ಮನೆಯಲ್ಲಿ ಆರ್ಥಿಕ ಸಮೃದ್ಧಿ (attract money) ಉತ್ತಮವಾಗಿದ್ದರೆ ಸುಖ, ಶಾಂತಿ, ನೆಮ್ಮದಿಯೂ ಜೊತೆಯಾಗಿರುತ್ತದೆ. ಇದಕ್ಕಾಗಿ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು (Positive energy) ವೃದ್ಧಿಸುವುದು ಬಹುಮುಖ್ಯ. ಈ ನಿಟ್ಟಿನಲ್ಲಿ ವಾಸ್ತು ತತ್ತ್ವಗಳು (Vastu Tips) ಸಹಾಯ ಮಾಡುತ್ತದೆ. ಇದಕ್ಕಾಗಿ ಕೆಲವು ವಾಸ್ತು ನಿಯಮಗಳನ್ನು ಅಳವಡಿಸಿಕೊಳ್ಳಬೇಕು.
ಮನೆಯ ವಾಸ್ತು ಬದಲಾವಣೆಗಳಿಗೆ ಸಂಪೂರ್ಣ ಮನೆಯನ್ನೇ ಬದಲಾಯಿಸಬೇಕಾದ ಅಗತ್ಯವಿಲ್ಲ. ಈಗ ಇರುವಂತಹ ಮನೆಗೆ ಕೆಲವು ಸರಳ ಹೊಂದಾಣಿಕೆ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಜೀವನದಲ್ಲಿ ಸಂಪತ್ತು ಮತ್ತು ಸಕಾರಾತ್ಮಕತೆಗೆ ಆಹ್ವಾನ ಕೊಟ್ಟಂತಾಗುತ್ತದೆ.
ಮನೆಗೆ ಸಮೃದ್ಧಿಯನ್ನು ಆಕರ್ಷಿಸಲು ಮನೆಯನ್ನು ಮ್ಯಾಗ್ನೆಟ್ ಆಗಿ ಪರಿವರ್ತಿಸಲು ಸಹಾಯ ಮಾಡುವ ಕೆಲವು ಸುಲಭವಾದ ವಾಸ್ತು ಸಲಹೆಗಳು ಇಲ್ಲಿವೆ.
ಪ್ರವೇಶದ್ವಾರವನ್ನು ಸ್ವಚ್ಛವಾಗಿರಿಸಿ
ಮನೆಯ ಪ್ರವೇಶದ್ವಾರದಲ್ಲಿ ಶಕ್ತಿಯು ಹರಿಯುತ್ತಿರುತ್ತದೆ. ಆದ್ದರಿಂದ ಈ ಪ್ರದೇಶವನ್ನು ಸ್ವಚ್ಛವಾಗಿಡುವುದು ಬಹುಮುಖ್ಯ. ಚೆನ್ನಾಗಿ ಬೆಳಗಿದ ಮತ್ತು ಸ್ವಚ್ಛವಾದ ಪ್ರವೇಶದ್ವಾರವು ಮನೆಗೆ ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಇದು ಸಮೃದ್ಧಿಗೆ ಅವಶ್ಯಕವಾಗಿದೆ. ಸಂಪತ್ತನ್ನು ಆಕರ್ಷಿಸಲು ಪ್ರವೇಶದ್ವಾರದ ಬಳಿ ಹಸಿರು ಸಸ್ಯ ಅಥವಾ ನೀರಿನ ಕಾರಂಜಿ ಇರಿಸಿ ಮತ್ತು ಸಮೃದ್ಧಿಯನ್ನು ತರಲು ಲಕ್ಷ್ಮಿ ಹೆಜ್ಜೆ ಗುರುತುಗಳು ಅಥವಾ ಸ್ವಸ್ತಿಕದಂತಹ ಮಂಗಳಕರ ಚಿಹ್ನೆಗಳಿಂದ ಬಾಗಿಲನ್ನು ಅಲಂಕರಿಸಿ.
