Sunday, 17th October 2021

ಕಿರುತೆರೆಯ ಮಾಯಾಮೃಗ ಖ್ಯಾತಿಯ ಉಮೇಶ್​ ಹೆಗ್ಡೆ ಇನ್ನಿಲ್ಲ

ಬೆಂಗಳೂರು: ಚಂದನವನದ ಹಿರಿಯ ನಟ ಉಮೇಶ್​ ಹೆಗ್ಡೆ(71) ಸೋಮವಾರ ನಿಧನರಾಗಿದ್ದಾರೆ.

ಸಿನಿಮಾ ಶೂಟಿಂಗ್​ ಮುಗಿಸಿ ಮರಳುತ್ತಿದ್ದ ವೇಳೆ ಅವರಿಗೆ ಹೃದಾಯಾಘಾತವಾಗಿತ್ತು. ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾದೇ ಬೆಳಗ್ಗೆ ನಿಧನರಾಗಿದ್ದಾರೆ.

ಉಮೇಶ್​ ಮೃತದೇಹವನ್ನು ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ಬಳಿಕ ಕುಟುಂಬಸ್ಥರು ಅಂತ್ಯಕ್ರಿಯೆ ನೆರವೇರಿಸಲಿದ್ದಾರೆ.

ಉಮೇಶ್​ ಹೆಗ್ಡೆ ಸಾಕಷ್ಟು ಧಾರವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದರು.  ಹಿರಿಯ ನಟನ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ಸೋಶಿಯಲ್​ ಮೀಡಿಯಾ ಪೋಸ್ಟ್​ಗಳ ಮೂಲಕ ಸಾಕಷ್ಟು ತಾರೆಯರು ಉಮೇಶ್​ ಹೆಗ್ಡೆ ಸಾವಿಗೆ ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *