Thursday, 3rd December 2020

ಸರಳ ’ದಸರಾ’ಗೆ ವಿರೋಧ: ಪ್ರತಿಭಟನೆಗೆ ಮುಂದಾದ ವಾಟಾಳ್ ಬಂಧನ

ಮೈಸೂರು : ಬ್ಯಾಂಡ್ ಸೆಟ್ ಜೋಡಿ ಸಾರೋಟಿನಲ್ಲಿ ಮೈಸೂರು ಅರಮನೆ ಮುಂದೆ ದಸರಾ ಮೆರವಣಿಗೆ ನಡೆಸುವ ಮೂಲಕ ಪ್ರತಿಭಟನೆಗೆ ಮುಂದಾಗಿದ್ದರು. ಇಂತಹ ಕನ್ನಡ ಚಳುವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ಬಂಧಿಸಿ ದ್ದಾರೆ.

ಸರ್ಕಾರ ಅತಿ ಸರಳವಾಗಿ ದಸರಾ ಆಚರಣೆ ನಡೆಸುತ್ತಿರುವುದನ್ನು ವಿರೋಧಿಸಿ, ಮೈಸೂರಿನಲ್ಲಿ ಕನ್ನಡ ಚಳುವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಯಾರಿ ನಡೆಸಿದ್ದರು.

ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ಶ್ರೀ ವಾಟಾಳ್ ನಾಗರಾಜ್ ರವರು ದಸರಾ ಹಬ್ಬವನ್ನ ಹಾಗು ಚಾಮುಂಡೇಶ್ವರಿ ತಾಯಿ ಭಾವಚಿತ್ರ ಇಟ್ಟು ಬ್ಯಾಂಡ್ ಸೆಟ್ ಜೋಡಿ ಸಾರೋಟಿನಲ್ಲಿ ಮೈಸೂರು ಅರಮನೆ ಮುಂದೆ ದಸರ ಮೆರವಣಿಗೆ ನಡೆಸಲು ಉದ್ದೇಶಿ ಸಿದ್ದ ವಾಟಾಳ್ ನಾಗರಾಜ್ ಹಾಗು ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೋಲೀಸರು. ಬ್ಯಾಂಡ್ ಸೆಟ್ ಸಾರೋಟು ವಶಕ್ಕೆ ಪಡೆ ದರು.

ಇದರಿಂದ ತೀವ್ರ ಕೆರಳಿದ ವಾಟಾಳ್ ನಾಗರಾಜ್ ರವರು ಸರ್ಕಾರದ ಕ್ರಮವನ್ನ ಖಂಡಿಸಿ ಮುಖ್ಯಮಂತ್ರಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.

Leave a Reply

Your email address will not be published. Required fields are marked *