ನಗದು ಲಾಕರ್ ಅನ್ನು ನೈಋತ್ಯದಲ್ಲಿ ಇರಿಸಿ
ನೈಋತ್ಯ ಮೂಲೆಯನ್ನು “ಉಳಿತಾಯ ಮತ್ತು ಸ್ವತ್ತುಗಳ ವಲಯ” ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ನಗದು ಲಾಕರ್ ಅಥವಾ ಹಣವನ್ನು ಸುರಕ್ಷಿತವಾಗಿ ಇರಿಸುವುದು ಸಂಪತ್ತನ್ನು ಸಂರಕ್ಷಿಸಲು ಮತ್ತು ಬೆಳೆಯಲು ಸಹಾಯ ಮಾಡುತ್ತದೆ. ಇದು ವಾಸ್ತು ಪ್ರಕಾರ ನಿರ್ಣಾಯಕವಾಗಿದೆ. ನಗದು ಲಾಕರ್ ಉತ್ತರದ ಕಡೆಗೆ ತೆರಿಯುವಂತಿರಬೇಕು. ಇದು ಸಂಪತ್ತು ಮತ್ತು ಆರ್ಥಿಕ ಬೆಳವಣಿಗೆಯನ್ನು ಸಂಕೇತಿಸುತ್ತದೆ.
ಅನಗತ್ಯ ವಸ್ತುಗಳು ಮನೆಯೊಳಗೆ ಬೇಡ
ಮನೆಯಲ್ಲಿನ ಅಸ್ತವ್ಯಸ್ತತೆಯು ಧನಾತ್ಮಕ ಶಕ್ತಿಯ ಹರಿವನ್ನು ನಿರ್ಬಂಧಿಸುತ್ತದೆ. ಸಂಪತ್ತು ಮತ್ತು ಸಂತೋಷದ ಸುಗಮ ಹರಿವನ್ನು ಕಾಪಾಡಿಕೊಳ್ಳಲು ವಾಸದ ಸ್ಥಳಗಳು ಅಚ್ಚುಕಟ್ಟಾಗಿರಿಸುವುದು ಮುಖ್ಯವಾಗಿದೆ. ಇದಕ್ಕಾಗಿ ಮನೆಯಿಂದ ಯಾವುದೇ ಮುರಿದ ವಸ್ತುಗಳು, ಬಳಕೆಯಾಗದ ಎಲೆಕ್ಟ್ರಾನಿಕ್ಸ್, ಅನಗತ್ಯ ಪೀಠೋಪಕರಣಗಳಿದ್ದರೆ ಕೂಡಲೇ ತೆಗೆದು ಹಾಕಿ.
ಕನ್ನಡಿಗಳನ್ನು ಬಳಸಿ
ಕನ್ನಡಿಗಳು ಶಕ್ತಿಯನ್ನು ಪ್ರತಿಬಿಂಬಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಮನೆಯಲ್ಲಿ ಸಕಾರಾತ್ಮಕ ಕಂಪನಗಳ ಹರಿವನ್ನು ಇದು ಹೆಚ್ಚಿಸಬಹುದು ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತದೆ. ಆಹಾರವನ್ನು ಪ್ರತಿಬಿಂಬಿಸಲು ಊಟದ ಕೋಣೆಯಲ್ಲಿ ಕನ್ನಡಿಗಳನ್ನು ಇರಿಸಿ. ಇದು ಸಂಪತ್ತಿನ ದ್ವಿಗುಣವನ್ನು ಸಂಕೇತಿಸುತ್ತದೆ. ಕನ್ನಡಿಗಳನ್ನು ಮುಖ್ಯ ಬಾಗಿಲಿಗೆ ಎದುರಾಗಿ ಇರಿಸಬೇಡಿ. ಇದು ಮನೆಯ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ.
ಉತ್ತರದಲ್ಲಿರಲಿ ನೀರು
ವಾಸ್ತುವಿನಲ್ಲಿ ನೀರಿನ ಹರಿವು ಸಂಪತ್ತಿನ ಸಂಕೇತವಾಗಿದೆ. ಉತ್ತರ ದಿಕ್ಕಿನಲ್ಲಿ ಕಾರಂಜಿ ಅಥವಾ ಅಕ್ವೇರಿಯಂ ಅನ್ನು ಇರಿಸಿದರೆ ಮನೆಗೆ ಸಂಪತ್ತು ಮತ್ತು ಯಶಸ್ಸನ್ನು ಆಕರ್ಷಿಸಬಹುದು. ಕಾರಂಜಿಗಳು ಅಥವಾ ಅಕ್ವೇರಿಯಂಗಳಲ್ಲಿನ ನೀರು ಯಾವಾಗಲೂ ಶುದ್ಧವಾಗಿರಬೇಕು ಮತ್ತು ಸದಾ ಹರಿಯುತ್ತಿರಬೇಕು. ನೀರಿನ ನಿಶ್ಚಲತೆ ಹಣಕಾಸಿನ ಬೆಳವಣಿಗೆಗೆ ಅಡ್ಡಿಯಾಗಬಹುದು.
