Wednesday, 11th December 2024

Vastu Tips: ವಾಸ್ತು ಪ್ರಕಾರ ಮನೆಯಲ್ಲಿ ಅಕ್ವೇರಿಯಂ ಎಲ್ಲಿದ್ದರೆ ಒಳ್ಳೆಯದು?

Vastu Tips

ಮನೆಯೊಳಗೆ ಗಾಜಿನ ಪುಟ್ಟ ಗೂಡಿನಲ್ಲಿ (Placement of Aquarium) ಬಂದಿಯಾಗಿರುವ ಮೀನುಗಳು ಅತ್ತಿಂದಿತ್ತ ಚಲಿಸುತ್ತಿದ್ದರೆ ನೋಡುತ್ತಾ ನಿಲ್ಲಬೇಕು ಎಂದೆನಿಸುತ್ತದೆ. ಮನದಲ್ಲಿ ಒಂದು ರೀತಿಯ ಶಾಂತಿ ನೆಲೆಸುತ್ತದೆ. ಅಕ್ವೇರಿಯಂನಲ್ಲಿರುವ ಮೀನುಗಳು ಮನೆ, ಮನದಲ್ಲಿ ಉಲ್ಲಾಸ ತುಂಬುತ್ತದೆ. ಇದಕ್ಕೆ ಮುಖ್ಯ ಕಾರಣ ವಾಸ್ತು (Vastu Tips) ಕೂಡ ಆಗಿದೆ.

ವಾಸ್ತು ಶಾಸ್ತ್ರದ ಪ್ರಕಾರ ಅಕ್ವೇರಿಯಂಗಳು ಮನೆಯಲ್ಲಿ ಧನಾತ್ಮಕ ವಾತಾವರಣವನ್ನು ಹೆಚ್ಚಿಸುತ್ತದೆ. ಆದರೆ ಅದಕ್ಕೆ ಅವುಗಳನ್ನು ಎಲ್ಲಿ ಇಡಬೇಕು ಎನ್ನುವುದು ಕೂಡ ಮುಖ್ಯವಾಗಿದೆ. ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವಿಗಾಗಿ ಅಕ್ವೇರಿಯಂ ಅನ್ನು ಎಲ್ಲಿ, ಹೇಗೆ ಇರಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹುಮುಖ್ಯ. ಅದಕ್ಕಾಗಿ ಇಲ್ಲಿದೆ ಕೆಲವು ಟಿಪ್ಸ್.

Vastu Tips

ನೈಋತ್ಯ ಮೂಲೆಯಲ್ಲಿ ಇಡಬೇಡಿ

ಅಕ್ವೇರಿಯಂಗಳನ್ನು ಇಡುವಾಗ ನಕಾರಾತ್ಮಕ ಪ್ರದೇಶಗಳನ್ನು ತಪ್ಪಿಸಬೇಕು. ಕೆಲವು ದಿಕ್ಕುಗಳಲ್ಲಿ ಅಕ್ವೇರಿಯಂ ಅನ್ನು ಇರಿಸುವುದು ಅಶಾಂತಿ ಮತ್ತು ಹಣಕಾಸಿನ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ ಮನೆಯಲ್ಲಿ ಅಕ್ವೇರಿಯಂ ಇಡಲು ನೈಋತ್ಯ ಮೂಲೆಯಂತಹ ಸ್ಥಳಗಳನ್ನು ತಪ್ಪಿಸಿ. ಯಾಕೆಂದರೆ ಅದು ನಕಾರಾತ್ಮಕತೆಯನ್ನು ಆಕರ್ಷಿಸುತ್ತದೆ.

ನೈಸರ್ಗಿಕ ಬೆಳಕು ಬೀಳುವಂತಿರಲಿ

ಅಕ್ವೇರಿಯಂ ಅನ್ನು ಮನೆಯಲ್ಲಿ ನೈಸರ್ಗಿಕ ಬೆಳಕು ಬೀಳುವ ಪ್ರದೇಶದಲ್ಲಿ ಇಡುವುದು ಹೆಚ್ಚು ಒಳ್ಳೆಯದು. ಇದು ಮೀನಿನ ಆರೋಗ್ಯವನ್ನು ಉತ್ತೇಜಿಸುವುದು ಮಾತ್ರವಲ್ಲದೆ ಮನೆಯಲ್ಲಿ ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮೀನುಗಳ ಆಯ್ಕೆ ಸರಿಯಾಗಿರಲಿ

ಮನೆಯಲ್ಲಿಡುವ ಅಕ್ವೇರಿಯಂನಲ್ಲಿ ಕೆಂಪು ಮತ್ತು ಕಪ್ಪು ಮೀನುಗಳನ್ನು ಸೇರಿಸಿ. ಈ ಬಣ್ಣಗಳು ಧನಾತ್ಮಕ ಶಕ್ತಿ ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತವೆ ಎಂದು ನಂಬಲಾಗಿದೆ ಹಾಗು ಮನೆಯಲ್ಲಿ ಧನಾತ್ಮಕ ಶಕ್ತಿ ಸಂಚಾರವನ್ನು ಹೆಚ್ಚಿಸುತ್ತದೆ.

Vastu Tips

ಅಡುಗೆ ಮನೆ ಬೇಡ

ಅಕ್ವೇರಿಯಂ ಇಡಲು ಮನೆಯ ಅಡುಗೆ ಕೋಣೆಯನ್ನು ಆಯ್ಕೆ ಮಾಡಿಕೊಳ್ಳಬೇಡಿ. ಅಕ್ವೇರಿಯಂನ ನೀರಿನ ಅಂಶವು ಪೌಷ್ಟಿಕಾಂಶದ ಸಮತೋಲನವನ್ನು ವ್ಯತ್ಯಾಸಗೊಳಿಸುತ್ತದೆ. ಅದು ಮೀನುಗಳ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

Vastu Tips: ಪೊರಕೆಯನ್ನು ಎಲ್ಲೆಂದರಲ್ಲಿ ಇಟ್ಟರೆ ಕಾಡಲಿದೆ ದಾರಿದ್ರ್ಯ!

ಮಲಗುವ ಕೋಣೆ

ಮಲಗುವ ಕೋಣೆಯಲ್ಲಿ ಅಕ್ವೇರಿಯಂ ಇಡುವುದನ್ನು ತಪ್ಪಿಸಿ. ಯಾಕೆಂದರೆ ವೈವಾಹಿಕ ಜೀವನದಲ್ಲಿ ಉದ್ವಿಗ್ನತೆ ಮತ್ತು ಸವಾಲುಗಳನ್ನು ಹೆಚ್ಚಿಸುತ್ತದೆ.