Sunday, 17th October 2021

‘ವರ್ಷದ ಯುವ ಛಾಯಾಗ್ರಾಹಕ”ಪ್ರಶಸ್ತಿ ಗೆದ್ದ ವಿದ್ಯುನ್ ಹೆಬ್ಬಾರ್

ಲಂಡನ್: ಪ್ರತಿಷ್ಠಿತ ವನ್ಯಜೀವಿ ಛಾಯಾಗ್ರಾಹಕ ಸ್ಪರ್ಧೆ(2021 ರ ಆವೃತ್ತಿ) ಯಲ್ಲಿ ಬೆಂಗಳೂರಿನ 10ರ ವಯಸ್ಸಿನ ಬಾಲಕ ವಿದ್ಯುನ್ ಹೆಬ್ಬಾರ್ ‘ವರ್ಷದ ಯುವ ಛಾಯಾಗ್ರಾಹಕ”ಪ್ರಶಸ್ತಿಗೆ ಭಾಜನ ರಾಗಿದ್ದಾರೆ.

1965 ರಿಂದ ಲಂಡನ್‌ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನಿಂದ ಪ್ರತಿವರ್ಷವೂ ಆಯೋಜಿಸ ಲ್ಪಡುವ ಈ ಸ್ಪರ್ಧೆ ಪ್ರಪಂಚದಾದ್ಯಂತದ 50,000 ಕ್ಕೂ ಹೆಚ್ಚು ಸ್ಪರ್ಧಿಗಳನ್ನು ಆಕರ್ಷಿಸಿತು. ಸ್ಪರ್ಧೆಯು 19 ವಿಭಿನ್ನ ವಿಭಾಗಗಳನ್ನು ಹೊಂದಿತ್ತು, ಹೊಸ ವಿಭಾಗಗಳಾದ “ವೆಟ್ ಲ್ಯಾಂಡ್ಸ್-ದಿ ಬಿಗ್ಗರ್ ಪಿಕ್ಚರ್” ಮತ್ತು “ಓಶಿಯನ್ಸ್ -ದಿ ಬಿಗ್ಗರ್ ಪಿಕ್ಚರ್” ಇದ್ದವು. ವಿಭಿನ್ನ ವಿಭಾಗಗಳ ಜೊತೆಗೆ ವರ್ಷದ ಒಟ್ಟಾರೆ ವನ್ಯಜೀವಿ ಛಾಯಾಗ್ರಾಹಕರನ್ನು ಒಳಗೊಂಡಿತ್ತು.

“ವರ್ಷದ ಯುವ ಛಾಯಾಗ್ರಾಹಕ” ಪ್ರಶಸ್ತಿಯನ್ನು ಭಾರತದ ಬೆಂಗಳೂರಿನ 10 ವರ್ಷದ ಬಾಲಕ ವಿದ್ಯುನ್ ಹೆಬ್ಬಾರ್ ಗೆದ್ದುಕೊಂಡರು. ಸಂಕೀರ್ಣವಾದ ಟೆಂಟ್ ಬಲೆಯ ಜೇಡದ ಚಿತ್ರವನ್ನು ಹಿನ್ನೆಲೆಯಲ್ಲಿ ರಿಕ್ಷಾ ಹಾದುಹೋಗುವ ವೇಳೆ ಹೆಬ್ಬಾರ್ ಸೆರೆ ಹಿಡಿದಿದ್ದರು.

Leave a Reply

Your email address will not be published. Required fields are marked *