ಸ್ವಚ್ಛವಾಗಿರಲಿ ಈಶಾನ್ಯ ಮೂಲೆ
ಮನೆಯ ಈಶಾನ್ಯ ಮೂಲೆಯನ್ನು ಅತ್ಯಂತ ಪವಿತ್ರ ಭಾಗವೆಂದು ಪರಿಗಣಿಸಲಾಗುತ್ತದೆ. ಇದು ಆಧ್ಯಾತ್ಮಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಪ್ರತಿನಿಧಿಸುತ್ತದೆ. ಈ ಜಾಗವನ್ನು ಸ್ವಚ್ಛವಾಗಿ ಇರಿಸುವುದು ಧನಾತ್ಮಕ ಶಕ್ತಿಯ ಮುಕ್ತ ಹರಿವಿಗೆ ಸಹಕಾರಿಯಾಗಿದೆ. ಮನೆಯಲ್ಲಿ ಧನಾತ್ಮಕ ಕಂಪನಗಳನ್ನು ಹೆಚ್ಚಿಸಲು ಈಶಾನ್ಯದಲ್ಲಿ ಸಣ್ಣ ದೇವಾಲಯ ಅಥವಾ ಧ್ಯಾನ ಪ್ರದೇಶವನ್ನು ಸ್ಥಾಪಿಸಿ. ಈ ಮೂಲೆಯಲ್ಲಿ ಭಾರವಾದ ಪೀಠೋಪಕರಣ ಅಥವಾ ಶೇಖರಣಾ ವಸ್ತುಗಳನ್ನು ಇರಿಸಬೇಡಿ.
ಮನೆಯ ಬಣ್ಣಗಳು
ಮನೆಯ ಶಕ್ತಿಯ ಮೇಲೆ ಬಣ್ಣಗಳು ಪರಿಣಾಮ ಬೀರುತ್ತವೆ. ವಾಸ್ತು ಪ್ರಕಾರ ವಿಭಿನ್ನ ಬಣ್ಣಗಳು ವಿಭಿನ್ನ ಅಂಶಗಳನ್ನು ಪ್ರತಿನಿಧಿಸುತ್ತವೆ ಮತ್ತು ಅವುಗಳನ್ನು ಸರಿಯಾಗಿ ಬಳಸುವುದರಿಂದ ಧನಾತ್ಮಕತೆಯನ್ನು ಹೆಚ್ಚಿಸಬಹುದು, ಸಂಪತ್ತನ್ನು ಆಕರ್ಷಿಸಬಹುದು. ಉತ್ತರ ದಿಕ್ಕಿನಲ್ಲಿ ಹಸಿರು ಮತ್ತು ನೀಲಿ ಬಣ್ಣಗಳನ್ನು ಬಳಸಿ. ಈ ಬಣ್ಣಗಳು ಬೆಳವಣಿಗೆ ಮತ್ತು ಸಮೃದ್ಧಿಗೆ ಸಂಬಂಧಿಸಿವೆ. ಉತ್ತರ ದಿಕ್ಕಿನಲ್ಲಿ ಕೆಂಪು ಬಣ್ಣವನ್ನು ಬಳಸುವುದನ್ನು ತಪ್ಪಿಸಿ. ಯಾಕೆಂದರೆ ಇದು ಬೆಂಕಿಯನ್ನು ಪ್ರತಿನಿಧಿಸುತ್ತದೆ. ಇದರಿಂದ ಆರ್ಥಿಕ ಶಕ್ತಿಗೆ ತೊಂದರೆಯಾಗುತ್ತದೆ.
