Tuesday, 5th July 2022

ವಿದ್ಯೆೆಗೆ ವಿನಯವೇ ಭೂಷಣ

*ಆನಂದ ವೀ ಮಾಲಗಿತ್ತಿಮಠ

ಗಾಂಧಾರ ದೇಶದಲ್ಲಿ ಸುಧರ್ಮಮುನಿಗಳು ಎಂಬ ಗುರುಗಳಿದ್ದರು. ಸುತ್ತಮುತ್ತಲಿನ ರಾಜ ಮಹಾರಾಜರ ಮಕ್ಕಳು ಅಲ್ಲಿಗೆ ಬರುತ್ತಿಿದ್ದರು. ಕೋಸಲ ದೇಶದ ರಾಜಕುಮಾರನ ಮಗನಾದ ಚಂದ್ರಶೀಲನೂ ಅಲ್ಲಿಗೆ ಬಂದಿದ್ದನು. ಒಂದು ಮುಂಜಾನೆ ಗುರುಗಳು ಚಂದ್ರಶೀಲ ಮತ್ತು ಆತನ ಸಹಪಾಠಿಯಾದ ವಿನಯಾದಿತ್ಯನನ್ನು ಕರೆದು ವಿಶೇಷ ಗಿಡಮೂಲಿಕೆಗಳನ್ನು ಆಯ್ದು ತರುವಂತೆ ಆಜ್ಞೆ ಮಾಡಿದರು. ಚಂದ್ರಶೀಲನಿಗೆ ಸಂತೋಷವೋ ಸಂತೋಷ. ಒಂದೆರಡು ದಿನಗಳ ಮಟ್ಟಿಿಗಾದರೂ ಈ ವಿದ್ಯಾಾಲಯವೆಂಬ ಸೆರಮನೆಯಿಂದ ತಪ್ಪಿಿಸಿಕೊಳ್ಳಬಹುದೆಂದು ಆಲೋಚಿಸಿದನು.

ಇಬ್ಬರೂ ಮೂರ್ನಾಾಲ್ಕು ಮೈಲುಗಳನ್ನು ನಡೆದರು. ಚಂದ್ರಶೀಲನು ‘ಅಯ್ಯೋ, ನನ್ನ ಕಾಲು ನೋಯ್ತಾಾಯಿವೆ. ನನ್ನಿಿಂದ ನಡೆಯಲಾಗುವುದಿಲ್ಲ’ ಎಂದನು. ವಿನಯಾದಿತ್ಯ ‘ಆ ಬೇವಿನಮರದ ಸ್ವಲ್ಪಹೊತ್ತು ವಿಶ್ರಾಾಂತಿ ತೆಗೆದುಕೊಳ್ಳೋೋಣಾ’ ಎಂದು ಬೇವಿನ ಮರದ ನೆರಳಿನಲ್ಲಿ ಕುಳಿತುಕೊಂಡರು. ಆಗ ಚಂದ್ರಶೀಲ ‘ನಮ್ಮಪ್ಪನಿಗೆ ಬುದ್ದಿಯೇ ಇಲ್ಲ. ನಾನು ಯುವರಾಜ. ನಾಲ್ಕಾಾರು ಆಳುಗಳು ತಲೆತಗ್ಗಿಿಸಿ ಹೇಳಿದ ಕೆಲಸ ಮಾಡುತ್ತಾಾರೆ. ಅಂತಹುದರಲ್ಲಿ ಈ ವಿದ್ಯೆೆಗಳನ್ನು ಕಲಿತು ಏನಾಗಬೇಕು?’ ಎಂದು ತನ್ನ ಸಂಕಟವನ್ನು ತೋಡಿಕೊಂಡನು. ಆಗ ವಿನಯಾದಿತ್ಯನು ‘ನೋಡು ಗೆಳೆಯಾ ಅದೆಷ್ಟೇ ಸಂಪತ್ತಿಿದ್ದರೂ ಯಾರಾದರೂ ಕದಿಯಬಹುದು. ವಿದ್ಯೆೆಯೆಂಬ ಸಂಪತ್ತಿಿದ್ದರೆ ಅದನ್ನು ಯಾರಿಂದಲೂ ಕದಿಯಲಾಗುವುದಿಲ್ಲ’ ಎಂದನು. ದೂರದಲ್ಲಿ ಕುದುರೆಗಾಡಿಯೊಂದು ಬರುತ್ತಿಿರುವುದು ಕಾಣಿಸಿತು.

