Thursday, 12th December 2024

Viral Video: ನೆಟ್ಟಿಗರಿಗೆ ಶಾಕ್‌ ಕೊಟ್ಟ ಪಾನ್ ದೋಸಾ! ರೆಸಿಪಿ ಕಂಡು ದೋಸೆಪ್ರಿಯರು ಫುಲ್‌ ಗರಂ!

ನವದೆಹಲಿ: ಪ್ರತಿದಿನವೂ ವಿಚಿತ್ರ ಅಡುಗೆ ರೆಸಿಪಿಗಳ ವಿಡಿಯೋಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತವೆ. ಆದರೆ ಕೆಲವು ರೀತಿಯ ಪ್ರಯೋಗಗಳು ಮಾತ್ರ ಆಹಾರ ಪ್ರೇಮಿಗಳನ್ನು ಆಕರ್ಷಿಸುತ್ತವೆ ಮತ್ತು ತಿನ್ನುವ ಆಸೆಯನ್ನು ಹೆಚ್ಚು ಮಾಡುತ್ತವೆ. ಕೆಲವೊಮ್ಮೆ ಇಂತಹ ಪ್ರಯೋಗಗಳು ಕೆಲವೊಮ್ಮೆ ಆಹಾರ ಪ್ರಿಯರ ಕೋಪಕ್ಕೂ ಗುರಿಯಾಗುತ್ತದೆ. ಇದೀಗ ಸೋಶಿಯಲ್ ಮೀಡಿಯಾದ(social media)ಲ್ಲಿ ವೈರಲ್(Viral Video) ಆಗುತ್ತಿರುವ ಪಾನ್ ದೋಸಾ (Paan Dosa) ವಿಡಿಯೋ(video)ದಲ್ಲಿರುವ ದೋಸೆಯನ್ನು ನೋಡಿದರೆ ನೀವು ಅಚ್ಚರಿಗೊಳ್ಳುವುದು ನಿಶ್ಚಿತ.

ಗರಿಗರಿಯಾದ, ಕುರುಕುಲಾದ ಮತ್ತು ರುಚಿಕರವಾದ, ದೋಸೆ(Dosa)ಯು ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಆಹಾರಗಳಲ್ಲಿ ಒಂದು. ದೋಸೆ ಎಂದರೆ ನೀವು ಯಾವಾಗ ಬೇಕಾದರೂ ತಿನ್ನಬಹುದು ಇದು ಬಹುತೇಕ ಪ್ರತಿಯೊಬ್ಬ ಆಹಾರ ಪ್ರಿಯರಿಗೆ ಇಷ್ಟವಾಗುತ್ತದೆ. ಮೈಸೂರು ಮಸಾಲಾ ದೋಸದಿಂದ ರವಾ ದೋಸೆಯವರೆಗೆ, ಹಲವು ವಿಭಿನ್ನ ದೋಸೆ ರೆಸಿಪಿಗಳನ್ನು ನೀವು ನೋಡಿರಬಹುದು. ಆದರೆ,ವಿಭಿನ್ನ ಹಾಗೂ ವಿಲಕ್ಷಣ ಸಂಯೋಜನೆಯಲ್ಲಿ, ವ್ಯಕ್ತಿಯೊಬ್ಬ ಪಾನ್ ದೋಸೆ ಮಾಡುವ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್(viral) ಆಗುತ್ತಿದ್ದು, ಫ್ಲೋರೊಸೆಂಟ್ ಹಸಿರು ಬಣ್ಣದ ಪಾನ್ ದೋಸೆ ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿದೆ.

