ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಲಿಯುಗ ಅಂದ್ರೆ ಇದೇನಾ? ಮಗಳ ಸಂಸಾರ ಮುರಿದು ಅಳಿಯನ ಕೈಹಿಡಿದ ಅತ್ತೆ!

Viral Video: ವಿವಾಹಿತ ಮಹಿಳೆ ಜೊತೆ ಅಪ್ರಾಪ್ತ ಯುವಕನಿಗೆ ಪ್ರೀತಿ, 50 ವರ್ಷ ಅಂಕಲ್ ಅನ್ನು ಮದುವೆಯಾದ ಯುವತಿ ಹೀಗೆ ಅನೇಕ ಘಟನೆಗಳು ವರದಿಯಾಗುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ತೊರೆದು ಪತ್ನಿಯ ತಾಯಿ ಅತ್ತೆಯನ್ನೇ ಮದುವೆಯಾಗಿರುವ ಘಟನೆ ಕಂಡು ಬಂದಿದೆ. ಈ ದಂಪತಿಗಳು ತಮ್ಮ ವಿವಾಹ ಪ್ರಮಾಣಪತ್ರವನ್ನು ಹಿಡಿದುಕೊಂಡು ನಿಂತಿರುವ ವಿಡಿಯೊವೊಂದು ಭಾರೀ ವೈರಲ್ ಆಗಿದೆ.

ಪತ್ನಿಯನ್ನು ತೊರೆದು ಅತ್ತೆಯನ್ನು ಮದುವೆಯಾದ ಕಾನ್ಪುರದ ವ್ಯಕ್ತಿ!

ಮಗಳ ಸಂಸಾರ ಮುರಿದು ಅಳಿಯನ ಕೈಹಿಡಿದ ಅತ್ತೆ -

Profile
Pushpa Kumari Jun 9, 2026 12:55 PM

ಹೊಸ ದೆಹಲಿ,ಜೂ.9: ಇತ್ತೀಚೆಗೆ ಸಂಬಂಧಗಳಿಗೆ ಅರ್ಥವೇ ಇಲ್ಲದಂತೆ ಆಗಿದೆ. ವಿವಾಹಿತ ಮಹಿಳೆ ಜೊತೆ ಅಪ್ರಾಪ್ತ ಯುವಕನಿಗೆ ಪ್ರೀತಿ, 50 ವರ್ಷ ಅಂಕಲ್ ಅನ್ನು ಮದುವೆಯಾದ ಯುವತಿ ಹೀಗೆ ಅನೇಕ ಘಟನೆಗಳು ವರದಿಯಾಗುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ತೊರೆದು ಪತ್ನಿಯ ತಾಯಿ ಅತ್ತೆಯನ್ನೇ ಮದುವೆಯಾಗಿರುವ ಘಟನೆ ಕಂಡು ಬಂದಿದೆ. ಈ ದಂಪತಿಗಳು ತಮ್ಮ ವಿವಾಹ ಪ್ರಮಾಣಪತ್ರವನ್ನು ಹಿಡಿದುಕೊಂಡು ನಿಂತಿರುವ ವಿಡಿಯೊವೊಂದು ಭಾರೀ ವೈರಲ್ (Viral News) ಆಗಿದೆ.

ಮಗಳ ಮದುವೆಯ ನಂತರ ವಿವಾಹಿತ ವ್ಯಕ್ತಿ ಅತ್ತೆಯ ಜೊತೆ ಉತ್ತಮ ಭಾಂದವ್ಯ ಹೊಂದಿದ್ದನು. ಸದ್ಯ ಇವರಿಬ್ಬರ ಮದುವೆ ಇಂಟರ್ನೆಟ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಈ ಜೋಡಿಯು ಮದುವೆ ಸರ್ಟಿಫಿಕೇಟ್ ಹಿಡಿದು ಸಾರ್ವ‌ಜನಿಕರಿಗೆ ತಮ್ಮ ಸಂಬಂಧವನ್ನು ಒಪ್ಪಿಕೊಳ್ಳಬೇಕೆಂದು ಎಂದು ಮನವಿಯನ್ನು ಸಲ್ಲಿಕೆ ಮಾಡಿದ್ದಾರೆ.

ವಿಡಿಯೋ ನೋಡಿ:



ಮಗಳ ಮದುವೆಯ ನಂತರ ಅತ್ತೆ ಮತ್ತು ಅಳಿಯ ನಿಕಟ ಬಾಂಧವ್ಯವನ್ನು ಹೊಂದಿದ್ದರು. ಆದರೆ ಇಲ್ಲಿಯವರೆಗೆ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ. ಈ ಸಂಬಂಧ ಬಗ್ಗೆ ಜನರು ಕಿಡಿಕಾರಿ ದ್ದಾರೆ. ಇಂದು ಕಾಲ ಕೆಟ್ಟು ಹೋಗಿದೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ.. ಅಣ್ಣ - ತಂಗಿ ಮದುವೆ, ಅತ್ತೆ- ಅಳಿಯ ಮದುವೆ ಇಂತಹ ಪರಿಸ್ಥಿತಿ.. ಸಂಬಂಧಗಳಿಗೆ ಗೌರವ ಇಲ್ಲದಂತೆ ಆಗಿದೆ ಎಂದು ಹಲವಾರು ಬಳಕೆದಾರರು ಆಕ್ರೋಶ ಹೊರಹಾಕಿದ್ದಾರೆ.

Viral Video: ಮರೆಯಾದ ಮಾನವೀಯತೆ! ರಸ್ತೆಬದಿಯಲ್ಲಿ ಬಿದ್ದಿದ್ದ ವ್ಯಕ್ತಿಯ ಶೂ ಕದ್ದ ಕಸ ಆಯುವ ವ್ಯಕ್ತಿ

ಈ ವಿಡಿಯೋ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಸಾವಿರಾರು ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಇದನ್ನು ಕಲಿಯುಗ ಎಂದು ಕರೆದಿದ್ದಾರೆ. ಬಳಕೆದಾರರೊಬ್ಬರು ಇದು ತಾಯಿ ತನ್ನ ಮಗಳಿಗೆ ಮಾಡಬಹುದಾದ ಕೆಟ್ಟ ಕೆಲಸಗಳಲ್ಲಿ ಒಂದಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇದೆಂಥಾ ದುರ್ವಿದಿ, ತನ್ನ ಮಗಳಿಗೆ ಮೋಸ ಮಾಡುವ ತಾಯಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.