ಚಂದ್ರಶೀಲ ಕರೆದು ಎಲ್ಲಿಗೆ ಹೋಗುತ್ತಿಿರುವೆ? ಎಂದು ವಿಚಾರಿಸಿದನು. ನಮ್ಮನ್ನೂ ನಿನ್ನ ಕುದುರೆಗಾಡಿಯಲ್ಲಿ ಕರೆದುಕೊಂಡು ಹೋದರೆ ಎರಡು ಬೆಳ್ಳಿಿ ನಾಣ್ಯಗಳನ್ನು ನೀಡುತ್ತೇನೆ ಎಂದನು. ಅದಕ್ಕೆೆ ಕುದುರೆಗಾಡಿಯವನು ಸಮ್ಮತಿಸಿದನು. ಆದರೆ ವಿನಯಾದಿತ್ಯನು ಅಯ್ಯಾಾ..ನನಗೂ ಕುದುರೆಗಾಡಿ ಓಡಿಸುವುದನ್ನು ಕಲಿಸುತ್ತೇನೆ ಎಂದರೆ ಮಾತ್ರ ನಾನು ಗಾಡಿ ಹತ್ತುತ್ತೇನೆ ಎಂದನು. ಓ..ಹಾಗೇ ಆಗಲಿ ಎಂದು ಕುದುರೆಗಾಡಿಯವನು ಅವರಿಬ್ಬರನ್ನೂ ಹತ್ತಿಿಸಿಕೊಂಡನು. ವಿನಯಾದಿತ್ಯನು ಕುದುರೆಗಾಡಿಯನ್ನು ಹೇಗೆ ನಡೆಸಬೇಕು..ಎಡತಿರುವು ಮತ್ತು ಬಲತಿರುವುಗಳಲ್ಲಿ ಹೇಗೆ ನಡೆಸಬೇಕೆಂಬುವುದನ್ನು ಕಲಿತುಕೊಂಡನು.

ಕುದುರೆಗಾಡಿಯವನು ಎರಡು ಬೆಳ್ಳಿಿನಾಣ್ಯಗಳನ್ನು ಪಡೆದು ತಿರುವಿನಲ್ಲಿ ಇವರನ್ನು ಇಳಿಸಿ ಹೊರಟು ಹೋದನು. ಮತ್ತೆೆ ಚಂದ್ರಶೀಲ ಹಾಗೂ ವಿನಯಾದಿತ್ಯರು ಕಾಲ್ನಡಿಗೆಯಲ್ಲಿಯೆ ಉಳಿದ ಪ್ರಯಾಣವನ್ನು ಆರಂಭಿಸಿದರು. ಸ್ವಲ್ಪದೂರದಲ್ಲಿಯೆ ನದಿ ಹರಿಯುವ ಶಬ್ದ ಕೇಳಿ ಬಂದಿತು. ಅವರು ಈಗ ನದಿಯನ್ನು ದಾಟಬೇಕಾಗಿತ್ತು. ಅಲ್ಲೊೊಂದು ತೆಪ್ಪ ಕಾಣಿಸಿತು. ಮರದ ಕೆಳಗೆ ನಿದ್ರಿಿಸುತ್ತಿಿದ್ದ ಅಂಬಿಗನನ್ನು ಕರೆದು, ಎರಡು ಬೆಳ್ಳಿಿಯ ನಾಣ್ಯಗಳನ್ನು ನೀಡುವೆವು ದಯವಿಟ್ಟು ನಮ್ಮನ್ನು ನದಿ ದಾಟಿಸುವೆಯಾ? ಎಂದು ಕೇಳಿದನು. ಅಂಬಿಗ ಅದಕ್ಕೊೊಪ್ಪಿಿ ಅವರಿಬ್ಬರನ್ನು ತೆಪ್ಪದೊಳಗೆ ಕುಳಿತುಕೊಳ್ಳಲು ತಿಳಿಸಿ ನದಿಯೊಳಗೆ ತೆಪ್ಪವನ್ನು ವಿನಯಾದಿತ್ಯನು ಅಯಾ!್ಯ ಅಂಬಿಗ.. ದಯವಿಟ್ಟು ನನಗೂ ತೆಪ್ಪವನ್ನು ನಡೆಸುವುದನ್ನು ಹೇಳಿಕೊಡು ಎಂದಾಗ, ತೆಪ್ಪವನ್ನು ನಡೆಸುವ ಬಗೆಯನ್ನು ವಿವರಿಸಲು ಪ್ರಾಾರಂಭಿಸಿದನು. ಆಗ ವಿನಯಾದಿತ್ಯನು, ಮಿತ್ರ.. ಚಂದ್ರಶೀಲ ನೀನೂ ತೆಪ್ಪ ನಡೆಸುವುದನ್ನು ಕಲಿತುಕೊಳ್ಳು ಬಾ ಎಂದು ಕರೆದನು. ಅದಕ್ಕೆೆ ಚಂದ್ರಶೀಲ ‘ಅದೆಲ್ಲಾಾ ಸಾಧ್ಯವಿಲ್ಲ, ನಾನು ಇಂತಹ ಕೀಳುವಿದ್ಯೆೆಗಳನ್ನೆೆಲ್ಲಾಾ ಕಲಿಯಲು ಬಂದಿಲ್ಲ. ನಾನು ಯುವರಾಜ’ ಎಂದನು.

