Tuesday, 29th September 2020

ಮತ್ತೆ ಸಿಸಿಬಿ ಕಸ್ಟಡಿಗೆ ಸಂಜನಾ

ಬೆಂಗಳೂರು: ಸ್ಯಾಂಡಲ್‍‍ವುಡ್‍ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದರೆ, ಇನ್ನೋರ್ವ ನಟಿ ಸಂಜನಾ ಗಲ್ರಾನಿಗೆ ಮೂರು ದಿನ ಸಿಸಿಬಿ ವಿಚಾರಣೆ ಬಿಸಿ ಮುಂದು ವರೆಯಲಿದೆ.

ಸಂಜನಾ ಮತ್ತಷ್ಟು ವಿಚಾರಣೆ ಬಾಕಿ ಎಂದ ಸಿಸಿಬಿ ತನಿಖಾಧಿಕಾರಿಗಳ ಮನವಿಗೆ ಅಸ್ತು ಎಂದು ನ್ಯಾಯಾಲಯ ಮತ್ತೆ ಎರಡು ದಿನ ಸಿಸಿಬಿ ಕಸ್ಟಡಿಗೆ ಸಂಜನಾಳನ್ನು ನೀಡಿ ಆದೇಶ ಹೊರಡಿಸಿದೆ. ಈ ಮೂಲಕ ರಾಗಿಣಿ ಮಾತ್ರ ಜೈಲಿಗೆ, ಸಂಜನಾ ಸಿಸಿಬಿ ಕಸ್ಟಡಿಗೆ ಹೋದಂತಾಗಿದೆ.

ಈಗಾಗಲೇ ನ್ಯಾಯಾಂಗ ಬಂಧನದ ಅವಧಿ ಮುಗಿದ ಪರಿಣಾಮ ಸಿಸಿಬಿ ಪೊಲೀಸರು ಇಂದು ಎಲ್ಲಾ ಆರೋಪಿಗಳನ್ನು ಬೆಂಗಳೂರಿನ ಒಂದನೇ ಎಸಿಎಂಎಂ ಕೋರ್ಟ್ ಗೆ ಹಾಜರುಪಡಿಸಿದರು. ಬೆಂಗಳೂರಿನ ಒಂದನೇ ಎಸಿಎಂಎಂ ಕೋರ್ಟ್ ನಟಿ ಸಂಜನಾ ಅವರನ್ನು ಇನ್ನೂ ವಿಚಾರಣೆ ನಡೆಸಬೇಕಾದ ಹಿನ್ನೆಲೆಯಲ್ಲಿ ಪೊಲೀಸ್ ಕಸ್ಟಡಿಗೆ ನೀಡಿದ್ದು, ಹಾಗೆ ನಟಿ ರಾಗಿಣಿ ಹಾಗೂ ಉಳಿದ ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಆದೇಶ ನೀಡಿದೆ.

Leave a Reply

Your email address will not be published. Required fields are marked *