್ಯಾಾವುದನ್ನೂ ವಿವಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸುವುದಿಲ್ಲ. ಉದಾಹರಣೆಗೆ, ಭೌತಶಾಸ್ತ್ರ ಪದವಿ ಸಾಮಾನ್ಯ ಪ್ರವೇಶಕ್ಕೆೆ ಕೇವಲ 19-20 ಸೀಟುಗಳು ಲಭ್ಯವಿದೆ, ಅದರಲ್ಲಿ ಕೇವಲ 5 ಸೀಟುಗಳು ಹೆಣ್ಣುಮಕ್ಕಳಿಗೆ ಮೀಸಲಿದೆ ಎಂದು ವೆಬ್‌ಸೈಟ್‌ನಲ್ಲಿ ಹಾಕಬಹುದಲ್ಲ? ಆಗ ವಿದ್ಯಾಾರ್ಥಿಗಳೂ ಪರ್ಯಾಯ ವ್ಯವಸ್ಥೆೆಗೆ ಮಾನಸಿಕವಾಗಿ ಸಿದ್ಧರಾಗೇ ಅರ್ಜಿ ಹಾಕುತ್ತಾಾರೆ. ಅಷ್ಟೇಅಲ್ಲ, ಬೇರೆ ವಿವಿಗಳು, ಕೆವಿಪಿವೈ, ಜೆಇಇ ಪ್ರಾಾಯೋಜಿಸುವ ಸಂಸ್ಥೆೆಗಳಂತೆ ಎನ್‌ಇಟಿಯಲ್ಲಿ ತೇರ್ಗಡೆಯಾದವರ ಪಟ್ಟಿಿ, ಸಂದರ್ಶನಕ್ಕೆೆ ಆಯ್ಕೆೆಯಾದವರ ಪಟ್ಟಿಿ ಸಹ ಪ್ರಕಟಿಸುವುದಿಲ್ಲ.

ಪಿಯು ಅಂಕ, ಎನ್‌ಇಟಿ ಅಂಕ, ಸಂದರ್ಶನದ ಅಂಕ, ಅನಾನುಕೂಲಕರ ಅಂಕ ಇವನ್ನು ಆಧರಿಸಿದ ಮೆರಿಟ್ ಲಿಸ್‌ಟ್‌ ಸಹ ಪ್ರಕಟಿಸುವುದಿಲ್ಲ. ಇವನ್ನೆೆಲ್ಲಾಾ ಎಪಿಯು, ತೆರೆಮರೆಯಲ್ಲೇ ಗುಟ್ಟಾಾಗಿ ವೈಯಕ್ತಿಿಕ ಇಮೇಲ್ ಮುಖಾಂತರವೇ ನಡೆಸುತ್ತದೆ. ಪ್ರವೇಶಕ್ಕೆೆ ಅರ್ಜಿ ಹಾಕಿದ ಪ್ರತಿಯೊಬ್ಬ ಅಭ್ಯರ್ಥಿಗೆ ತಾನು ಆಯ್ಕೆೆಯಾದ ವಿದ್ಯಾಾರ್ಥಿಗಿಂತ ಯಾವ ರೀತಿಯಲ್ಲಿ ಭಿನ್ನ? ಯಾವ ಕಾರಣಕ್ಕೆೆ ತಾನು ಆಯ್ಕೆೆ ಆಗಿಲ್ಲ ಎಂದು ತಿಳಿದುಕೊಳ್ಳುವ ಹಕ್ಕು ಇರುತ್ತದೆ. ಆದರೆ ಎಪಿಯು ಅದಕ್ಕೆೆ ಅವಕಾಶವೇ ನೀಡುವುದಿಲ್ಲ. ಹಾಗಾಗಿ ಹಲವು ವೈವಿಧ್ಯಮತ್ತು ವಿಶಿಷ್ಟತೆಯನ್ನು ಹೊಂದಿರುವ ಅಜೀಂಪ್ರೇಮ್‌ಜೀ ವಿಶ್ವವಿದ್ಯಾಾಲಯ ವಿದ್ಯಾಾರ್ಥಿಗಳ ದಿಕ್ಕು ತಪ್ಪಿಿಸದೆ ತನ್ನ ಪ್ರವೇಶ ಪ್ರಕ್ರಿಿಯೆಯನ್ನು ಪೂರಾ ಪಾರದರ್ಶಕವಾಗಿಸುವ ಮೂಲಕ ಅಜೀಂಪ್ರೇಮ್‌ಜೀ ಪ್ರತಿಷ್ಠಾಾನದ ವಿಶ್ವಾಾಸಾರ್ಹತೆಯನ್ನು ಕಾಪಾಡಿಕೊಳ್ಳುವ ಪ್ರಯತ್ನ ಮಾಡಬೇಕಿದೆ.