Sunday, 27th November 2022

ಹಿತೈಷಿಗಳ ಹಾರೈಕೆ ಕ್ಷೇಮವಾಗಿದ್ದೆನೆ: ಉಸ್ಮಾನ್ ಪಟೇಲ್ ಖಾನ್

ಕೋಲಾರ: ದೇವರ ದಯೆಯಿಂದ ಚೇತರಿಸಿಕೊಳ್ಳುತ್ತಿದ್ದು ಹಿತೈಷಿಗಳು, ಬೆಂಬಲಿಗರು ಆತಂಕ ಪಡುವ ಅಗತ್ಯವಿಲ್ಲ ಎಂದು ಅಲ್ಪಸಂಖ್ಯಾತ ಸಮುದಾಯದ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಉಸ್ಮಾನ್ ಪಟೇಲ್ ಖಾನ್ ಹೇಳಿದ್ದಾರೆ.

ದೂರವಾಣಿ ಮೂಲಕ ವಿಶ್ವವಾಣಿ ಪತ್ರಿಕೆಯೊಂದಿಗೆ ಮಾತನಾಡಿದ ಲಘು ಹೃದಯಾಘಾತವಾಗಿ ಆರೋಗ್ಯದಲ್ಲಿ ಏರುಪೇರಾ ಗಿತ್ತು, ಬೆಂಗಳೂರಿನಲ್ಲಿ ಹೃದಯ ಶಸ್ತ್ರಚಿಕಿತ್ಸೆ ಆಗಿದ್ದು ಆ ದೇವರ ದಯೆಯಿಂದ ಅಭಿಮಾನಿಗಳ, ಹಿತೈಷಿಗಳ ಹಾರೈಕೆಯಿಂದ ಚೇತರಿಸಿಕೊಳ್ಳುತ್ತಿದ್ದು ಶೀಘ್ರದಲ್ಲಿಯೇ ಸಾರ್ವಜನಿಕ ಸೇವೆಗೆ ಮರಳುತ್ತೆನೆ ಯಾರು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿ ದ್ದಾರೆ.