ಪುಡ್ ವ್ಲಾಗರ್‌ ಆಗಿರುವ ಡಾ. ಶ್ರಾವಣಿ ಹಾಗೂ ರವಿ ಎಂಬುವವರು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಈ ಪಾನ್ ದೋಸೆಯ ರೀಲ್ ಅನ್ನು ಹಂಚಿಕೊಂಡಿದ್ದು, ಜಸ್ಟಿಸ್ ಫಾರ್ ದೋಸಾ ಎಂದು ಕ್ಯಾಪ್ಷನ್ ನೀಡಿದ್ದಾರೆ. ಎರಡು ನಿಮಿಷಗಳ ವೀಡಿಯೊದಲ್ಲಿ, ಒಬ್ಬ ವ್ಯಕ್ತಿಯು ಹಸಿರು ಹಿಟ್ಟನ್ನು (ವೀಳ್ಯದೆಲೆ ಅಥವಾ ವೀಳ್ಯದೆಲೆಯಿಂದ ತಯಾರಿಸಲಾಗಿರುವ ಪಾನ್‌), ಬಿಸಿ ದೋಸೆ ತವಾ ಮೇಲೆ ಸುರಿಯುತ್ತಾನೆ. ನಂತರ, ಆತ ಹಸಿರು ಹಿಟ್ಟನ್ನುಗೆ ಕೆಲವು ಸಕೆಂಡ್‌ಗಳ ನಂತರ ಹೆಚ್ಚಿನ ಪ್ರಮಾಣದ ಬೆಣ್ಣೆಯನ್ನು ಸೇರಿಸುತ್ತಾನೆ. ನಂತರ, ಕತ್ತರಿಸಿದ ಪಾನ್‌, ಚೆರ್ರಿಗಳು, ಒಣದ್ರಾಕ್ಷಿ, ಏಪ್ರಿಕಾಟ್‌ಗಳು, ಖರ್ಜೂರಗಳು, ಅಂಜೂರದ ಹಣ್ಣುಗಳು, ಟ್ರೂಟಿ ಫ್ರುಟ್ಟಿ ಮತ್ತು ಡ್ರೈ ಫ್ರೂಟ್ಸ್ ಅನ್ನು ಸೇರಿಸುತ್ತಾರೆ. ಅಷ್ಟೇ ಅಲ್ಲ, ಸಾಕಷ್ಟು ಪಾನ್ ಸಿರಪ್ ಕೂಡ ಹಾಕುತ್ತಾನೆ. ಅಲ್ಲದೆ, ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ಬೆರೆಸಿ ದಪ್ಪ ಪೇಸ್ಟ್ ರೀತಿ ಮಾಡಿಕೊಳ್ಳುತ್ತಾನೆ. ಈ ದಪ್ಪ ಪೇಸ್ಟ್ ಅನ್ನು ದೋಸೆ ಎಂದು ಕರೆಯುತ್ತಾನೆ.

ಸೋಷಿಯಲ್ ಮೀಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿರುವ ಈ ವಿಡಿಯೊ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ಜನರು ಈ ವಿಚಿತ್ರ ಕಾಂಬಿನೇಷನ್ ಆದ ಪಾನ್‌ ದೋಸೆಯ ರೆಸಿಪಿ ಕುರಿತು ಪ್ರಶ್ನಿಸಿದ್ದಾರೆ. ಅಲ್ಲದೇ ಇದಕ್ಕೆ ಸಾಕಷ್ಟು ನೆಗೆಟಿವ್ ಕಾಮೆಂಟ್ ಗಳು ಬರುತ್ತಿದ್ದು, .“ಮೇಯನೇಸ್ / ಕೆಚಪ್ ಅನ್ನು ಸೇರಿಸಿ ದೋಸೆ ತಯಾರಿಸಬಹುದಾಗಿತ್ತು ಎಂದು ಬಳಕೆದಾರರೊಬ್ಬರು ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದಾರೆ.

“ಸುಪಾರಿ ಇಲ್ಲದೆ ಇದನ್ನು ನಾನು ತಿನ್ನುತ್ತೇನೆ” ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್‌ ಮಾಡಿದ್ದಾರೆ.“ಉತ್ತರ ಭಾರತದ ಜನರಿಗೆ ಹುಚ್ಚು ಹಿಡಿದಿದೆ, ಅವರು ಪ್ರತಿ ಆಹಾರಕ್ಕೆ ಚೀಸ್ ಮತ್ತು ಬೆಣ್ಣೆಯನ್ನು ಸೇರಿಸುತ್ತಾರೆ,” ಮತ್ತೊಬ್ಬ ಬಳಕೆದಾರರು ಕಾಮೆಂಟ್‌ ಮಾಡಿದ್ದಾರೆ.

ಕೆಲವರು ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ ಹಾಗೂ ‘ವೈವಿಧ್ಯ’ ಎಂಬ ಪದಕ್ಕೆ ಅಪಮಾನ ಮಾಡಲಾಗುತ್ತಿದೆ ಎಂಬ ಹಲವು ನೆಗೆಟಿವ್ ಕಾಮೆಂಟ್ ಗಳು ಬರುತ್ತಿವೆ.ವಿಭಿನ್ನ ಆಹಾರಗಳನ್ನು ಸವಿಯುವ ನಮ್ಮ ಜನರು ಈ ಪಾನ್ ದೋಸೆ ವಿಡಿಯೊ ನೋಡಿ ಅಸಹ್ಯಪಡುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Fahad Ahmad: ಪ್ರಧಾನಿ ಮೋದಿ ಬ್ಯಾಲೆಟ್‌ ಪೇಪರ್‌ ಮೂಲಕ ನಡೆಯೋ ಎಲೆಕ್ಷನ್‌ ಗೆದ್ದರೆ 20 ವರ್ಷ ಚುನಾವಣೆಗೇ ನಿಲ್ಲಲ್ಲ- ಸ್ವರಾ ಭಾಸ್ಕರ್‌ ಪತಿ ಚಾಲೆಂಜ್‌