ಸಸ್ಯಗಳಿಂದ ಅಲಂಕರಿಸಿ
ಕೆಲವು ಒಳಾಂಗಣ ಸಸ್ಯಗಳು ಹಣಕಾಸು ಮತ್ತು ಯೋಗಕ್ಷೇಮದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಬಿದಿರು, ಮನಿ ಪ್ಲಾಂಟ್‌ಗಳು ಮತ್ತು ತುಳಸಿಯಂತಹ ಸಸ್ಯಗಳನ್ನು ವಾಸ್ತು ಪ್ರಕಾರ ಮಂಗಳಕರವೆಂದು ಪರಿಗಣಿಸಲಾಗಿದೆ. ಆರ್ಥಿಕ ಬೆಳವಣಿಗೆಯನ್ನು ಆಕರ್ಷಿಸಲು ಆಗ್ನೇಯ ದಿಕ್ಕಿನಲ್ಲಿ ಮನಿ ಪ್ಲಾಂಟ್ ಇರಿಸಿ. ಪಾಪಾಸುಕಳ್ಳಿಯಂತಹ ಮುಳ್ಳಿನ ಗಿಡಗಳನ್ನು ಒಳಾಂಗಣದಲ್ಲಿ ಇಡುವುದನ್ನು ತಪ್ಪಿಸಿ. ಇದು ಧನಾತ್ಮಕ ಶಕ್ತಿಯ ಹರಿವನ್ನು ತಡೆಯುತ್ತದೆ.
ಸಂಜೆ ದೀಪ ಬೆಳಗಿಸಿ
ಮನೆಯಲ್ಲಿ ಸಂಜೆ ದೀಪವನ್ನು ಬೆಳಗಿಸುವುದು ಭರವಸೆ, ಸ್ಪಷ್ಟತೆ ಮತ್ತು ನಕಾರಾತ್ಮಕ ಶಕ್ತಿಯ ನಿರ್ಮೂಲನೆಯನ್ನು ಸೂಚಿಸುತ್ತದೆ. ಇದು ಸಮೃದ್ಧಿ ಮತ್ತು ಅದೃಷ್ಟವನ್ನು ತರುತ್ತದೆ. ಶಾಂತಿ ಮತ್ತು ಸಕಾರಾತ್ಮಕತೆಯನ್ನು ತರಲು ಪ್ರತಿದಿನ ಸಂಜೆ ಈಶಾನ್ಯ ಮೂಲೆಯಲ್ಲಿ ದೀಪ ಅಥವಾ ಮೇಣದಬತ್ತಿಯನ್ನು ಬೆಳಗಿಸಿ. ಜಾಗದ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಲು ಪರಿಮಳಯುಕ್ತ ಮೇಣದಬತ್ತಿಗಳು ಅಥವಾ ಎಣ್ಣೆ ದೀಪಗಳನ್ನು ಬಳಸಿ.
Vastu Tips: ವಾಸ್ತು ಪ್ರಕಾರ ಮನೆಯಲ್ಲಿ ಅಕ್ವೇರಿಯಂ ಎಲ್ಲಿದ್ದರೆ ಒಳ್ಳೆಯದು?
ಅದೃಷ್ಟಕ್ಕಾಗಿ ವಿಂಡ್‌ಚೈಮ್
ವಿಂಡ್‌ಚೈಮ್‌ಗಳು ಮನೆಯಾದ್ಯಂತ ಧನಾತ್ಮಕ ಶಕ್ತಿಯನ್ನು ತರುತ್ತದೆ. ಅದೃಷ್ಟ ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತದೆ. ಅದರ ಸೌಮ್ಯ ಧ್ವನಿಯು ನಿಶ್ಚಲ ಶಕ್ತಿಯನ್ನು ಮನೆಯಿಂದ ಹೊರಹಾಕುತ್ತದೆ. ಮನೆಯ ಜಾಗಕ್ಕೆ ಸಮತೋಲನ ನೀಡುತ್ತದೆ. ಅದೃಷ್ಟ ಮತ್ತು ಸಂಪತ್ತನ್ನು ಆಕರ್ಷಿಸಲು ಮುಖ್ಯ ದ್ವಾರದ ಬಳಿ ಅಥವಾ ವಾಯುವ್ಯ ದಿಕ್ಕಿನಲ್ಲಿ ವಿಂಡ್ ಚೈಮ್‌ಗಳನ್ನು ಇರಿಸಿ. ಉತ್ತರಕ್ಕೆ ಲೋಹದ ವಿಂಡ್ ಚೈಮ್‌ಗಳನ್ನು ಮತ್ತು ಪೂರ್ವ ಅಥವಾ ಆಗ್ನೇಯ ದಿಕ್ಕಿಗೆ ಮರದ ಚೈಮ್‌ಗಳನ್ನು ಆಯ್ದುಕೊಳ್ಳಿ.