Sunday, 29th November 2020

ಮಾದಕವಸ್ತು ಖರೀದಿ ವೇಳೆ ಟಿವಿ ನಿರೂಪಕಿ ಪ್ರೀತಿಕಾ ಬಂಧನ

ಮುಂಬೈ: ಮಾದಕವಸ್ತುಗಳ ಮಾರಾಟ ಮತ್ತು ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಟಿವಿ ಆಂಕರ್ ಪ್ರೀತಿಕಾ ಚೌವ್ಹಾಣ್ ರನ್ನು ಮುಂಬೈನ ಮಾದಕವಸ್ತು ನಿಯಂತ್ರಣ ತಂಡದ ಅಧಿಕಾರಿಗಳು ಬಂಧಿಸಿದ್ದು, ವಿಚಾರಣೆಗೊಳಪಡಿಸಿದ್ದಾರೆ.

ಮಾದಕವಸ್ತುವನ್ನು ಖರೀದಿಸುತ್ತಿದ್ದ ಸಂದರ್ಭದಲ್ಲೇ ಅಧಿಕಾರಿಗಳು ಪ್ರೀತಿಕಾ ರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಅಧಿಕಾರಿಗಳು ಕಿಲ್ಲೋ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನಟಿ ಸಾವಧಾನ್ ಇಂಡಿಯಾ, ದೇವೋ ಕಿ ದೇವ್ ಮಹಾದೇವ್ ಸೇರಿದಂತೆ ಕೆಲವು ಹಿಂದಿ ಧಾರಾವಾಹಿಗಳನ್ನಿ ನಟಿಸುತ್ತಿದ್ದರು ಎಂದು ತಿಳಿದು ಬಂದಿದೆ.

ವರ್ಸೋವಾ ಮತ್ತು ಮುಂಬೈನಲ್ಲಿ ಮಾದಕವಸ್ತು ನಿಯಂತ್ರಣ ತಂಡದ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದು, ಮಫ್ತಿ ನಲ್ಲಿದ್ದ ಅಧಿಕಾರಿಗಳು ಇದುವರೆಗೂ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿ ರನ್ನು ಬಂಧಿಸಿದ ಬಳಿಕ ಬಾಲಿವುಡ್ ನಲ್ಲಿ ಮಾದಕ ವಸ್ತುಗಳ ಮಾರಾಟ ಜಾಲ ಹರಡಿರುವ ಶಂಕೆ ವ್ಯಕ್ತವಾಗಿತ್ತು. ರಿಯಾ ಚಕ್ರವರ್ತಿ ಮೊಬೈಲ್ ಸಂದೇಶ, ಕಾಲ್ ಡಿಸೈಲ್ಸ್ ನಲ್ಲಿ ಅನೇಕ ಅಂಶಗಳು ಪತ್ತೆಯಾಗಿದ್ದವು.

ಕಳೆದ ಜೂನ್.14ರಂದು ಮುಂಬೈ ನಿವಾಸದಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ನಿಗೂಢವಾಗಿ ಮೃತಪಟ್ಟಿದ್ದರು. ಕೇಂದ್ರ ತನಿಖಾ ತಂಡವು ಈ ಸಾವಿನ ಪ್ರಕರಣವನ್ನು ಕೈಗೆತ್ತಿಕೊಂಡು ತನಿಖೆ ನಡೆಸುತ್ತಿದ್ದು, ಇನ್ನೊಂದು ದಿಕ್ಕಿನಲ್ಲಿ ಮಾದಕ ವಸ್ತುಗಳ ನಿಯಂತ್ರಣಕ್ಕೆ ಎನ್ ಸಿಬಿ ಹೆಚ್ಚಿನ ನಿಗಾ ವಹಿಸಲಾಗಿದೆ.

Leave a Reply

Your email address will not be published. Required fields are marked *