ನದಿ ದಾಟಿದಾಗ ಗುರುಗಳು ಹೇಳಿದ ಊರು ಬಂದಿತು. ಗಿಡಮೂಲಿಕೆಗಳನ್ನು ಸಂಗ್ರಹಿಸಿ ಮತ್ತೆೆ ಮರುಪ್ರಯಾಣ ಕೈಗೊಂಡು ಎರಡು ನಂತರ ಆಶ್ರಮಕ್ಕೆೆ ಮರಳಿದರು. ಎಲ್ಲರ ವಿದ್ಯಾಾಭ್ಯಾಾಸವೂ ಮುಕ್ತಾಾಯವಾಯಿತು. ಚಂದ್ರಶೀಲನು ತನ್ನ ಅರಮನೆಗೆ ಹಿಂತಿರುಗಿದನು.
ಚಂದ್ರಶೀಲನ ತಂದೆಯ ಆರೋಗ್ಯ ತೀರಾ ಹದಗೆಟ್ಟಿಿತ್ತು. ತಂದೆಯ ಆಸೆಯಂತೆ ಪಂಡಿತರು ಚಂದ್ರಶೀಲನಿಗೆ ಪಟ್ಟಾಾಭಿಷೇಕ ಮಾಡಿದರು. ಕನೌಜದ ದೊರೆ ಚಂದ್ರಶೀಲನ ರಾಜ್ಯದ ಮೇಲೆ ಆಕ್ರಮಣ ಮಾಡಿದನು. ಅವನ ಆಕ್ರಮಣವನ್ನು ಎದುರಿಸಲಾಗದೆ ಚಂದ್ರಶೀಲನ ಸೇನೆ ಸೋತು ಹೋಯಿತು. ಚಂದ್ರಶೀಲ ಕೂಡಲೆ ತನ್ನ ಪ್ರಾಾಣವನ್ನು ಉಳಿಸಿಕೊಳ್ಳಲು ಓಡುವ ನಿರ್ಧಾರ ಮಾಡಿದನು. ಅರಮನೆಯ ಮುಂದೆಯೆ ಕುದುರೆಗಾಡಿ ನಿಂತಿತ್ತು. ಸಾರಥಿಗಾಗಿ ಕೂಗಿದನು. ಯಾರೂ ಕಾಣಲಿಲ್ಲ. ಆ ಸಾರಥಿಯೂ ಶತ್ರುಗಳ ಖಡ್ಕಕ್ಕೆೆ ಬಲಿಯಾಗಿದ್ದನು. ತನಗಂತೂ ಕುದುರೆಗಾಡಿ ನಡೆಸಲು ಬಾರದು.

ಹಾಗೆಯೆ ಬರಿಗಾಲಿನಲ್ಲಿಯೆ ಓಡಿದನು. ಕೆಲ ಮೈಲುಗಳನ್ನು ಕ್ರಮಿಸಿದ ನಂತರ ನದಿಯನ್ನು ದಾಟಬೇಕಾಗಿತ್ತು. ತೆಪ್ಪ ಕಾಣಿಸಿತು. ಕೂಡಲೇ ಅಯ್ಯಾಾ ಅಂಬಿಗನೇ ಯಾರಾದರೂ ಇದ್ದೀರೇನು? ಎಂದು ಕೂಗಿದನು. ಯಾರೂ ಇರಲಿಲ್ಲ. ನಿಸ್ಸಹಾಯಕನಾಗಿ ಕುಳಿತುಕೊಂಡನು. ಅಂದು ವಿನಯಾದಿತ್ಯನ ಮಾತು ಕೇಳಿದ್ದರೆ ನಾನು ಇಂದು ತೆಪ್ಪ ನಡೆಸಿ ನನ್ನ ಪ್ರಾಾಣವನ್ನು ಉಳಿಸಿಕೊಳ್ಳಬಹುದಿತ್ತು. ವಿದ್ಯೆೆ ಕಲಿಯುವಾಗ ಅಹಂಕಾರ ತೋರಿಸಬಾರದು. ವಿದ್ಯೆೆಗೆ ಭೂಷಣ ಎಂದು ತನ್ನ ತಪ್ಪಿಿಗೆ ಪಶ್ಚಾಾತಾಪಪಟ್ಟನು. ಬೆನ್ನಟ್ಟಿಿ ಬಂದ ಶತ್ರು ಸೇನೆಯ ಖಡ್ಗಕ್ಕೆೆ ಬಲಿಯಾದನು.