Tuesday, 26th October 2021

ಕಟ್ಟಕಡೆಯ ವ್ಯಕ್ತಿಗೂ ಕೂಡ ಲಸಿಕೆ ದೊರೆಯುವಂತಾಗಬೇಕು

ಸಿರಾ: ದೇಶದ ಕಟ್ಟಕಡೆಯ ವ್ಯಕ್ತಿಗೂ ಕೂಡ ಲಸಿಕೆ ದೊರೆಯುವಂತಾಗಬೇಕು. ಯಾರು ಎರೆಡು ಡೋಸ್ ಲಸಿಕೆಯನ್ನು ಪಡೆಯುತ್ತಾರೋ ಅವರು ಕೋವಿಡ್ ವಿರುದ್ದ ವಿಜಯ ಸಾಧಿಸುವುದರ ಜೊತೆಗೆ ಬೇರೆಯವರಿಗೆ ಈ ಸಾಂಕ್ರಾಮಿಕ ರೋಗ ಹರಡದಂತೆ ದೇಶವನ್ನು ಕರೋನಾ ಮುಕ್ತವಾಗಿ ಮಾಡಲು ಅನುಕೂಲ ವಾಗುತ್ತದೆ.

ಈ ನಿಟ್ಟಿನಲ್ಲಿ ಇಂದು ದೇಶಾದ್ಯಾಂತ ಬೃಹತ್ ಲಸಿಕಾ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ದಿನಾಂಕ ಸೆ.೧೭ರಂದು ನಗರದ ಪ್ರವಾಸಿಮಂದಿರದ ವೃತ್ತದಲ್ಲಿ ಸಿರಾ ನಗರಸಭೆ ಕಾರ್ಯಾಲಯ ಹಾಗೂ ತಾಲ್ಲೂಕು ಆಡಳಿತ ವತಿಯಿಂದ ೭೫ನೇ ಸ್ವಾತಂತ್ರ‍್ಯ ದಿನಾಚಾರಣೆಯ ಅಮೃತೋ ತ್ಸವದ ಅಂಗವಾಗಿ ಬೃಹತ್ ಲಸಿಕಾ ಮೇಳವನ್ನು ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾದೀಶ ಹಾಗೂ ಸಿರಾ ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಎಸ್ ಮಹೇಶ್ ತಿಳಿಸಿದರು.

ತಹಶೀಲ್ದಾರ್ ಮಮತ ಮಾತನಾಡಿ ಸಿರಾ ತಾಲ್ಲೂಕಿನಾದ್ಯಂತ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಬ್ ಸೆಂಟರ್‌ಗಳನ್ನು ತೆರೆದು ಲಸಿಕೆಗಳನ್ನು ನೀಡಲಾಗುತ್ತದೆ. ಲಸಿಕೆಯಿಂದ ಯಾವುದೇ ರೀತಿಯ ಅಡ್ಡಪರಿಣಾಮ ಉಂಟಾಗುವುದಿಲ್ಲ ೧೮ ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಸಹ ಎರೆಡು ಡೋಸ್ ಲಸಿಕೆಯನ್ನು ಹಾಕಿಸಿಕೊಳ್ಳ ಬೇಕು ಹಾಗೇ ಗರ್ಭಿಣಿ ಹಾಗೂ ಬಾಣಂತಿಯರು ಲಸಿಕೆ ಹಾಕಿಸಿಕೊಳ್ಳಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಆಯುಕ್ತ ಶ್ರೀನಿವಾಸ್, ಜಿಲ್ಲಾ ನೋಡಲ್ ಅಧಿಕಾರಿ ಪ್ರಕಾಶ್. ಡಿ.ಆರ್., ಆರೋಗ್ಯ ಇಲಾಖೆ ಹಾಗೂ ನಗರಸಭೆ ಸಿಬ್ಬಂದಿಗಳು ಹಾಜರಿದ್ದರು.

Leave a Reply

Your email address will not be published. Required fields are marked *